ಕರ್ನಾಟಕ

karnataka

ETV Bharat / business

ದೇಶಾದ್ಯಂತ ಅನ್​ಲಾಕ್ 0.5 ಜಾರಿ: 629 ಅಂಕ ಜಿಗಿತ ಕಂಡ ಸೆನ್ಸೆಕ್ಸ್​ - ಎನ್​ಎಸ್​ಇ

ಗುರುವಾರದ ವಹಿವಾಟಿನಂದು 30 ಷೇರುಗಳ ಮುಂಬೈ ಸೂಚ್ಯಂಕ ಬಿಎಸ್‌ಇ 629.12 ಅಂಕ ಏರಿಕೆ ಕಂಡು 38,697.05 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 169.40 ಅಂಕ ಜಿಗಿದು 11,416.95 ಅಂಗಳ ಮಟ್ಟದಲ್ಲಿ ಕೊನೆಗೊಂಡಿತು.

Sensex
ಸೆನ್ಸೆಕ್ಸ್

By

Published : Oct 1, 2020, 5:08 PM IST

ಮುಂಬೈ:ದೇಶಾದ್ಯಂತ ಅನ್​ಲಾಕ್​ -5 ಜಾರಿ ಆಗುತ್ತಿದ್ದಂತೆ ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಗುರುವಾರದ ವಹಿವಾಟಿನಂದು 629 ಅಂಕಗಳ ಏರಿಕೆ ದಾಖಲಿಸಿದೆ.

30 ಷೇರುಗಳ ಮುಂಬೈ ಸೂಚ್ಯಂಕ ಬಿಎಸ್‌ಇ 629.12 ಅಂಕ ಏರಿಕೆ ಕಂಡು 38,697.05 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 169.40 ಅಂಕ ಜಿಗಿದು 11,416.95 ಅಂಗಳ ಮಟ್ಟದಲ್ಲಿ ಕೊನೆಗೊಂಡಿತು.

ಇಂಡಸ್ಇಂಡ್ ಬ್ಯಾಂಕ್ ಷೇರು ಮೌಲ್ಯದಲ್ಲಿ ಶೇ 12 ರಷ್ಟು ಏರಿಕೆಯಾಗಿ ಅತ್ಯಧಿಕ ಗಳಿಕೆ ದಾಖಲಿಸಿತು. ಬಜಾಜ್ ಫೈನಾನ್ಸ್, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಟೆಕ್ ಮಹೀಂದ್ರಾ, ಬಜಾಜ್ ಫಿನ್‌ಸರ್ವ್ ಮತ್ತು ಕೊಟಾಕ್ ಬ್ಯಾಂಕ್ ನಂತರದ ಸ್ಥಾನದಲ್ಲಿವೆ. ಮತ್ತೊಂದೆಡೆ, ಐಟಿಸಿ, ಎನ್‌ಟಿಪಿಸಿ, ಟೈಟಾನ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಒಎನ್‌ಜಿಸಿ ಗಳಿಕೆಯಲ್ಲಿ ಹಿಂದುಳಿದವು.

ಸಕಾರಾತ್ಮಕ ಜಾಗತಿಕ ಸೂಚನೆಗಳು ಮತ್ತು ನಿರೀಕ್ಷೆಗಿಂತ ಉತ್ತಮವಾದ ದೇಶೀಯ ಪಿಎಂಐ ಉತ್ಪಾದನಾ ದತ್ತಾಂಶಗಳ ನಡೆಯನ್ನು ಅನುಸರಿಸಿದ ದೇಶೀಯ ಮಾರುಕಟ್ಟೆಯು ಸಕಾರಾತ್ಮಕವಾಗಿ ತನ್ನ ವಹಿವಾಟು ತೆರೆದುಕೊಂಡು ಏರಿಕೆಯೊಂದಿಗೆ ಕೊನೆಗೊಳಿಸಿದವು ಎಂದು ಆನಂದ್ ರಾತಿ ಷೇರುಗಳ ಮುಖ್ಯಸ್ಥ ಈಕ್ವಿಟಿ ರಿಸರ್ಚ್ ನರೇಂದ್ರ ಸೋಲಂಕಿ ಹೇಳಿದರು.

ಸೆಪ್ಟೆಂಬರ್‌ನಲ್ಲಿ ಸತತ ಎರಡನೇ ತಿಂಗಳು ಭಾರತದ ಉತ್ಪಾದನಾ ವಲಯದ ಚಟುವಟಿಕೆಯು ಸುಧಾರಿಸಿದೆ. ಪ್ರಮುಖ ಎಂಟು ಉತ್ಪಾದನಾ ಸಂಸ್ಥೆಗಳು ತಮ್ಮ ಸಿಬ್ಬಂದಿ ಸಂಖ್ಯೆ ಕಡಿಮೆಗೊಳಿಸಿದ್ದರೂ ಸಹ ಹೊಸ ಆರ್ಡರ್​ ಮತ್ತು ಉತ್ಪಾದನೆಯಲ್ಲಿನ ವೇಗದ ಹೆಚ್ಚಳದಿಂದ ಒಂದೂವರೆ ವರ್ಷಗಳ ಗರಿಷ್ಠ ಮಟ್ಟ ತಲುಪಿದೆ.

ಕಡಿಮೆ ನಿರ್ಬಂಧಗಳ ಜತೆ ಹೆಚ್ಚುವರಿ ವಿನಾಯಿತಿಯ ಆರ್ಥಿಕತೆ ಪ್ರಾರಂಭಿಸಲು ಸರ್ಕಾರವು ತನ್ನ ಅನ್ಲಾಕ್ 5 ಯೋಜನೆ ಅಡಿಯಲ್ಲಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇದು ಕೂಡ ಹೂಡಿಕೆದಾರರ ಮನೋಭಾವದ ಮೇಲೆ ಸಕರಾತ್ಮ ಪರಿಣಾಮ ಬೀರಿದೆ.

ಟೋಕಿಯೊ ಸ್ಟಾಕ್ ಎಕ್ಸ್​ಚೇಂಜ್ ಹಿಂದಿನ ದಿನದ ತಾಂತ್ರಿಕ ದೋಷದಿಂದ ವಹಿವಾಟು ಸ್ಥಗಿತಗೊಳಿಸಿತು. ಶಾಂಘೈ, ಹಾಂಕಾಂಗ್​​​ ಮತ್ತು ಸಿಯೋಲ್‌ ಮಾರುಕಟ್ಟೆಗಳನ್ನು ರಜಾ ಪ್ರಯುಕ್ತ ಮುಚ್ಚಲಾಯಿತು.

ABOUT THE AUTHOR

...view details