ಮುಂಬೈ: ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರಗಳ ಹೆಚ್ಚಳವು ಮುಂಬೈ ಷೇರು ಮಾರುಕಟ್ಟೆ ಇಂದು ಕೂಡ ಸಕಾರಾತ್ಮಕವಾಗಿ ಸಾಗಲು ಕಾರಣವಾಗಿದೆ. ದಿನದ ಆರಂಭದಲ್ಲೇ ಸೆನ್ಸೆಕ್ಸ್ 846 ಅಂಕಗಳಷ್ಟು ಜಿಗಿತವಾಗಿ 57,662 ರಲ್ಲಿದ್ದರೆ, ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕ ನಿಫ್ಟಿ 236 ಅಂಶಗಳ ಏರಿಕೆ ಬಳಿಕ 17 ಸಾವಿರ ಗಡಿ ದಾಟಿದೆ.
ಐಆರ್‌ಸಿಟಿಸಿ, ಆಯಿಲ್, ಟಿವಿಸ್ ಮೋಟಾರ್ಸ್, ಎಂಆರ್‌ಎಫ್, ಬಜಾಬ್ ಫೈನ್‌ಸರ್ವ್, ಟೈಟಾನ್, ಪವರ್‌ಗ್ರೀಡ್, ರಿಲಯನ್ಸ್, ಏಷಿಯನ್ ಪೇಂಟ್ಸ್ ಸಂಸ್ಥೆಗಳು ಲಾಭದಲ್ಲಿವೆ. ಮತ್ತೊಂದೆಡೆ ಪೇಟಿಎಂ, ಮ್ಯಾಕ್ಸ್ ಹೆಲ್ತ್, ಟಿನ್ ಇಂಡಿಯಾ ಷೇರುಗಳು ನಷ್ಟದಲ್ಲಿ ವಹಿವಾಟ ನಡೆಸುತ್ತಿವೆ.