ಕರ್ನಾಟಕ

karnataka

ETV Bharat / business

ಸೋತು ಗೆದ್ದ ಮುಂಬೈ ಗೂಳಿ: ಬೆಳಗ್ಗೆ 500 ಅಂಕ ಕುಸಿದು ಸಂಜೆ 374 ಅಂಕ ಜಿಗಿದ ಸೆನ್ಸೆಕ್ಸ್​ - ಷೇರು ಮಾರುಕಟ್ಟೆ ಕ್ಲೋಸಿಂಗ್ ಬೆಲ್

ಆರಂಭಿಕ ವಹಿವಾಟಿನಲ್ಲಿ 501 ಅಂಕ ಕುಸಿತದ ನಂತರ, 30 ಷೇರುಗಳ ಬಿಎಸ್‌ಇ ಸೂಚ್ಯಂಕವು ಎಲ್ಲಾ ನಷ್ಟ ಬದಿಗಿಟ್ಟು ದಿನದ ಅಂತ್ಯಕ್ಕೆ 374.87 ಅಂಕ ಅಥವಾ ಶೇ 0.79ರಷ್ಟು ಹೆಚ್ಚಳವಾಗಿ 48,080.67 ಅಂಕಗಳಿಗೆ ತಲುಪಿದೆ. ಎಚ್‌ಡಿಎಫ್‌ಸಿ, ಬಜಾಜ್ ಆಟೋ, ಎಚ್‌ಡಿಎಫ್‌ಸಿ ಬ್ಯಾಂಕ್, ಎಸ್‌ಬಿಐ, ಕೊಟಕ್ ಬ್ಯಾಂಕ್ ಮತ್ತು ಬಜಾಜ್ ಫೈನಾನ್ಸ್ ಟಾಪ್​ ಗೇನರ್​​ಗಳಾದರೇ ಟೈಟಾನ್, ಎಚ್‌ಯುಎಲ್, ಏಷ್ಯಾನ್ ಪೆಯಿಂಟ್ಸ್, ಟೆಕ್ ಮಹೀಂದ್ರಾ ಮತ್ತು ನೆಸ್ಲೆ ಇಂಡಿಯಾ ಟಾಪ್​ ಲೂಸರ್ಗಳಾದರು.

Sensex
Sensex

By

Published : Apr 22, 2021, 4:49 PM IST

ಮುಂಬೈ: ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್​ -19 ಪ್ರಕರಣಗಳ ಹೊರತಾಗಿಯೂ ಇಂಡೆಕ್ಸ್ ಮೇಜರ್​ಗಳಾದ ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಕೊಟಕ್ ಬ್ಯಾಂಕ್​ಗಳ ಲಾಭದಿಂದಾಗಿ ಸೆಕ್ಸೆಕ್ಸ್ ಗುರುವಾರದ ವಹಿವಾಟಿನಂದು 375 ಅಂಕ ಏರಿಕೆಯಾಗಿದೆ.

ಆರಂಭಿಕ ವಹಿವಾಟಿನಲ್ಲಿ 501 ಅಂಕ ಕುಸಿತದ ನಂತರ, 30 ಷೇರುಗಳ ಬಿಎಸ್‌ಇ ಸೂಚ್ಯಂಕವು ಎಲ್ಲ ನಷ್ಟ ಬದಿಗಿಟ್ಟು ದಿನದ ಅಂತ್ಯಕ್ಕೆ 374.87 ಅಂಕ ಅಥವಾ ಶೇ 0.79ರಷ್ಟು ಹೆಚ್ಚಳವಾಗಿ 48,080.67 ಅಂಕಗಳಿಗೆ ತಲುಪಿದೆ.

ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 109.75 ಅಂಕ ಅಥವಾ ಶೇ 0.77ರಷ್ಟು ಜಿಗಿದು 14,406.15 ಅಂಕಗಳ ಮಟ್ಟಕ್ಕೆ ತಲುಪಿದೆ. ಸೆನ್ಸೆಕ್ಸ್ ವಿಭಾಗದಲ್ಲಿ ಐಸಿಐಸಿಐ ಬ್ಯಾಂಕ್ ಶೇ 3ರಷ್ಟು ಏರಿಕೆ ಕಂಡಿದ್ದು, ಎಚ್‌ಡಿಎಫ್‌ಸಿ, ಬಜಾಜ್ ಆಟೋ, ಎಚ್‌ಡಿಎಫ್‌ಸಿ ಬ್ಯಾಂಕ್, ಎಸ್‌ಬಿಐ, ಕೊಟಕ್ ಬ್ಯಾಂಕ್ ಮತ್ತು ಬಜಾಜ್ ಫೈನಾನ್ಸ್ ಟಾಪ್​ ಗೇನರ್​​ಗಳಾದವು.

ಮತ್ತೊಂದೆಡೆ ಟೈಟಾನ್, ಎಚ್‌ಯುಎಲ್, ಏಷ್ಯನ್ ಪೇಂಟ್ಸ್, ಟೆಕ್ ಮಹೀಂದ್ರಾ ಮತ್ತು ನೆಸ್ಲೆ ಇಂಡಿಯಾ ಟಾಪ್​ ಲೂಸರ್ ಗಳಾದರು.

