ಮುಂಬೈ :ಚೀನಾದಲ್ಲಿನ ಕೊರೊನಾ ವೈರಸ್ನ ಎರಡನೇ ಅಲೆಯ ಬಗ್ಗೆ ಹೂಡಿಕೆದಾರರು ಆತಂಕಗೊಂಡಿದ್ದಾರೆ. ಏಷ್ಯಾದ ಮಾರುಕಟ್ಟೆಗಳಲ್ಲಿ ಭಾರಿ ಕುಸಿತವುಂಟಾಗಿದೆ. ಇಂದು ಬೆಳಗ್ಗೆ ಈಕ್ವಿಟಿ ಬೆಂಚ್‌ಮಾರ್ಕ್ ಸೂಚ್ಯಂಕಗಳು ಕಡಿಮೆ ಅಂಕಗಳಲ್ಲಿ ವಹಿವಾಟು ನಡೆಸಿದವು.
ಆರಂಭಿಕ ವಹಿವಾಟಿನಲ್ಲೇ 389.67 ಅಂಕಗಳ ಕುಸಿತ ಕಂಡ ಸೆನ್ಸೆಕ್ಸ್ - ಮಾರುಕಟ್ಟೆ ಸುದ್ದಿ
389.67 ಅಂಕಗಳ ಕುಸಿತದೊಂದಿಗೆ ಸೆನ್ಸೆಕ್ಸ್ 31,171.55 ರಲ್ಲಿ ವಹಿವಾಟು ಆರಂಭಿಸಿತು. ಬೆಳಿಗ್ಗೆ 10:15 ಕ್ಕೆ BSE S&P ಸೆನ್ಸೆಕ್ಸ್ 561 ಅಂಕ ಇಳಿಕೆಯಾಗಿ 31,000 ಕ್ಕೆ ತಲುಪಿದ್ದರೆ, ನಿಫ್ಟಿ50, 169 ಅಂಕಗಳಷ್ಟು ಇಳಿಕೆ ಕಂಡು 9,070 ರಲ್ಲಿ ವಹಿವಾಟು ನಡೆಸುತ್ತಿದೆ.
389.67 ಅಂಕಗಳ ಕುಸಿತದೊಂದಿಗೆ ಸೆನ್ಸೆಕ್ಸ್ 31,171.55ರಲ್ಲಿ ವಹಿವಾಟು ಆರಂಭಿಸಿತು. ಬೆಳಗ್ಗೆ 10 :15ಕ್ಕೆ ಬಿಎಸ್‌ಇ ಎಸ್ ಆ್ಯಂಡ್ ಪಿ(BSE S&P) ಸೆನ್ಸೆಕ್ಸ್ 561 ಅಂಕ ಇಳಿಕೆಯಾಗಿ 31,000ಕ್ಕೆ ತಲುಪಿದ್ದರೆ, ನಿಫ್ಟಿ50,169 ಅಂಕಗಳಷ್ಟು ಇಳಿಕೆ ಕಂಡು 9,070 ರಲ್ಲಿ ವಹಿವಾಟು ನಡೆಸುತ್ತಿದೆ.
ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿನ ಎಲ್ಲಾ ವಲಯ ಸೂಚ್ಯಂಕಗಳು ಇಳಿಕೆ ಕಂಡಿವೆ. ನಿಫ್ಟಿ ಶೇ.2.8, ಖಾಸಗಿ ಬ್ಯಾಂಕ್ ಶೇ.2.5, ಪಿಎಸ್‌ಯು ಬ್ಯಾಂಕ್ ಶೇ 2.4ರಷ್ಟು ಕುಸಿದಿದೆ. ಷೇರುಗಳಲ್ಲಿ ದೇಶದ ಅತಿದೊಡ್ಡ ಕಾರು ತಯಾರಿಕಾ ಮಾರುತಿ ಸುಜುಕಿಯ ಷೇರುಗಳು ಶೇ.4.4ರಷ್ಟು ಕುಸಿದು, ಪ್ರತಿ ಯೂನಿಟ್‌ಗೆ 4,718.95 ರೂ. ಈಚರ್ ಮೋಟಾರ್ಸ್ ಮತ್ತು ಹೀರೋ ಮೊಟೊಕಾರ್ಪ್ ತಲಾ 2.9 ರಷ್ಟು ಕುಸಿದಿದೆ.