ಮುಂಬೈ: ಕೊರೊನಾ ಪ್ರೇರೇಪಿತ 4ನೇ ಹಂತದ ಲಾಕ್ಡೌನ್ ಬಳಿಕ ಸಾಕಷ್ಟು ವಿನಾಯಿತಿ ನೀಡಿದ ಬಳಿಕದ ಮೊದಲ ದಿನದ ಷೇರುಪೇಟೆ ವಹಿವಾಟಿನಲ್ಲಿ ಖರೀದಿಯ ಉತ್ಸಾಹ ಕಂಡುಬಂದಿದೆ.
ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಮುಂಬೈ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 1,000 ಅಂಶಗಳಷ್ಟು ಏರಿಕೆ ಕಂಡಿತ್ತು. ಬ್ಯಾಂಕಿಗ್ ವಲಯ ಷೇರುಗಳಲ್ಲಿ ಖರೀದಿಯ ಭರಾಟೆ ಕಂಡುಬಂದಿತ್ತು.
ದಿನದ ಅಂತ್ಯಕ್ಕೆ ಬಿಎಸ್ಇ ಸೆನ್ಸೆಕ್ಸ್ 879 ಅಂಕ ಅಥವಾ ಶೇ 2.71ರಷ್ಟು ಏರಿಕೆ ಕಂಡು 33,303.52 ಅಂಶಗಳ ಮಟ್ಟದಲ್ಲಿ ಕೊನೆಗೊಂಡಿತು. 30 ಘಟಕಗಳ ಪೈಕಿ 25 ಯೂನಿಟ್ಗಳು ಪ್ರಗತಿ ಸಾಧಿಸಿದ್ದರೇ 5 ಘಟಕಗಳು ಕುಸಿದವು. ಬಜಾಜ್ ಫೈನಾನ್ಸ್ (ಶೇ 10ಕ್ಕಿಂತಲೂ ಅಧಿಕ) ಸೂಚ್ಯಂಕದಲ್ಲಿ ಅಗ್ರ ಲಾಭ ಗಳಿಸಿದ್ದರೇ ಸನ್ ಫಾರ್ಮಾ (ಶೇ 2ರಷ್ಟು ಕುಸಿದು) ಅತಿದೊಡ್ಡ ನಷ್ಟ ಕಂಡಿತು.