ಕರ್ನಾಟಕ

karnataka

ETV Bharat / business

ಬೆಳಗ್ಗೆ ನೆಲಕಚ್ಚಿ ಮಧ್ಯಾಹ್ನ ಪುಟಿದೆದ್ದು ಹೊಸ ದಾಖಲೆ ಬರೆದ ಸೆನ್ಸೆಕ್ಸ್: 10ನೇ ದಿನವೂ ಗೂಳಿ ನಾಗಾಲೋಟ

ಸತತ 10ನೇ ವಹಿವಾಟಿನಂದು ಸೆನ್ಸೆಕ್ಸ್ 261 ಅಂಕ ಏರಿಕೆ ಕಂಡು ಹೊಸ ದಾಖಲೆಯಲ್ಲಿ ಕೊನೆಗೊಂಡಿದೆ. ಋಣಾತ್ಮಕ ಟಿಪ್ಪಣಿ ಹೊರತಾಗಿಯೂ ಬಿಎಸ್ಇ ಸೂಚ್ಯಂಕವು ಎಲ್ಲಾ ನಷ್ಟಗಳನ್ನು ನಿವಾರಿಸಿಕೊಂಡು ದಿನದ ಅಂತ್ಯದ ವೇಳೆಗೆ ಶೇ 0.54ರಷ್ಟು ಏರಿಕೆಯಾಗಿ 48,437.78 ಅಂಕಗಳಲ್ಲಿ ಕೊನೆಗೊಂಡಿತು.

Sensex
ಸೆನ್ಸೆಕ್ಸ್

By

Published : Jan 5, 2021, 6:40 PM IST

ಮುಂಬೈ: ಮಂಗಳವಾರದ ವಹಿವಾಟಿನಂದು ಈಕ್ವಿಟಿ ಬೆಂಚ್​ ಮಾರ್ಕ್ಸ್ ಸೆನ್ಸೆಕ್ಸ್ ಆರಂಭಿಕ ಬೆಳಗಿನ ಅವಧಿಯಲ್ಲಿ 100 ಅಂಕಗಳಷ್ಟು ಕುಸಿದು ಮತ್ತೆ ಚೇತರಿಸಿಕೊಂಡಿದೆ.

ಸತತ 10ನೇ ವಹಿವಾಟಿನಂದು ಸೆನ್ಸೆಕ್ಸ್ 261 ಅಂಕ ಏರಿಕೆ ಕಂಡು ಹೊಸ ದಾಖಲೆಯಲ್ಲಿ ಕೊನೆಗೊಂಡಿದೆ. ಋಣಾತ್ಮಕ ಟಿಪ್ಪಣಿ ಹೊರತಾಗಿಯೂ ಬಿಎಸ್ಇ ಸೂಚ್ಯಂಕವು ಎಲ್ಲಾ ನಷ್ಟಗಳನ್ನು ನಿವಾರಿಸಿಕೊಂಡು ದಿನದ ಅಂತ್ಯದ ವೇಳೆಗೆ ಶೇ 0.54ರಷ್ಟು ಏರಿಕೆಯಾಗಿ 48,437.78 ಅಂಕಗಳಲ್ಲಿ ಕೊನೆಗೊಂಡಿತು.

ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 66.60 ಅಂಕ ಅಥವಾ ಶೇ 0.47ರಷ್ಟು ಏರಿಕೆಯಾಗಿ 14,199.50 ಅಂಕಗಳ ಹೊಸ ಎತ್ತರಕ್ಕೆ ತಲುಪಿತು. ದಿನದ ಮಧ್ಯಂತರ ಅವಧಿಯಲ್ಲಿ 14,215.60 ಅಂಕಗಳಿಗೆ ಮುಟ್ಟಿತು.

ಸೆನ್ಸೆಕ್ಸ್ ವಿಭಾಗದಲ್ಲಿ ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ, ಇಂಡಸ್‌ಇಂಡ್ ಬ್ಯಾಂಕ್, ಟಿಸಿಎಸ್, ಏಷ್ಯಾನ್ ಪೆಯಿಂಟ್ಸ್​, ಟೈಟಾನ್, ಎಚ್‌ಸಿಎಲ್ ಟೆಕ್ ಮತ್ತು ಐಸಿಐಸಿಐ ಬ್ಯಾಂಕ್ ದಿನದ ಟಾಪ್​ ಗೇನರ್​ಗಳಾದರು. ಒಎನ್‌ಜಿಸಿ, ಬಜಾಜ್ ಫೈನಾನ್ಸ್, ಎನ್‌ಟಿಪಿಸಿ, ಎಂ & ಎಂ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಟಾಪ್ ಲೂಸರ್ ಎನಿಸಿದವು.

ಇದನ್ನೂ ಓದಿ: ನಿಮ್ಮ ಆಲೋಚನೆಗಳು ನನಗೆ ಕಳುಹಿಸಿ, ಹಿಂದೆಂದೂ ಕಂಡಿರದ ಬಜೆಟ್​ ನಿಮ್ಮ ಮುಂದಿಡುತ್ತೇನೆ: ನಿರ್ಮಲಾ ಸೀತಾರಾಮನ್

ದೇಶೀಯ ಷೇರುಗಳು ಇಂದಿನ ಕನಿಷ್ಠ ಮಟ್ಟದಿಂದ ಚುರುಕಾಗಿ ಚೇತರಿಸಿಕೊಂಡಿವೆ. ಬ್ಯಾಂಕಿಂಗ್ ಮತ್ತು ಐಟಿ ಷೇರುಗಳಲ್ಲಿ ತೀವ್ರ ಏರಿಕೆ ಕಂಡುಬಂದಿದೆ ಎಂದು ರಿಲಯನ್ಸ್ ಸೆಕ್ಯುರಿಟೀಸ್‌ನ ಸ್ಟ್ರಾಟಜಿ ಮುಖ್ಯಸ್ಥ ಬಿನೋದ್ ಮೋದಿ ಹೇಳಿದ್ದಾರೆ.

ಶಾಂಘೈ, ಸಿಯೋಲ್ ಮತ್ತು ಹಾಂಗ್ ಕಾಂಗ್‌ ಪೇಟೆಗಳು ಸಕಾರಾತ್ಮಕವಾಗಿ ಕೊನೆಗೊಂಡರೆ, ಟೋಕಿಯೊ ರೆಡ್​ ಝೋನ್​ನಲ್ಲಿತ್ತು. ಯುರೋಪಿನ ಷೇರು ವಿನಿಮಯ ಕೇಂದ್ರಗಳು ಆರಂಭಿಕ ವಹಿವಾಟಿನಲ್ಲಿ ಮಿಶ್ರ ಪ್ರತಿಕ್ರಿಯೆ ತೋರಿದವು. ಜಾಗತಿಕ ತೈಲ ಮಾನದಂಡ ಬ್ರೆಂಟ್ ಕಚ್ಚಾ ಫ್ಯೂಚರ್​ ದರ ಪ್ರತಿ ಬ್ಯಾರೆಲ್‌ಗೆ ಶೇ 0.69ರಷ್ಟು ಏರಿಕೆ ಕಂಡು 51.44 ಡಾಲರ್‌ಗೆ ತಲುಪಿದೆ.

ABOUT THE AUTHOR

...view details