ಕರ್ನಾಟಕ

karnataka

ETV Bharat / business

ಕಳೆದ 3 ದಿನದಲ್ಲಿ ಸೆನ್ಸೆಕ್ಸ್​ -540, +377 & -599 ಏರಿಳಿತ: ಏನಾಗುತ್ತಿದೆ ಮುಂಬೈ ಪೇಟೆಯಲ್ಲಿ?

ಯುರೋಪಿಯನ್ ಮಾರುಕಟ್ಟೆಗಳಲ್ಲಿನ ಮಾರಾಟದ ಒತ್ತಡಕ್ಕೆ ಸಿಲುಕಿದ ಇಂಡೆಕ್ಸ್ ಮೇಜರ್​ಗಳಾದ ರಿಲಯನ್ಸ್ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್‌ನಲ್ಲಿ ಭಾರಿ ನಷ್ಟ ಕಂಡುಬಂತು. ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಬುಧವಾರ 600 ಅಂಕಗಳಷ್ಟು ಕುಸಿತ ದಾಖಲಿಸಿತು..

Sensex
ಸೆನ್ಸೆಕ್ಸ್​

By

Published : Oct 28, 2020, 5:19 PM IST

Updated : Oct 28, 2020, 5:30 PM IST

ಮುಂಬೈ: ಜಾಗತಿಕ ಚಂಚಲತೆಯ ಸುಳಿಗೆ ಸಿಲುಕಿರುವ ದೇಶೀಯ ಷೇರು ಮಾರುಕಟ್ಟೆ ಈ ವಾರದ ಮೂರು ದಿನಗಳ ವಹಿವಾಟಿನಲ್ಲಿ ಮುಂಬೆ ಷೇರುಪೇಟೆ ಏರಿಳಿತದ ನಡುವೆ ವಾಲಾಡುತ್ತಿದೆ. ಸೋಮವಾರದಂದು ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್ 540 ಅಂಕ ಕುಸಿದಿರೇ ಮರುದಿನ (ಮಂಗಳವಾರ) 377 ಅಂಕ ಜಿಗಿತ ದಾಖಲಿಸಿತ್ತು. ಇಂದು (ಬುಧವಾರ) ವಹಿನಾಟಿನಂದು ಮತ್ತೆ ಕುಸಿತದ ಹಾದಿ ಹಿಡಿದಿದೆ.

ಯುರೋಪಿಯನ್ ಮಾರುಕಟ್ಟೆಗಳಲ್ಲಿನ ಮಾರಾಟದ ಒತ್ತಡಕ್ಕೆ ಸಿಲುಕಿದ ಇಂಡೆಕ್ಸ್ ಮೇಜರ್​ಗಳಾದ ರಿಲಯನ್ಸ್ ಇಂಡಸ್ಟ್ರೀಸ್, ಹೆಚ್‌ಡಿಎಫ್‌ಸಿ ಮತ್ತು ಐಸಿಐಸಿಐ ಬ್ಯಾಂಕ್‌ನಲ್ಲಿ ಭಾರಿ ನಷ್ಟ ಕಂಡು ಬಂತು. ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಬುಧವಾರ 600 ಅಂಕಗಳಷ್ಟು ಕುಸಿತ ದಾಖಲಿಸಿತು.

ಕನಿಷ್ಠ 39,774.60 ಅಂಕಗಳ ಮಟ್ಟಕ್ಕೆ ತಲುಪಿದ ನಂತರ 30 ಷೇರುಗಳ ಬಿಎಸ್‌ಇ ಸೂಚ್ಯಂಕ ದಿನದ ಅಂತ್ಯಕ್ಕೆ 599.64 ಅಂಕ ಅಥವಾ ಶೇ 1.48ರಷ್ಟು ಇಳಿಕೆ ಕಂಡು 39,922.46 ಅಂಕಗಳಷ್ಟಾಯಿತು. ಇಂಡೆಸ್‌ಇಂಡ್ ಬ್ಯಾಂಕ್ ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಶೇ. 3ರಷ್ಟು ನಷ್ಟ ಅನುಭವಿಸಿದ್ದು, ಹೆಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್, ಟೆಕ್ ಮಹೀಂದ್ರಾ, ಬಜಾಜ್ ಫೈನಾನ್ಸ್, ಅಲ್ಟ್ರಾಟೆಕ್ ಸಿಮೆಂಟ್ ಮತ್ತು ಟಾಟಾ ಸ್ಟೀಲ್ ನಂತರದ ಸ್ಥಾನದಲ್ಲಿವೆ.

