ಮುಂಬೈ:ಮಂಗಳವಾರದ ವಹಿವಾಟಿನ ಅಂತ್ಯಕ್ಕೆ ಬಿಎಸ್‌ಇ ಬೆಂಚ್‌ಮಾರ್ಕ್ ಸೆನ್ಸೆಕ್ಸ್ 1,197 ಅಂಕ ಹಾಗೂ ನಿಫ್ಟಿ 366 ಅಂಕಗಳಷ್ಟು ಏರಿಕೆಯಾಗಿದೆ.
ನಿನ್ನೆ ಮಂಡನೆಯಾದ ಕೇಂದ್ರ ಬಜೆಟ್ನಲ್ಲಿ ಮೂಲಸೌಕರ್ಯ ಹಾಗೂ ಇತರ ಯೋಜನೆಗಳ ಘೋಷಣೆಯಿಂದ ಷೇರುಮಾರುಕಟ್ಟೆಯಲ್ಲಿ ಗೂಳಿಯ ಓಟ ಮುಂದುವರಿದಿದೆ. ಸೋಮವಾರ ದಾಖಲೆಯ 2314 ಅಂಕಗಳ ಜಿಗಿತ ಕಂಡ ಸೆನ್ಸೆಕ್ಸ್, ಇಂದು ಅದೇ ಆವೇಗ ಕಾಯ್ದುಕೊಂಡಿದೆ.
ಮುಂಬೈ ಷೇರು ಸೂಚ್ಯಂಖ ಸೆನ್ಸೆಕ್ಸ್ 1,197.11 ಅಂಕ ಅಥವಾ ಶೇ 2.46ರಷ್ಟು ಹೆಚ್ಚಳವಾಗಿ 49,797.72 ಅಂಕಗಳ ಮಟ್ಟದಲ್ಲೂ ನಿಫ್ಟಿ 366.65 ಅಂಕ ಅಥವಾ ಶೇ 2.57ರಷ್ಟು ಮುನ್ನಡೆ ಸಾಧಿಸಿ 14,647.85 ಅಂಗಳ ಮಟ್ಟದಲ್ಲಿ ಕೊನೆಗೊಂಡಿತು.