ಕರ್ನಾಟಕ

karnataka

ETV Bharat / business

ದಿನದಂತ್ಯಕ್ಕೆ ಸೆನ್ಸೆಕ್ಸ್​ 76 ಪಾಯಿಂಟ್‌ ಏರಿಕೆ; ರಿಲಯನ್ಸ್ ಇಂಡಸ್ಟ್ರೀಸ್ ಅತಿ ಹೆಚ್ಚು ಗಳಿಕೆ - ಬಿಎಸ್‌ಇ ಸೆನ್ಸೆಕ್ಸ್

ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಇನ್ಫೋಸಿಸ್​ನಂತಹ ಕಂಪನಿಗಳ ಸೂಚ್ಯಂಕದ ಬಲದಿಂದಾಗಿ ದೇಶೀಯ ಷೇರು ಮಾರುಕಟ್ಟೆಗಳು ತಮ್ಮ ಎಲ್ಲಾ ನಷ್ಟಗಳಿಂದ ಚೇತರಿಸಿಕೊಂಡಿವೆ.

Sensex Rebounds Over 500 Points From Day's Lows; Reliance Industries Top Gainer
Sensex Rebounds Over 500 Points From Day's Lows; Reliance Industries Top Gainer

By

Published : Jun 14, 2021, 7:30 PM IST

Updated : Jun 14, 2021, 8:47 PM IST

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಬಿಎಸ್‌ಇಯಲ್ಲಿ ಪಟ್ಟಿಯಲ್ಲಿ ಶೇ 1.43ರಷ್ಟು ಏರಿಕೆ ಕಂಡು 2,244.90ಕ್ಕೆ ತಲುಪಿ ಅಗ್ರಸ್ಥಾನ ಪಡೆದಿದೆ. ಬಜಾಜ್ ಫೈನಾನ್ಸ್ ಮತ್ತು ಡಾ. ರೆಡ್ಡೀಸ್ ತಲಾ 1-2 ಶೇಕಡಾ ಗಳಿಸಿವೆ.

ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಇನ್ಫೋಸಿಸ್​ನಂತಹ ಕಂಪನಿಗಳ ಸೂಚ್ಯಂಕದ ಬಲದಿಂದಾಗಿ ದೇಶೀಯ ಷೇರು ಮಾರುಕಟ್ಟೆಗಳು ತಮ್ಮ ಎಲ್ಲಾ ನಷ್ಟಗಳಿಂದ ಚೇತರಿಸಿಕೊಂಡಿವೆ.

ದಿನದ ಅಂತ್ಯಕ್ಕೆ ಬಿಎಸ್‌ಇ ಸೆನ್ಸೆಕ್ಸ್ ಸುಮಾರು 76.77 ಪಾಯಿಂಟ್‌ಗಳಷ್ಟು ಏರಿಕೆಯಾಗಿದ್ದು, 52,551.53ರಲ್ಲಿ ವಹಿವಾಟು ನಡೆಸಿದೆ. ಎನ್‌ಎಸ್‌ಇ ನಿಫ್ಟಿ 12.50 ಪಾಯಿಂಟ್ ಏರಿಕೆಯಾಗಿ 15,811.85ಕ್ಕೆ ತಲುಪಿದೆ.

ಕರೆನ್ಸಿ ಮಾರುಕಟ್ಟೆಗಳಲ್ಲಿ, ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯ 14 ಪೈಸೆ ಇಳಿದು 73.21ಕ್ಕೆ ತಲುಪಿದೆ.

Last Updated : Jun 14, 2021, 8:47 PM IST

ABOUT THE AUTHOR

...view details