ಮುಂಬೈ:ಬಜೆಟ್ ಘೋಷಣೆಯ ಬಳಿಕ ತನ್ನ ಏರುಗತಿಯನ್ನು ಕಾಯ್ದುಕೊಂಡ ಭಾರತದ ಈಕ್ವಿಟಿ ಬೆಂಚ್ಮಾರ್ಕ್ಸ್ಗಳು, ರಿಸರ್ವ್ ಬ್ಯಾಂಕ್ ಶುಕ್ರವಾರ ತನ್ನ ಬಡ್ಡಿದರಗಳನ್ನು ಬದಲಿಸದೇ ಯಥಾವತ್ತಾಗಿ ಇರಿಸಿಕೊಂಡ ನಂತರ ಸೆನ್ಸೆಕ್ಸ್ 117 ಅಂಕ ಏರಿಕೆ ಕಂಡಿದೆ.
30 ಷೇರುಗಳ ಬಿಎಸ್‌ಇ, ಮಧ್ಯಂತರ ವಹಿವಾಟಿನಲ್ಲಿ 51,000 ಅಂಕಗಳ ಗಡಿ ದಾಟಿತು. ಅಂತಿಮವಾಗಿ ದಿನದ ಅಂತ್ಯಂಕ 117.34 ಅಂಕ ಅಥವಾ ಶೇ 0.23ರಷ್ಟು ಹೆಚ್ಚಳವಾಗಿ 50,731 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 28 ಅಂಕ ಹೆಚ್ಚಳವಾಗಿ 14,924 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು.