ಮುಂಬೈ :ಜಾಗತಿಕ ಷೇರುಪೇಟೆಗಳಲ್ಲಿನ ಸಕಾರಾತ್ಮಕ ಬೆಳವಣಿಗೆಯ ಬೆನ್ನಲ್ಲೇ ಮುಂಬೈ ಷೇರುಪೇಟೆಯಲ್ಲೂ ಗೂಳಿ ಓಟ ಮುಂದುವರಿದಿದೆ. ದಿನದ ಆರಂಭದಲ್ಲೇ ಸೆಕ್ಸೆಕ್ಸ್ 427 ಅಂಕಗಳಷ್ಟು ಜಿಗಿತ ಕಂಡು 58,416ರಲ್ಲಿ ವಹಿವಾಟು ನಡೆಸುತ್ತಿದೆ. ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 126 ಅಂಕಗಳ ಹೆಚ್ಚಳ ಬಳಿಕ 17,442ರಲ್ಲಿದೆ.
ಪ್ರಮುಖ ಷೇರು ಕಂಪನಿಗಳಾದ ರಿಲಯನ್ಸ್ ಇಂಡಸ್ಟ್ರೀಸ್, ಬಜಾಜ್ ಫೈನಾನ್ಸ್, ಡಾ. ರೆಡ್ಡೀಸ್ ಲ್ಯಾಬೋರೇಟರೀಸ್, ಸನ್ ಫಾರ್ಮಾ, ಇಂಡಸ್‌ಇಂಡ್ ಬ್ಯಾಂಕ್, ಎಸ್‌ಬಿಐ, ಆಕ್ಸಿಸ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್ ಹಾಗೂ ಐಸಿಐಸಿಐ ಬ್ಯಾಂಕ್‌ಗಳು ಆರಂಭಿಕ ವಹಿವಾಟಿನಲ್ಲಿ ಲಾಭದಲ್ಲಿದ್ದವು.
ಮತ್ತೊಂದೆಡೆ ಭಾರ್ತಿ ಏರ್‌ಟೆಲ್, ಏಷ್ಯನ್ ಪೇಂಟ್ಸ್, ಮಾರುತಿ ಸುಜುಕಿ ಇಂಡಿಯಾ ಹಾಗೂ ಇನ್ಫೋಸಿಸ್ ಷೇರಗಳ ಮೌಲ್ಯ ಕುಸಿತ ಕಂಡಿದೆ. ನಿನ್ನೆಯ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ 696.81 ಪಾಯಿಂಟ್‌ಗಳ ಏರಿಕೆ ನಂತರ 57,989ರಲ್ಲಿ ಹಾಗೂ ನಿಫ್ಟಿ 197.90 ಅಂಶಗಳನ್ನು ಹೆಚ್ಚಿಸಿಕೊಂಡು 17,315.50ಕ್ಕೆ ತಲುಪಿತ್ತು.
ಏಷ್ಯದ ಇತರೆ ಮಾರುಕಟ್ಟೆಗಳಾದ ಸಿಯೋಲ್, ಹಾಂಗ್ ಕಾಂಗ್ ಹಾಗೂ ಟೋಕಿಯೋ ಇಕ್ವಿಟಿ ಎಕ್ಸ್‌ಚೇಂಜ್‌ಗಳು ಮಿಡ್-ಸೆಷನ್ ಡೀಲ್‌ಗಳಲ್ಲಿ ಹೆಚ್ಚಿನ ವಹಿವಾಟು ನಡೆಸುತ್ತಿದ್ದರೆ, ಶಾಂಘೈ ಸ್ವಲ್ಪ ಕಡಿಮೆಯಾಗಿದೆ. ಅಮೆರಿಕ ಷೇರುಪೇಟೆ ಲಾಭದಲ್ಲಿ ಕೊನೆಗೊಂಡಿದೆ. ಅಂತಾರಾಷ್ಟ್ರೀಯ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ ಶೇ. 1.57ರಷ್ಟು ಏರಿಕೆ ನಂತರ 117.3 ಡಾಲರ್‌ಗೆ ಜಿಗಿದಿದೆ.
ಇದನ್ನೂ ಓದಿ:ಇಂದು ಕೂಡ ಪೆಟ್ರೋಲ್, ಡೀಸೆಲ್ ಲೀಟರ್‌ಗೆ ತಲಾ 80 ಪೈಸೆ ಏರಿಕೆ; ಬೆಂಗಳೂರಿನಲ್ಲಿ ತೈಲ ಬೆಲೆ ಹೀಗಿದೆ..