ಮುಂಬೈ: ಜಾಗತಿಕ ಮಾರುಕಟ್ಟೆಯ ಸಕಾರಾತ್ಮಕ ಪ್ರವೃತ್ತಿಯ ಮಧ್ಯೆ ರಿಲಯನ್ಸ್ ಇಂಡಸ್ಟ್ರೀಸ್, ಆಕ್ಸಿಸ್ ಬ್ಯಾಂಕ್ ಮತ್ತು ಟಿಸಿಎಸ್ ಲಾಭದಿಂದಾಗಿ ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಗುರುವಾರದ ವಹಿವಾಟಿನಂದು 258 ಅಂಕ ಏರಿಕೆ ದಾಖಲಿಸಿದೆ.
30 ಷೇರುಗಳ ಬಿಎಸ್‌ಇ ಸೂಚ್ಯಂಕ 257.62 ಅಂಕ ಅಥವಾ 0.51ರಷ್ಟು ಹೆಚ್ಚಳವಾಗಿ 51,039.31 ಅಂಕಗಳ ಮಟ್ಟಕ್ಕೆ ತಲುಪಿದೆ. ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 115.35 ಅಂಕ ಅಥವಾ 0.77ರಷ್ಟು ಏರಿಕೆ ಕಂಡು 15,097.35 ಅಂಕಗಳಿಗೆ ಮುಟ್ಟಿತು.
ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಒಎನ್‌ಜಿಸಿ ಶೇ 5ರಷ್ಟು ಗಳಿಸಿದ್ದು ಎನ್‌ಟಿಪಿಸಿ, ರಿಲಯನ್ಸ್ ಇಂಡಸ್ಟ್ರೀಸ್, ಇಂಡಸ್ಇಂಡ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಪವರ್‌ಗ್ರಿಡ್ ನಂತರದ ಸ್ಥಾನದಲ್ಲಿವೆ. ಮತ್ತೊಂದಡೆ ಐಸಿಐಸಿಐ ಬ್ಯಾಂಕ್, ನೆಸ್ಲೆ ಇಂಡಿಯಾ, ಎಲ್ & ಟಿ, ಕೊಟಾಕ್ ಬ್ಯಾಂಕ್ ಮತ್ತು ಟೈಟಾನ್ ದಿನದ ಟಾಪ್ ಲೂಸರ್ಗಳಾದವು.
ಇದನ್ನೂ ಓದಿ: ನೀರವ್ ಮೋದಿ ಭಾರತ ಹಸ್ತಾಂತರಕ್ಕೆ ಲಂಡನ್ ನ್ಯಾಯಾಲಯ ಅಸ್ತು..
ದೇಶೀಯ ಷೇರುಗಳ ಸತತ ಮೂರನೇ ದಿನದ ಜಿಗಿತದಿಂದ ನಿಫ್ಟಿ ಮತ್ತೆ 15,000 ಅಂಕಗಳ ಗಡಿ ದಾಟಿದೆ. ಜಾಗತಿಕ ಷೇರುಗಳಿಂದ ಬಲವಾದ ಸೂಚನೆ ಮತ್ತು ಫೆಡ್ ಅಧ್ಯಕ್ಷ ಪೊವೆಲ್ ಅವರ ಹೇಳಿಕೆ ಮಾರುಕಟ್ಟೆ ರ್ಯಾಲಿ ಬೆಂಬಲಿಸಿದೆ ಎಂದು ರಿಲಯನ್ಸ್ ಸೆಕ್ಯೂರಿಟಿಸ್ ಮುಖ್ಯ ಸ್ಟ್ಯಾಟರ್ಜಿಸ್ಟ್ ಬಿನೊದ್ ಮೋದಿ ಹೇಳಿದರು.
ಎಫ್‌ಎಂಸಿಜಿ ಹೊರತುಪಡಿಸಿ ಎಲ್ಲಾ ಪ್ರಮುಖ ವಲಯ ಸೂಚ್ಯಂಕಗಳು ಹಸಿರು ಬಣ್ಣದಲ್ಲಿ ಕೊನೆಗೊಂಡವು. ಹಣಕಾಸು, ಆಟೋ ಮತ್ತು ಫಾರ್ಮಾ ಸೂಚ್ಯಂಕಗಳು ಶೇ 1ರಷ್ಟು ಲಾಭ ಗಳಿಸಿವೆ.
ಏಷ್ಯಾದ ಇತರೆಡೆಗಳಲ್ಲಿ ಶಾಂಘೈ, ಹಾಂಕಾಂಗ್, ಸಿಯೋಲ್ ಮತ್ತು ಟೋಕಿಯೊ ಷೇರುಪೇಟೆಗಳು ಸಕರಾತ್ಮಕ ಹಾದಿಯಲ್ಲಿ ಸಾಗಿದವು. ಯುರೋಪ್ನಲ್ಲಿನ ಸ್ಟಾಕ್ ಎಕ್ಸ್ಚೇಜ್ಗಳು ಮಧ್ಯಂತರ ಅವಧಿಯಲ್ಲಿ ಸಕಾರಾತ್ಮಕ ವ್ಯಾಪಾರ ಮಾಡುತ್ತಿದ್ದವು. ಜಾಗತಿಕ ತೈಲ ಮಾನದಂಡವಾದ ಬ್ರೆಂಟ್ ಕಚ್ಚಾ ಬ್ಯಾರೆಲ್‌ಗೆ ಶೇ 0.50ರಷ್ಟು ಹೆಚ್ಚಳವಾಗಿ 66.51 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ.