ಮುಂಬೈ :ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡು ಬಂದ ಸಕಾರಾತ್ಮಕ ಸೂಚನೆಗಳ ನಡುವೆ ಬಿಎಸ್‌ಇ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 444.17 ಪಾಯಿಂಟ್ ಏರಿಕೆ ಕಂಡು ಬಂದಿದ್ದು, ಈ ಮೂಲಕ 52,642.68ಕ್ಕೆ ತಲುಪಿದೆ. ಕಳೆದ ಎರಡು ಸೆಷನ್ನಲ್ಲಿ ಷೇರುಪೇಟೆ ಸಾವಿರಕ್ಕೂ ಹೆಚ್ಚು ಅಂಕಗಳನ್ನು ಕಳೆದುಕೊಂಡು ಹೂಡಿಕೆದಾರರಲ್ಲಿ ಆತಂಕ ತಂದಿಟ್ಟಿತ್ತು.
30 ಷೇರುಗಳ ಬಿಎಸ್‌ಇ ಸೂಚ್ಯಂಕವು ಆರಂಭಿಕ ವ್ಯವಹಾರಗಳಲ್ಲಿ 444.17 ಪಾಯಿಂಟ್‌ಗಳು ಅಥವಾ 0.85 ರಷ್ಟು ಹೆಚ್ಚಳವಾಗಿ 52,642.68 ಕ್ಕೆ ವಹಿವಾಟು ನಡೆಸುತ್ತಿದ್ದರೆ, ಎನ್‌ಎಸ್‌ಇ ನಿಫ್ಟಿ 129.15 ಪಾಯಿಂಟ್ ಅಥವಾ 0.83 ರಷ್ಟು ಏರಿಕೆ ಕಂಡು 15,761.25ಕ್ಕೆ ತಲುಪಿದೆ.