ಕರ್ನಾಟಕ

karnataka

ETV Bharat / business

ಗೂಳಿಗೂ ಅಂಟಿದ ಕೊರೊನಾ ವೈರಸ್​... ಜಸ್ಟ್​ 2 ಕೋವಿಡ್​ ಕೇಸಿಗೆ 1,300 ಅಂಶ ಕುಸಿದ ಸೆನ್ಸೆಕ್ಸ್​ - ವಹಿವಾಟು

ಸೋಮವಾರದ ಮಧ್ಯಾಂತರ ವಹಿವಾಟಿನಂದು ಸೆನ್ಸೆಕ್ಸ್ ಗರಿಷ್ಠ 1,300 ಅಂಕಗಳಷ್ಟು ಕುಸಿದು ಹೂಡಿಕೆದಾರರಲ್ಲಿ ತೀವ್ರವಾದ ಆತಂಕ ಸೃಷ್ಟಿತ್ತು. ದಿನದ ಅಂತ್ಯದ ವೇಳೆಗೆ ಸುಧಾರಿಸಿಕೊಂಡ ಪೇಟೆ, 153 ಅಂಕಗಳಷ್ಟು ಇಳಿಕೆಯಾಗಿ ಹೂಡಿದಾರರು ನಿಟ್ಟುಸಿರು ಬಿಟ್ಟರು.

Sensex
ಸೆನ್ಸೆಕ್ಸ್

By

Published : Mar 2, 2020, 5:08 PM IST

ಮುಂಬೈ: ಚೀನಾದಲ್ಲಿ ಉದ್ಭವಿಸಿದ ಕೊರೊನಾ ವೈರಸ್ ಇಡೀ ವಿಶ್ವಕ್ಕೆ ಮಾರಕವಾಗಿ ಕಾಡುತ್ತಿದೆ. ಇದರ ನೇರ ಪರಿಣಾಮ ಮುಂಬೈ ಷೇರುಪೇಟೆಗೂ ವ್ಯಾಪಿಸಿಕೊಂಡಿದೆ.

ಸೋಮವಾರದ ಮಧ್ಯಂತರ ವಹಿವಾಟಿನಂದು ಸೆನ್ಸೆಕ್ಸ್ ಗರಿಷ್ಠ 1,300 ಅಂಕಗಳಷ್ಟು ಕುಸಿದು ಹೂಡಿಕೆದಾರರಲ್ಲಿ ತೀವ್ರವಾದ ಆತಂಕ ಸೃಷ್ಟಿತ್ತು. ದಿನದ ಅಂತ್ಯದ ವೇಳೆಗೆ ಸುಧಾರಿಸಿಕೊಂಡ ಪೇಟೆ, 153 ಅಂಕಗಳಷ್ಟು ಇಳಿಕೆಯಾಗಿ ಹೂಡಿದಾರರು ನಿಟ್ಟುಸಿರು ಬಿಟ್ಟರು.

ದೆಹಲಿ ಮತ್ತು ತೆಲಂಗಾಣದಲ್ಲಿ ಎರಡು ಹೊಸ ಕೋವಿಡ್​-19 ಪ್ರಕರಣಗಳು ಕಂಡುಬಂದು ಎಂಬುದು ತಿಳಿಯುತ್ತಿದ್ದಂತೆ ದಿನದ ವಹಿವಾಟಿನ ಕೊನೆಯ ಒಂದು ತಾಸಿನಲ್ಲಿ ಮಾರಾಟದ ಒತ್ತಡ ಅಧಿಕವಾಯಿತು. ತತ್ಪರಿಣಾಮ ಸೆನ್ಸೆಕ್ಸ್ 153.27 ಅಂಶಗಳ ಇಳಿಕೆಯೊಂದಿಗೆ 38,144.02 ಅಂಶಗಳ ಮಟ್ಟದಲ್ಲೂ ನಿಫ್ಟಿ 69 ಅಂಕಗಳ ಕುಸಿತದೊಂದಿಗೆ 11,131.02 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು.

ದಿನದ ವಹಿವಾಟಿನಲ್ಲಿ ಎಸ್​ಬಿಐ, ಟಾಟಾ ಸ್ಟೀಲ್, ಹೀರೋ ಮೋಟಾರ್​ ಕಾರ್ಪ್​, ಬಜಾಜ್ ಆಟೋ, ಒಎನ್​ಜಿಸಿ ಮತ್ತು ಇಂಡ್​ಲ್ಯಾಂಡ್ ಬ್ಯಾಂಕ್​ ದಿನದ ಟಾಪ್​ ಲಾಸರ್​ ಎನಿಸಿಕೊಂಡವು. ಎಚ್​ಸಿಎಲ್​ ಟೆಕ್​, ನೆಸ್ಲೆ ಇಂಡಿಯಾ, ಐಸಿಐಸಿಐ ಬ್ಯಾಂಕ್​ ಮತ್ತು ಇನ್ಫೋಸಿಸ್​ ಗರಿಷ್ಠ ಲಾಭ ಮಾಡಿಕೊಂಡವು.

ಶಾಂಘೈ, ಹಾಂಗ್​ ಕಾಂಗ್, ಸಿಯೋಲ್ ಮತ್ತು ಟೊಕಿಯೋ ಷೇರು ಪೇಟೆಗಳು ಕುಸಿದಿವೆ. ಯುರೋಪ್​ ಷೇರುಪೇಟೆಗಳು ಮುಂಜಾನೆ ಅವಧಿಯ ವಹಿವಾಟಿನಲ್ಲಿ ಸಕರಾತ್ಮಕವಾಗಿ ಸಾಗಿವೆ. ಅಂತಾರಾಷ್ಟ್ರೀಯ ಕಚ್ಚಾ ತೈಲ ದರದಲ್ಲಿ ಶೇ 2.25ರಷ್ಟು ದರ ಇಳಿಕೆಯಾಗಿ ಪ್ರತಿ ಬ್ಯಾರೆಲ್​ ತೈಲ, 50.79 ಡಾಲರ್​ನಲ್ಲಿ ಮಾರಾಟ ಆಗುತ್ತಿದೆ.

ಪ್ರತಿ 10 ಗ್ರಾಂ. ಚಿನ್ನದ ದರದ ಮೇಲೆ ₹ 391 ಏರಿಕೆಯಾಗಿ ₹ 42,616 ಮಾರಾಟ ಆಗುತ್ತಿದೆ. ಬೆಳ್ಳಿಯ ಧಾರಣೆ ಸಹ ಪ್ರತಿ ಕೆ.ಜಿ. ಮೇಲೆ ₹ 713​ ಹೆಚ್ಚಳವಾಗಿ ₹ 46,213 ಮಾರಾಟ ಆಗುತ್ತಿದೆ.

ABOUT THE AUTHOR

...view details