ಮುಂಬೈ:ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿನ ಅಸ್ಥಿರತೆಯು ಮುಂಬೈ ಷೇರುಪೇಟೆ ಮೇಲೆ ಭಾರಿ ಪರಿಣಾಮ ಉಂಟು ಮಾಡಿತ್ತು. ಕಳೆದ ನಾಲ್ಕು ದಿನಗಳಿಂದ ಕುಸಿತ ಕಂಡಿದ್ದ ಬಿಎಸ್‌ಇ ಸೆನ್ಸೆಕ್ಸ್ ಇಂದು ಚೇತರಿಕೆ ಕಂಡಿದೆ.
ದಿನದ ವಾಹಿವಾಟು ಅಂತ್ಯಕ್ಕೆೆ ಸೆನ್ಸೆಕ್ಸ್ 581 ಅಂಕಗಳ ಜಿಗಿತದ ಬಳಿಕ 52,260ರಲ್ಲಿಯೂ ಹಾಗೂ ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 115 ಅಂಶಗಳನ್ನು ಹೆಚ್ಚಿಸಿಕೊಂಡು 15,747ರಲ್ಲಿ ವ್ಯಾಪಾರ ಮುಗಿಸಿತು.
ಸನ್ ಫಾರ್ಮಾ, ಟಿಸಿಎಸ್, ಟೆಕ್ ಮಹೀಂದ್ರಾ, ಎನ್‌ಟಿಪಿಸಿ, ವಿಪ್ರೋ, ಅಲ್ಟ್ರಾಟೆಕ್ ಸಿಮೆಂಟ್, ಡಾ.ರೆಡ್ಡೀಸ್ ಲ್ಯಾಬೋರೇಟರೀಸ್ ಹಾಗೂ ಇನ್ಫೋಸಿಸ್ ಷೇರುಗಳ ಮೌಲ್ಯ ಶೇ.3.99ರಷ್ಟು ಏರಿಕೆಯಾಗಿದೆ. ಟಾಟಾ ಸ್ಟೀಲ್, ನೆಸ್ಲೆ, ಟೈಟಾನ್, ಪವರ್‌ಗ್ರಿಡ್, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ಎಸ್‌ಬಿಐ ಷೇರುಗಳು ನಷ್ಟದಲ್ಲಿ ಕೊನೆಗೊಂಡವು.