ಹೂಡಿಕೆದಾರರು ವ್ಯಾಕ್ಸಿನೇಷನ್ ಯೋಜನೆಯ ಆಧಾರ ಕೇಂದ್ರೀಕೃತವಾಗಿದ್ದರು. ದೇಶವು ಅತ್ಯಧಿಕ ದೈನಂದಿನ ಕೋವಿಡ್​ ಕೇಸ್​ ದಾಖಲಿಸಿದರೂ ಮಾರುಕಟ್ಟೆಗಳು ಸಕಾರಾತ್ಮಕ ಟಿಪ್ಪಣಿಯಲ್ಲಿ ಕೊನೆಗೊಂಡಿವೆ ಎಂದು ಎಲ್​ಕೆಪಿ ಸೆಕ್ಯುರಿಟೀಸ್ ಸಂಶೋಧನಾ ವಿಭಾಗದ ಮುಖ್ಯಸ್ಥ ಎಸ್ ರಂಗನಾಥನ್ ಹೇಳಿದ್ದಾರೆ.

ಹಣಕಾಸಿನ ತೀವ್ರ ಕುಸಿತ ಮತ್ತು ಅನುಕೂಲಕರ ಜಾಗತಿಕ ಸೂಚನೆಗಳು ಮಾರುಕಟ್ಟೆಯ ಮರುಕಳಿಕೆಯನ್ನು ಬೆಂಬಲಿಸಿದವು ಎಂದು ರಿಲಯನ್ಸ್ ಸೆಕ್ಯುರಿಟೀಸ್‌ನ ಕಾರ್ಯತಂತ್ರದ ಮುಖ್ಯಸ್ಥ ಬಿನೋದ್ ಮೋದಿ ಹೇಳಿದರು.

ಎಫ್‌ಎಂಸಿಜಿ ಮತ್ತು ಐಟಿ ಹೊರತುಪಡಿಸಿ ಬಹುತೇಕ ಪ್ರಮುಖ ವಲಯ ಸೂಚ್ಯಂಕಗಳು ಸಕಾರಾತ್ಮಕವಾಗಿ ವಹಿವಾಟು ನಡೆಸಿದವು. ಕಳೆದ ಒಂದೆರಡು ದಿನಗಳಲ್ಲಿ ತೀಕ್ಷ್ಣವಾದ ಏರಿಳಿತ ಕಂಡ ನಂತರ, ಇಂದು ಅನೇಕ ಫಾರ್ಮಾ ಕಂಪನಿಗಳಲ್ಲಿ ಲಾಭದ ಬುಕ್ಕಿಂಗ್​ ಕಂಡು ಬಂದಿದೆ. ಚಂಚಲತೆ ಸೂಚ್ಯಂಕವು ಸುಮಾರು 3 ಪ್ರತಿಶತದಷ್ಟು ಗಟ್ಟಿಯಾಗಿದೆ ಎಂದರು.

ಭಾರತವು ಒಂದೇ ದಿನದಲ್ಲಿ 3.14 ಲಕ್ಷ ಹೊಸ ಕೊರೊನಾ ಪ್ರಕರಣಗಳನ್ನು ದಾಖಲಿಸಿದೆ. ಇದು ಯಾವುದೇ ದೇಶದಲ್ಲಿ ದಾಖಲಾದ ಅತಿ ಹೆಚ್ಚು ಏಕದಿನ ಎಣಿಕೆಯಾಗಿದೆ. ದೇಶದ ಒಟ್ಟು ಕೋವಿಡ್​-19 ಪ್ರಕರಣಗಳ ಸಂಖ್ಯೆ 1,59,30,965ಕ್ಕೆ ತಲುಪಿದೆ.

ಎರಡನೇ ಅಲೆಯಿಂದ ಉಂಟಾದ ಆಮ್ಲಜನಕ ಬಿಕ್ಕಟ್ಟು ಹತ್ತಾರು ಜನರನ್ನು ಆಸ್ಪತ್ರೆಗೆ ದಾಖಲಿಸುವಂತೆ ಮಾಡಿದೆ. ಹಲವು ರಾಜ್ಯಗಳಿಂದ ಕೊರತೆಯ ದೂರುಗಳು ತೀವ್ರಗೊಂಡಿವೆ.

ಏಷ್ಯಾದ ಹಾಂಕಾಂಗ್, ಸಿಯೋಲ್ ಮತ್ತು ಟೋಕಿಯೊ ಪೇಟೆಗಳು ಸಕಾರಾತ್ಮಕ ನೋಟ್ಸ್​ನೊಂದಿಗೆ ಕೊನೆಗೊಂಡರೆ, ಶಾಂಘೈ ಕೆಂಪು ಬಣ್ಣದಲ್ಲಿದೆ.

ಯುರೋಪ್​ನ ಮಾರುಕಟ್ಟೆಗಳು ಮಧ್ಯಂತರ ಅವಧಿಯಲ್ಲಿ ಲಾಭದೊಂದಿಗೆ ವ್ಯಾಪಾರ ಮಾಡುತ್ತಿತ್ತು. ಅಂತಾರಾಷ್ಟ್ರೀಯ ತೈಲ ಮಾನದಂಡವಾದ ಬ್ರೆಂಟ್ ಕಚ್ಚಾ ಬ್ಯಾರೆಲ್‌ಗೆ ಶೇ 0.51ರಷ್ಟು ಕಡಿಮೆಯಾಗಿ 64.99 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ.

ABOUT THE AUTHOR

...view details