ಮುಂಬೈ: ಜಾಗತಿಕ ಈಕ್ವಿಟಿಗಳಲ್ಲಿನ ದುರ್ಬಲ ಪ್ರವೃತ್ತಿಯ ಮಧ್ಯೆ ಬುಧವಾರದ ಆರಂಭಿಕ ವಹಿವಾಟಿನಲ್ಲಿ 48,616.66 ಅಂಕಗಳ ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿದ್ದ ಸೆನ್ಸೆಕ್ಸ್, ಈಗ ಅಲ್ಪ ಹಿನ್ನಡೆ ಕಂಡಿದೆ.
ಆರಂಭಿಕ ವಹಿವಾಟಿನಲ್ಲಿ 179 ಅಂಕಗಳ ಏರಿಕೆಯ ನಂತರ, ಬಿಎಸ್‌ಇ ಸೂಚ್ಯಂಕವು 38.03 ಅಂಕ ಅಥವಾ ಶೇ 0.08ರಷ್ಟು ಕುಸಿತ ಕಂಡಿದೆ. ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 8.10 ಅಂಕ ಅಥವಾ ಶೇ 0.06ರಷ್ಟು ಕುಸಿದು 14,191.40 ಅಂಕಗಳ ಮಟ್ಟದಲ್ಲಿ ವಹಿವಾಟು ನಿರತವಾಗಿದೆ.
ಸೆನ್ಸೆಕ್ಸ್ ವಿಭಾಗದಲ್ಲಿ ಐಟಿಸಿ, ರಿಲಯನ್ಸ್ ಇಂಡಸ್ಟ್ರೀಸ್, ಎಚ್‌ಯುಎಲ್, ಎಚ್‌ಸಿಎಲ್ ಟೆಕ್, ಅಲ್ಟ್ರಾಟೆಕ್ ಸಿಮೆಂಟ್ ಮತ್ತು ಬಜಾಜ್ ಫೈನಾನ್ಸ್ ಟಾಪ್ ಲೂಸರ್ಗಳಾಗಿದ್ದರೇ ಒಎನ್‌ಜಿಸಿ, ಟೈಟಾನ್, ಎಸ್‌ಬಿಐ, ಐಸಿಐಸಿಐ ಬ್ಯಾಂಕ್ ಮತ್ತು ಭಾರ್ತಿ ಏರ್‌ಟೆಲ್ ಲಾಭ ಗಳಿಸಿದವು.