ಕರ್ನಾಟಕ

karnataka

ETV Bharat / business

ದೊಡ್ಡಣ್ಣ ಗಾದಿಗೆ ಟ್ರಂಪ್ - ಬಿಡನ್ ಮಧ್ಯೆ​ ಜಂಗಿಕುಸ್ತಿ​: ಮುಂಬೈನಲ್ಲಿ ಕರಡಿ ಮೇಲೆ ಗೂಳಿ ಸವಾರಿ!

ಬುಧವಾರದ ವಹಿವಾಟಿನಂದು ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್ 355.01 ಅಂಕ ಏರಿಕೆಯಾಗಿ 40,616.14 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 95 ಅಂಕ ಏರಿಕೆಯಾಗಿ 11,908.50 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು.

Sensex
ಸೆನ್ಸೆಕ್ಸ್ಸ್

By

Published : Nov 4, 2020, 4:39 PM IST

ಮುಂಬೈ: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶಕ್ಕೂ ಮುನ್ನ ಜಾಗತಿಕ ಮಾರುಕಟ್ಟೆಗಳಲ್ಲಿ ಸಕಾರಾತ್ಮಕ ಪ್ರವೃತ್ತಿ ಕಂಡು ಬಂದಿದ್ದು, ದೇಶಿ ಪೇಟೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್, ಇನ್ಫೋಸಿಸ್ ಮತ್ತು ಕೊಟಕ್ ಬ್ಯಾಂಕ್​ಗಳ ಲಾಭದ ಗಳಿಕೆ ನಂತರು ಸೆನ್ಸೆಕ್ಸ್ ಏರಿಕೆ ದಾಖಲಿಸಿದೆ.

ಬುಧವಾರದ ವಹಿವಾಟಿನಂದು ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್ 355.01 ಅಂಕ ಏರಿಕೆಯಾಗಿ 40,616.14 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 95 ಅಂಕ ಏರಿಕೆಯಾಗಿ 11,908.50 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು.

ಸೆನ್ಸೆಕ್ಸ್​ನಲ್ಲಿ ಇಂಡಸ್‌ಇಂಡ್ ಬ್ಯಾಂಕ್ ಶೇ 5ರಷ್ಟು ಏರಿಕೆ ಕಂಡಿದ್ದು, ಸನ್ ಫಾರ್ಮಾ, ರಿಲಯನ್ಸ್ ಇಂಡಸ್ಟ್ರೀಸ್, ಇನ್ಫೋಸಿಸ್, ಕೊಟಕ್ ಬ್ಯಾಂಕ್ ಮತ್ತು ಟೆಕ್ ಮಹೀಂದ್ರಾ ನಂತರದ ಸ್ಥಾನದಲ್ಲಿವೆ.

ಮತ್ತೊಂದೆಡೆ ಎಚ್‌ಡಿಎಫ್‌ಸಿ, ಪವರ್‌ಗ್ರಿಡ್, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎನ್‌ಟಿಪಿಸಿ ಮತ್ತು ಎಲ್ & ಟಿ ಗಳಿಕೆಯಲ್ಲಿ ಹಿಂದುಳಿದವು.

ಅಮೆರಿಕ ಅಧ್ಯಕ್ಷೀಯ ಮತದಾನವು ತೀವ್ರ ಜಿದ್ದಾಜಿದ್ದಿನಿಂದ ಸಾಗುತ್ತಿದೆ. ಕೊನೆಯ ವರದಿಯಲ್ಲಿ ಜೋ ಬಿಡೆನ್ 225 ಎಲೆಕ್ಟ್ರೋಲ್ ಮತಗಳನ್ನು ಪಡೆದರೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ 213 ಎಲೆಕ್ಟ್ರೋಲ್ ಮತಗಳನ್ನು ಗಳಿಸಿದ್ದಾರೆ. ಅಧ್ಯಕ್ಷ ಗಾದಿಗೆ ಏರಲು 538ರಲ್ಲಿ ಕನಿಷ್ಠ 270 ಚುನಾವಣಾ ಎಲೆಕ್ಟ್ರೋಲ್​ ಮತ ಹೊಂದಿರಬೇಕು.

ಚುನಾವಣೆ ಹಿಂದಿನ ದಿನ, 'ಅಮೆರಿಕದ ಜನರ ಮೇಲೆ ದೊಡ್ಡ ವಂಚನೆ ನಡೆಯುತ್ತಿದೆ' ಎಂದು ಟ್ರಂಪ್ ಆರೋಪಿಸಿದರು. ಮತಗಳ ಎಣಿಕೆ ಪ್ರಗತಿಯಲ್ಲಿದ್ದರೂ, ಈ ವಿಷಯವನ್ನು ಸುಪ್ರೀಂಕೋರ್ಟ್‌ಗೆ ಕೊಂಡೊಯ್ಯುವುದಾಗಿ ಗುಡುಗಿದರು.

ಏಷ್ಯಾದ ಶಾಂಘೈ, ಸಿಯೋಲ್ ಮತ್ತು ಟೋಕಿಯೊದ ಷೇರುಪೇಟೆಗಳು ಲಾಭದೊಂದಿಗೆ ಕೊನೆಗೊಂಡರೆ, ಹಾಂಕಾಂಗ್ ರೆಡ್​ ಬಣ್ಣಕ್ಕೆ ತಿರುಗಿತು. ಯುರೋಪ್​ನಲ್ಲಿನ ಷೇರು ವಿನಿಮಯಗಳು ಆರಂಭಿಕ ವಹಿವಾಟಿನಲ್ಲಿ ಸಕಾರಾತ್ಮಕವಾಗಿ ಶುರುವಾದವು.

ಅಂತಾರಾಷ್ಟ್ರೀಯ ಬ್ರೆಂಟ್ ಕಚ್ಚಾ ತೈಲ ಬ್ಯಾರೆಲ್‌ಗೆ ಶೇ.2.72 ರಷ್ಟು ಹೆಚ್ಚಳವಾಗಿ 40.79 ಡಾಲರ್‌ಗೆ ವಹಿವಾಟು ನಡೆಸುತ್ತಿದೆ. ವಿದೇಶೀ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ 35 ಪೈಸೆ ಕುಸಿದು ಯುಎಸ್ ಡಾಲರ್ ಎದುರು 74.76 ರೂ.ಗೆ ತಲುಪಿದೆ.

ABOUT THE AUTHOR

...view details