ಕರ್ನಾಟಕ

karnataka

ETV Bharat / business

RBI ಬಡ್ಡಿದರ ಘೋಷಣೆ ಬೆನ್ನಲ್ಲೇ ಸೆನ್ಸೆಕ್ಸ್​ ದಾಖಲೆ ಏರಿಕೆ: ಇತಿಹಾಸದಲ್ಲಿ ಇದೇ ಮೊದಲು! - repo rate imapact on share market

ದಿನದ ವಹಿವಾಟಿನ ಅಂತ್ಯದ ವೇಳೆಗೆ ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್​ 446.90 ಅಂಕ ಏರಿಕೆಯಾಗಿ 45,079.55 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 124.65 ಅಂಕ ಹೆಚ್ಚಳವಾಗಿ 13,258.55 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು. ಇದು ಷೇರುಪೇಟೆಯ ಸಾರ್ವಕಾಲಿಕ ಗರಿಷ್ಠ ಏರಿಕೆಯಾಗಿದೆ.

Sensex
ಸೆನ್ಸೆಕ್ಸ್​

By

Published : Dec 4, 2020, 4:55 PM IST

ಮುಂಬೈ: ಆರ್‌ಬಿಐನ ವಿತ್ತೀಯ ನೀತಿ ಸಮಿತಿಯ ಫಲಿತಾಂಶದ ನಂತರ ಹಣಕಾಸು ಷೇರುಗಳಲ್ಲಿ ಕಂಡುಬಂದ ವ್ಯಾಪಕ ಖರೀದಿ ಮನೋಭಾವಕ್ಕೆ ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಶುಕ್ರವಾರದ ವಹಿವಾಟಿನಂದು ದಾಖಲೆಯ ಏರಿಕೆ ದಾಖಲಿಸಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ಹೆಚ್ಚಿನ ಹಣದುಬ್ಬರದ ಮಧ್ಯೆ ಸತತ ಮೂರನೇ ಬಾರಿಗೆ ಬಡ್ಡಿದರಗಳನ್ನು (ರೆಪೋ ದರ ಶೇ 4ರಷ್ಟು & ರಿವರ್ಸ್​ ರೆಪೋ ದರ ಶೇ 3.35ರಷ್ಟು) ಬದಲಿಸದೆ ಯಥಾವತ್ತಾಗಿ ಇರಿಸಿಕೊಂಡಿದೆ. ದೇಶದಲ್ಲಿ ಆರ್ಥಿಕತೆಯು ವೇಗವಾಗಿ ಚೇತರಿಸಿಕೊಳ್ಳುತ್ತಿದೆ. ಪ್ರಸಕ್ತ ತ್ರೈಮಾಸಿಕದಲ್ಲಿಯೇ ಸಕಾರಾತ್ಮಕ ಬೆಳವಣಿಗೆಗೆ ಮತ್ತೆ ಮರಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ.

ದಿನದ ವಹಿವಾಟಿನ ಅಂತ್ಯದ ವೇಳೆಗೆ ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್​ 446.90 ಅಂಕ ಏರಿಕೆಯಾಗಿ 45,079.55 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 124.65 ಅಂಕ ಹೆಚ್ಚಳವಾಗಿ 13,258.55 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು. ಇದು ಷೇರುಪೇಟೆಯ ಸಾರ್ವಕಾಲಿಕ ಗರಿಷ್ಠ ಎರಿಕೆಯಾಗಿದೆ.

ಓದಿ:ತಾನೇ ಕತ್ತೆ, ಬೀದಿ ನಾಯಿ ಮಾರಿ, ಜಗತ್ತಿನ ಆರ್ಥಿಕ ಚೇತರಿಕೆಗೆ ಟಿಪ್ಸ್​ ಕೊಟ್ಟ ಪಾಕ್ ಪ್ರಧಾನಿ ಇಮ್ರಾನ್​!

ಬಡ್ಡಿದರ ಪ್ರಕಟಣೆಯ ನಂತರ ಬ್ಯಾಂಕಿಂಗ್, ಹಣಕಾಸು, ರಿಯಾಲ್ಟಿ ಮತ್ತು ಆಟೋ ಷೇರುಗಳ ಖರೀದಿ ಭರಾಟೆ ಕಂಡುಬಂತು. ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಐಸಿಐಸಿಐ ಬ್ಯಾಂಕ್ ಶೇ ರಷ್ಟು ಏರಿಕೆ ಕಂಡಿದ್ದು, ಅಲ್ಟ್ರಾಟೆಕ್ ಸಿಮೆಂಟ್, ಸನ್ ಫಾರ್ಮಾ, ಭಾರ್ತಿ ಏರ್‌ಟೆಲ್, ಎಚ್‌ಯುಎಲ್, ಎಸ್‌ಬಿಐ, ಎಲ್ & ಟಿ, ಆಕ್ಸಿಸ್ ಬ್ಯಾಂಕ್ ಮತ್ತು ಇಂಡಸ್‌ಇಂಡ್ ಬ್ಯಾಂಕ್ ನಂತರದ ಸ್ಥಾನದಲ್ಲಿದೆ. ಮತ್ತೊಂದೆಡೆ ರಿಲಯನ್ಸ್ ಇಂಡಸ್ಟ್ರೀಸ್, ಬಜಾಜ್ ಫಿನ್‌ಸರ್ವ್, ಎಚ್‌ಸಿಎಲ್ ಟೆಕ್ ಮತ್ತು ಎಚ್‌ಡಿಎಫ್‌ಸಿ ಹಿನ್ನಡೆ ಕಂಡವು.

ABOUT THE AUTHOR

...view details