ಕರ್ನಾಟಕ

karnataka

ETV Bharat / business

ಷೇರು ಮಾರುಕಟ್ಟೆ ಸಮಾಚಾರ: ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 150 ಅಂಕ ಹೆಚ್ಚಳ - ಷೇರು ಮಾರುಕಟ್ಟೆ ಒಪನಿಂಗ್​ ಬೆಲ್

ಆರಂಭಿಕ ವಹಿವಾಟಿನಲ್ಲಿ ಸುಮಾರು 180 ಅಂಕ ಜಿಗಿತದ ನಂತರ, 30-ಷೇರುಗಳ ಬಿಎಸ್‌ಇ ಸೂಚ್ಯಂಕವು 52,120.09 ಅಂಕಗಳಲ್ಲಿ ವಹಿವಾಟು ನಡೆಸಿತು. ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 29.20 ಅಂಕ ಹೆಚ್ಚಳವಾಗಿ 15,699.45 ಅಂಕ ತಲುಪಿದೆ. ಬಿಎಸ್​ಇ ಸೂಚ್ಯಂಕ ಮೇಜರ್​ಗಳಾದ ಐಸಿಐಸಿಐ ಬ್ಯಾಂಕ್, ಐಟಿಸಿ ಮತ್ತು ಎಸ್‌ಬಿಐನಲ್ಲಿ ವಿದೇಶಿ ನಿಧಿಯ ಒಳಹರಿವು ಕಂಡುಬಂದಿದೆ.

Sensex
Sensex

By

Published : Jun 7, 2021, 10:38 AM IST

ಮುಂಬೈ:ಮುಂಬೈ ಷೇರು ಮಾರುಕಟ್ಟೆಯಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಸೋಮವಾರದ ಆರಂಭಿಕ ವಹಿವಾಟಿನಲ್ಲಿ 150 ಅಂಕ ಏರಿಕೆ ಕಂಡಿದೆ. ಸೂಚ್ಯಂಕ ಪ್ರಮುಖರುಗಳಾದ ಐಸಿಐಸಿಐ ಬ್ಯಾಂಕ್, ಐಟಿಸಿ ಮತ್ತು ಎಸ್‌ಬಿಐನಲ್ಲಿ ವಿದೇಶಿ ನಿಧಿಯ ಒಳಹರಿವು ಕಂಡುಬಂದಿದೆ.

ಆರಂಭಿಕ ವಹಿವಾಟಿನಲ್ಲಿ ಸುಮಾರು 180 ಅಂಕ ಜಿಗಿತದ ನಂತರ, 30-ಷೇರುಗಳ ಬಿಎಸ್‌ಇ ಸೂಚ್ಯಂಕವು 52,120.09 ಅಂಕಗಳಲ್ಲಿ ವಹಿವಾಟು ನಡೆಸಿತು. ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 29.20 ಅಂಕ ಹೆಚ್ಚಳವಾಗಿ 15,699.45 ಅಂಕ ತಲುಪಿದೆ.

ಇದನ್ನೂ ಓದಿ: ಪರಾರಿಯಾದ ಉದ್ಯಮಿ ಚೋಕ್ಸಿ ಅಪಹರಣ: ಆಂಟಿಗುವಾ, ಬಾರ್ಬುಡಾ ಪೊಲೀಸರಿಂದ ತನಿಖೆ

ಲಾಭ-ನಷ್ಟದ ಲೆಕ್ಕಾಚಾರ

ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಪವರ್‌ಗ್ರಿಡ್ ಶೇ 1ರಷ್ಟು ಏರಿಕೆ ಕಂಡಿದ್ದು, ನಂತರದ ಸ್ಥಾನದಲ್ಲಿ ಎಲ್ & ಟಿ, ಎನ್‌ಟಿಪಿಸಿ, ಒಎನ್‌ಜಿಸಿ, ಐಟಿಸಿ, ಎಸ್‌ಬಿಐ, ಬಜಾಜ್ ಆಟೋ ಮತ್ತು ಐಸಿಐಸಿಐ ಬ್ಯಾಂಕ್ ಸೇರಿವೆ. ಮತ್ತೊಂದೆಡೆ ಬಜಾಜ್ ಫಿನ್‌ಸರ್ವ್, ಎಚ್‌ಡಿಎಫ್‌ಸಿ, ಏಷ್ಯಾನ್ ಪೆಯಿಂಟ್ಸ್ ಮತ್ತು ಡಾ.ರೆಡ್ಡಿಸ್​ ಟಾಪ್​ ಲೂಸರ್​ಗಳಾದರು.

ತಾತ್ಕಾಲಿಕ ವಿನಿಮಯ ದತ್ತಾಂಶದ ಪ್ರಕಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಶುಕ್ರವಾರ 1,499.37 ಕೋಟಿ ರೂ. ಮೌಲ್ಯದ ಷೇರು ಖರೀದಿಸಿದ್ದರಿಂದ ಬಂಡವಾಳ ಮಾರುಕಟ್ಟೆಯಲ್ಲಿ ನಿವ್ವಳ ಖರೀದಿದಾರರಾಗಿದ್ದರು.

ABOUT THE AUTHOR

...view details