ಮುಂಬೈ :ಜಾಗತಿಕ ಷೇರುಪೇಟೆಗಳಲ್ಲಿನ ಮಿಶ್ರ ಪ್ರತಿಕ್ರಿಯೆ ಹಿನ್ನೆಲೆ ಮುಂಬೈ ಮಾರುಕಟ್ಟೆಯಲ್ಲಿ ದಿನದ ಆರಂಭದಿಂದ ನಷ್ಟದಲ್ಲೇ ಸಾಗುತ್ತಿರುವ ಸೆನ್ಸೆಕ್ಸ್ 562 ಅಂಕಗಳ ಕುಸಿತ ಕಂಡು 55,896ರಲ್ಲಿ ವಹಿವಾಟು ನಡೆಸುತ್ತಿದೆ. ನಿಫ್ಟಿ 175 ಅಂಕಗಳ ನಷ್ಟದ ಬಳಿಕ 16,714ರಲ್ಲಿದೆ.
ಟಾಟಾ ಸ್ಟೀಲ್, ಇನ್ಫೋಸಿಸ್, ಟೆಕ್ ಮಹೀಂದ್ರಾ, ಹೆಚ್‌ಸಿಎಲ್ ಟೆಕ್, ಟಿಸಿಎಸ್ ಹಾಗೂ ವಿಪ್ರೋ ನಷ್ಟ ಅನುಭವಿಸಿದ ಪ್ರಮುಖ ಕಂಪನಿಗಳಾಗಿವೆ. ಮತ್ತೊಂದೆಡೆ, ಮಾರುತಿ ಸುಜುಕಿ ಇಂಡಿಯಾ, ಮಹೀಂದ್ರಾ , ಅಲ್ಟ್ರಾಟೆಕ್ ಸಿಮೆಂಟ್, ಏಷ್ಯನ್ ಪೇಂಟ್ಸ್, ಭಾರ್ತಿ ಏರ್‌ಟೆಲ್ ಹಾಗೂ ಹೆಚ್‌ಡಿಎಫ್‌ಸಿ ಲಾಭದಲ್ಲಿ ಸಾಗಿವೆ.
ನಿನ್ನೆಯ ವಹಿವಾಟಿನಲ್ಲಿ ಸೆನ್ಸೆಕ್ಸ್ 935.72 ಪಾಯಿಂಟ್‌ಗಳು ಜಿಗಿತ ಕಂಡು 56,486.02ರಲ್ಲಿ ಹಾಗೂ ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 240.85 ಪಾಯಿಂಟ್ ಏರಿಕೆಯಾಗಿ 16,871.30ಕ್ಕೆ ಬಂದು ನಿಂತಿತ್ತು. ಹಾಂಗ್ ಕಾಂಗ್ ಮತ್ತು ಶಾಂಘೈ ಷೇರು ಪೇಟೆಗಳು ಶೇ.2ರಷ್ಟು ನಷ್ಟದಲ್ಲಿವೆ. ಆದರೆ, ಟೋಕಿಯೋ ಪೇಟೆ ಮಧ್ಯ-ಸೆಷನ್ ವ್ಯವಹಾರಗಳ ಸಮಯದಲ್ಲಿ ಸ್ವಲ್ಪ ಚೇತರಿಕೆಯ ಹಾದಿಯಲ್ಲಿ ವಹಿವಾಟು ನಡೆಸುತ್ತಿದೆ.