ಮುಂಬೈ:ಸ್ಥಿರವಾದ ವಿದೇಶಿ ನಿಧಿಯ ಒಳಹರಿವು ಹಾಗೂ ಜಾಗತಿಕ ವಿದ್ಯಮಾನಗಳ ಸಕಾರಾತ್ಮಕ ಪರಿಣಾಮದಿಂದ ಮುಂಬೈ ಪೇಟೆಯ ಸೆನ್ಸೆಕ್ಸ್ 225 ಅಂಕಗಳ ಏರಿಕೆ ದಾಖಲಿಸಿದೆ.
ಕಳೆದ ನಾಲ್ಕು ವಹಿವಾಟಿನ ಅವಧಿಗಳಲ್ಲಿ ದೇಶಿ ಪೇಟೆಯು ಸಕಾರಾತ್ಮಕವಾಗಿ ಸಾಗಿತು. ಮಂಗಳವಾರದ ವಹಿವಾಟಿನ ಅಂತ್ಯಕ್ಕೆ ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್ 225 ಅಂಕಗಳ ಏರಿಕೆ ದಾಖಲಿಸಿ 38,407.01 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 52.35 ಅಂಕಗಳ ಜಿಗಿತಗೊಂಡು 11,322.50 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು.
ಆ್ಯಕ್ಸಸ್ ಬ್ಯಾಂಕ್ ದಿನದ ವಹಿವಾಟಿನಲ್ಲಿ ಟಾಪ್ ಗೇನರ್ ಆಗಿದ್ದರೇ ಇಂಡಸ್ಇಂಡ್ ಬ್ಯಾಂಕ್, ಐಟಿಸಿ, ಎಚ್ಡಿಎಫ್ಸಿ ಬ್ಯಾಂಕ್, ಎಚ್ಡಿಎಫ್ಸಿ, ಟಾಟಾ ಸ್ಟೀಲ್, ಐಸಿಐಸಿಐ ಬ್ಯಾಂಕ್ ಮತ್ತು ರಿಲಯನ್ಸ್ ನಂತರದ ಸ್ಥಾನ ಪಡೆದವು.