ಕರ್ನಾಟಕ

karnataka

ETV Bharat / business

ಷೇರುಪೇಟೆಯಲ್ಲಿ ಆರಂಭಿಕ ಏರಿಕೆ: 92 ಪಾಯಿಂಟ್‌ ಏರಿಕೆ ಕಂಡ ಸೆನ್ಸೆಕ್ಸ್ - Nifty

ಸೆನ್ಸೆಕ್ಸ್ 92 ಪಾಯಿಂಟ್ ಅಥವಾ ಶೇ. 0.17ರಷ್ಟು ದಾಖಲಾಗಿ 52,944.56ಕ್ಕೆ ತಲುಪಿದ್ದರೆ, ಎನ್‌ಎಸ್‌ಇ ಮಾನದಂಡ ನಿಫ್ಟಿ 50 ಸೂಚ್ಯಂಕವು 38.20 ಪಾಯಿಂಟ್ ಅಥವಾ ಶೇ. 0.24ರಷ್ಟು ಹೆಚ್ಚಾಗಿದೆ.

sensex-opens-with-positive-in-market
ಷೇರುಪೇಟೆಯಲ್ಲಿ ಆರಂಭಿಕ ಏರಿಕೆ: 92 ಪಾಯಿಂಟ್‌ ಏರಿಕೆ ಕಂಡ ಸೆನ್ಸೆಕ್ಸ್

By

Published : Jul 27, 2021, 11:33 AM IST

ಮುಂಬೈ: ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಮಂಗಳವಾರ ಆರಂಭಿಕ ವಹಿವಾಟಿನಲ್ಲಿ 92 ಪಾಯಿಂಟ್‌ಗಳ ಏರಿಕೆ ಕಂಡಿದ್ದು, ಹಿಂಡಾಲ್ಕೊ, ಎಸ್​​ಬಿಐ, ಟಾಟಾ ಸ್ಟೀಲ್ ಕಂಪನಿಗಳು ಲಾಭದತ್ತ ಮುಖಮಾಡಿದರೆ, ಟೆಸ್ಲಾ ಏಷ್ಯನ್ ಷೇರುಗಳು ಹೆಚ್ಚು ಗಳಿಕೆ ಕಂಡಿವೆ.

ಸೆನ್ಸೆಕ್ಸ್ 92 ಪಾಯಿಂಟ್ ಅಥವಾ ಶೇ. 0.17ರಷ್ಟು ದಾಖಲಾಗಿ 52,944.56ಕ್ಕೆ ತಲುಪಿದ್ದರೆ, ಎನ್‌ಎಸ್‌ಇ ಮಾನದಂಡ ನಿಫ್ಟಿ 50 ಸೂಚ್ಯಂಕವು 38.20 ಪಾಯಿಂಟ್ ಅಥವಾ ಶೇ. 0.24ರಷ್ಟು ಹೆಚ್ಚಾಗಿದೆ.

ನಿಫ್ಟಿಯಲ್ಲಿ ಹಿಂಡಾಲ್ಕೊ ಶೇ.3.75 ರಷ್ಟು ಏರಿಕೆ ಕಂಡಿದೆ, ಎಸ್‌ಬಿಐ ಲೈಫ್ ಇನ್ಶುರೆನ್ಸ್ ಮತ್ತು ಟಾಟಾ ಸ್ಟೀಲ್ ಕ್ರಮವಾಗಿ ಶೇ. 2.13ರಷ್ಟು ಮತ್ತು ಶೇ.1.37ರಷ್ಟು ಗಳಿಸಿವೆ. ಒಎನ್‌ಜಿಸಿ, ಜೆಎಸ್‌ಡಬ್ಲ್ಯು ಸ್ಟೀಲ್, ಐಸಿಐಸಿಐ ಬ್ಯಾಂಕ್, ಟೈಟಾನ್ ಕಂಪನಿ, ಶ್ರೀ ಸಿಮೆಂಟ್ಸ್, ಹೆಚ್‌ಡಿಎಫ್‌ಸಿ ಲೈಫ್, ಇಂಡಸ್ಇಂಡ್ ಬ್ಯಾಂಕ್, ಐಷರ್ ಮೋಟಾರ್ಸ್, ಎಸ್‌ಬಿಐ, ಮಾರುತಿ ಸುಜುಕಿ, ಕೋಲ್ ಇಂಡಿಯಾ ನಿಫ್ಟಿಯಲ್ಲಿ ಇತರ ಷೇರುಗಳು ಲಾಭ ಗಳಿಸಿವೆ.

ABOUT THE AUTHOR

...view details