ಮುಂಬೈ:ಜಾಗತಿಕ ಮಾರುಕಟ್ಟೆಯಲ್ಲಿ ಸಕಾರಾತ್ಮಕ ಪ್ರವೃತ್ತಿಯ ಮಧ್ಯೆ ಇನ್ಫೋಸಿಸ್, ಎಚ್‌ಯುಎಲ್ ಮತ್ತು ಟಿಸಿಎಸ್ ಷೇರುಗಳು ಲಾಭ ಗಳಿಸುವ ಮೂಲಕ ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಬುಧವಾರ 437 ಅಂಕ ಏರಿಕೆ ದಾಖಲಿಸಿದೆ.
30 ಷೇರುಗಳ ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ 437.49 ಅಂಕ ಅಥವಾ ಶೇ 0.95ರಷ್ಟು ಏರಿಕೆ ಕಂಡು 46,444.18 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 134.80 ಅಂಕ ಅಥವಾ ಶೇ 1ರಷ್ಟು ಏರಿಕೆ ಕಂಡು 13,601.10 ಅಂಕಗಳ ಮಟ್ಟದಲ್ಲೂ ಇಂದಿನ ವ್ಯವಹಾರ ಮುಗಿಸಿತು.
ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಎಚ್‌ಯುಎಲ್ ಅಗ್ರಸ್ಥಾನಗಳಿಸಿ ಶೇ.3ರಷ್ಟು ಏರಿಕೆ ಕಂಡಿದೆ. ನಂತರದ ಸ್ಥಾನದಲ್ಲಿ ಇನ್ಫೋಸಿಸ್, ಎಂ&ಎಂ, ಐಟಿಸಿ, ಎಸ್‌ಬಿಐ, ಇಂಡಸ್ಇಂಡ್ ಬ್ಯಾಂಕ್, ಬಜಾಜ್ ಫೈನಾನ್ಸ್, ಏಷ್ಯನ್ ಪೇಂಟ್ಸ್, ಟಿಸಿಎಸ್ ಮತ್ತು ಭಾರ್ತಿ ಏರ್‌ಟೆಲ್ ಸೇರಿವೆ. ಮತ್ತೊಂದೆಡೆ ಟೈಟಾನ್, ಪವರ್‌ಗ್ರಿಡ್ ಮತ್ತು ಎನ್‌ಟಿಪಿಸಿ ಷೇರು ಗರಿಷ್ಠ ಕುಸಿತ ಕಂಡವು.
ಓದಿ:16 ದಿನವಾದರೂ ಸ್ಥಿರವಾಗಿ ನಿಂತ ಪೆಟ್ರೋಲ್, ಡೀಸೆಲ್ ದರ: ಕಾರಣವೇನು ಗೊತ್ತೇ?
ಅಮೆರಿಕ ಸರ್ಕಾರದ ಆರ್ಥಿಕ ಉತ್ತೇಜಕ ಮಸೂದೆ, ಭಾರತ ಸೇರಿದಂತೆ ಉದಯೋನ್ಮುಖ ಮಾರುಕಟ್ಟೆಗಳಿಗೆ ಸಾಕಷ್ಟು ಬೆಂಬಲ ನೀಡುತ್ತಲೇ ಇತ್ತು. ಆದರೆ, ಹೊಸ ಕೊರೊನಾ ವೈರಸ್ ರೂಪಾಂತರದ ಸುದ್ದಿಯು ಉದಯೋನ್ಮುಖ ಮಾರುಕಟ್ಟೆಗಳ ಮೇಲೆ ಒತ್ತಡ ಉಂಟುಮಾಡಿತು. ಇದರ ಅಪಾಯ ಅರಿತ ಹೂಡಿಕೆದಾರರು ಐಟಿ, ಫಾರ್ಮಾ ಮತ್ತು ಎಫ್‌ಎಂಸಿಜಿ ಸೇರಿದಂತೆ ರಕ್ಷಣಾತ್ಮಕ ಕ್ಷೇತ್ರಗಳತ್ತ ದೃಷ್ಟಿಹಾಯಿಸಿದ್ದಾರೆ ಎಂದು ರಿಲಯನ್ಸ್ ಸೆಕ್ಯುರಿಟೀಸ್‌ನ ಮುಖ್ಯ ಸ್ಟ್ರಾಟಜಿ ಬಿನೋದ್ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ವಿವಿಧ ದೇಶಗಳಲ್ಲಿ ಹೊಸ ಆರ್ಥಿಕ ನಿರ್ಬಂಧಗಳು ಮತ್ತು ಹೊಸ ವೈರಸ್ನ ಒತ್ತಡವು ಹೂಡಿಕೆದಾರರ ಮನೋಭಾವ ಬದಲಾಯಿಸುತ್ತಿದೆ. ಹೊಸ ವೈರಸ್ ಪ್ರಕರಣಗಳಲ್ಲಿ ಸ್ಥಿರವಾದ ಕಡಿತ ಮತ್ತು ಚೇತರಿಕೆಯ ಪ್ರಮಾಣವು ಭಾರತವನ್ನು ಈಗಲೂ ಉತ್ತಮ ಸ್ಥಾನದಲ್ಲಿ ಇರುವಂತೆ ಮಾಡಿದೆ ಎಂದರು.
ಏಷ್ಯಾದ ಶಾಂಘೈ, ಸಿಯೋಲ್, ಹಾಂಗ್ ಕಾಂಗ್ ಮತ್ತು ಟೋಕಿಯೊದಲ್ಲಿ ಬೋರ್ಸಸ್ ಪೇಟೆಗಳು ರೆಡ್ ವಲಯದಲ್ಲಿ ಕೊನೆಗೊಂಡವು.