ಮತ್ತೊಂದೆಡೆ ದೇಶದ ಎರಡನೇ ಅತಿದೊಡ್ಡ ಟೆಲಿಕಾಂ ಆಪರೇಟರ್ ತನ್ನ ಅತ್ಯುನ್ನತ ತ್ರೈಮಾಸಿಕ ಏಕೀಕೃತ ಆದಾಯ ವರದಿ ಮಾಡಿದ ಬಳಿಕ ಭಾರ್ತಿ ಏರ್​ಟೆಲ್ ಶೇ.4ರಷ್ಟು ಮೌಲ್ಯ ಏರಿಕೆಯಾಗಿ ಟಾಪ್ ಗೇನರ್ ಆಯಿತು. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಏಕೀಕೃತ ಆದಾಯವು ಶೇ. 22ರಷ್ಟು ಏರಿಕೆ ಕಂಡು 25,785 ಕೋಟಿ ರೂ.ಗೆ ತಲುಪಿದೆ. ಎಂ&ಎಂ, ಮಾರುತಿ ಮತ್ತು ಎಲ್ & ಟಿ ಸಹ ಲಾಭದೊಂದಿಗೆ ಕೊನೆಗೊಂಡವು.

ಹೆಚ್ಚುತ್ತಿರುವ ಕೋವಿಡ್​-19 ಪ್ರಕರಣಗಳ ಮಧ್ಯೆ ಯುರೋಪಿಯನ್ ಮಾರುಕಟ್ಟೆಗಳು ಭಾರಿ ನಷ್ಟದೊಂದಿಗೆ ದಿನದ ವಹಿವಾಟು ತೆರೆದುಕೊಂಡವು. ಈ ನಂತರ ಭಾರತೀಯ ಷೇರುಗಳು ತೀವ್ರವಾದ ಮಾರಾಟದ ಒತ್ತಡ ಎದುರಿಸಬೇಕಾಯಿತು. ಮಾಸಿಕ ಉತ್ಪನ್ನಗಳ ಅವಧಿ ಅಂತ್ಯ, ಅಮೆರಿಕದ ಅಧ್ಯಕ್ಷೀಯ ಚುನಾವಣೆ, ಯುರೋಪಿಯನ್ ರಾಷ್ಟ್ರಗಳಲ್ಲಿ ಮತ್ತೊಂದು ಸುತ್ತಿನ ಆರ್ಥಿಕ ದಿಗ್ಭಂದನದಂತಹ ಅಂಶಗಳು ಕಳೆದ ಕೆಲವು ದಿನಗಳಿಂದ ಹೂಡಿಕೆದಾರರ ಮನೋಭಾವದ ಮೇಲೆ ಪರಿಣಾಮ ಬೀರುತ್ತಿದೆ.

ಹಾಂಗ್‌ಕಾಂಗ್ ಮತ್ತು ಟೋಕಿಯೊದಲ್ಲಿನ ಬೋರ್ಸಸ್ ಋಣಾತ್ಮಕದಲ್ಲಿ ಕೊನೆಗೊಂಡರೆ, ಶಾಂಘೈ ಮತ್ತು ಸಿಯೋಲ್ ಸಕಾರಾತ್ಮಕದತ್ತ ತಿರುಗಿದವು. ಅಂತಾರಾಷ್ಟ್ರೀಯ ಬ್ರೆಂಟ್ ಕಚ್ಚಾ ತೈಲ ಬ್ಯಾರೆಲ್‌ಗೆ ಶೇ.3.20ರಷ್ಟು ಕಡಿಮೆಯಾಗಿ 40.28 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ.

Last Updated : Oct 28, 2020, 5:30 PM IST

ABOUT THE AUTHOR

...view details