ಕರ್ನಾಟಕ

karnataka

ETV Bharat / business

ಇಂಗ್ಲೆಂಡ್​​ನ ಅದೊಂದು ಘೋಷಣೆಗೆ ಕೋಟ್ಯಂತರ ರೂ. ಸಂಪತ್ತು ಬಾಚಿಕೊಂಡ ಹೂಡಿಕೆದಾರರು..! - ನಿಫ್ಟಿ

ಹಗ್ಗ ಜಗ್ಗಾಟದಂತೆ ನಡೆಯುತ್ತಿರುವ ಬ್ರೆಕ್ಸಿಟ್​ ವಿವಾದದ ಬಗ್ಗೆ ಬ್ರಿಟನ್ ಮತ್ತು ಯುರೋಪಿಯನ್ ಒಕ್ಕೂಟ ನೂತನ ಕರಾರು ಮಾಡಿಕೊಂಡಿದೆ. ಇದರಿಂದ ಪ್ರತ್ಯೇಕ ಕರೆನ್ಸಿ, ಕಾನೂನು ವ್ಯವಸ್ಥೆ ಇರಲಿದೆ. ಇದರಡಿಯ ದೇಶದ ಕಾನೂನಿಗಿಂತ ಒಕ್ಕೂಟದ ಕಾನೂನು ಅಂತಿಮವಾಗಿರಲಿದೆ. ಒಕ್ಕೂಟದಲ್ಲಿ ಒಂದು ರಾಷ್ಟ್ರದ ಪ್ರಜೆ ಮತ್ತೊಂದು ರಾಷ್ಟ್ರಕ್ಕೆ ವಲಸೆ ಹೋಗಲು ಅವಕಾಶವಿದೆ. ಯುರೋಪಿಯನ್​ ಒಕ್ಕೂಟದ ರಾಜಕೀಯ ಈ ನಡೆಗೆ ಮುಂಬೈ ಷೇರುಪೇಟೆಯ ಹೂಡಿಕೆದಾರರು ಖರೀದಿಯ ಭರಾಟೆಯಲ್ಲಿ ತೊಡಗಿದ ಪರಿಣಾಮ ಸೆನ್ಸೆಕ್ಸ್​ನಲ್ಲಿ 453 ಅಂಶಗಳ ಏರಿಕೆ ದಾಖಲಿಸಿದೆ.

ಸಾಂದರ್ಭಿಕ ಚಿತ್ರ

By

Published : Oct 17, 2019, 5:35 PM IST

ಮುಂಬೈ: ಯುರೋಪಿಯನ್​ ಒಕ್ಕೂಟಕ್ಕೆ ಸಂಬಂಧಿಸಿದ ಬ್ರೆಕ್ಸಿಟ್ ಒಪ್ಪಂದದ ಬಗ್ಗೆ ಮಹತ್ವದ ನಿರ್ಧಾರವೊಂದರ ಘೋಷಣೆ ಹೊರಬೀಳುತ್ತಿದ್ದಂತೆ ಮುಂಬೈ ಷೇರುಪೇಟೆಯ ನಿಫ್ಟಿ ಮತ್ತು ಸೆನ್ಸೆಕ್ಸ್​ ಗುರುವಾರದ ವಹಿವಾಟಿನಲ್ಲಿ ಏರಿಕೆ ದಾಖಲಿಸಿವೆ.

ಕಳೆದ ಕೆಲವು ದಿನಗಳಿಂದ ಹಗ್ಗ ಜಗ್ಗಾಟದಂತೆ ನಡೆಯುತ್ತಿದ್ದ ಬ್ರೆಕ್ಸಿಟ್​ ವಿವಾದದ ಬಗ್ಗೆ ಬ್ರಿಟನ್ ಮತ್ತು ಯುರೋಪಿಯನ್ ಒಕ್ಕೂಟ ನೂತನ ಕರಾರು ಮಾಡಿಕೊಂಡಿವೆ. ಇದರಿಂದ ಪ್ರತ್ಯೇಕ ಕರೆನ್ಸಿ, ಕಾನೂನು ವ್ಯವಸ್ಥೆ ಇರಲಿದೆ. ಇದರಡಿಯ ದೇಶದ ಕಾನೂನಿಗಿಂತ ಒಕ್ಕೂಟದ ಕಾನೂನು ಅಂತಿಮವಾಗಿರಲಿದೆ. ಒಕ್ಕೂಟದಲ್ಲಿ ಒಂದು ರಾಷ್ಟ್ರದ ಪ್ರಜೆ ಮತ್ತೊಂದು ರಾಷ್ಟ್ರಕ್ಕೆ ವಲಸೆ ಹೋಗಲು ಅವಕಾಶವಿದೆ.

ಸಂಸತ್ತಿನ ಅಂಗೀಕಾರದ ಬಳಿಕ ಇತರ ಪ್ರಮುಖ ಸಮಸ್ಯೆಗಳತ್ತ ಗಮನ ಹರಿಸಲು ಸಾಧ್ಯವಾಗುತ್ತದೆ ಎಂದು ಬ್ರಿಟನ್ ಪ್ರಧಾನಿ ಟ್ವೀಟ್ ಮಾಡಿದ್ದಾರೆ. ಯುರೋಪನಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳು ಮುಂಬೈ ಷೇರುಪೇಟೆಯ ಮೇಲೆ ಪ್ರಭಾವ ಬೀರಿವೆ. ತತ್ಪರಿಣಾಮ, ಗುರುವಾರದ ವಹಿವಾಟಿನ ಅಂತ್ಯದ ವೇಳೆಗೆ ಸೆನ್ಸೆಕ್ಸ್ 453.07 ಅಂಕಗಳ ಏರಿಕೆ ಕಂಡು 39,052.06 ಮಟ್ಟದಲ್ಲೂ ನಿಫ್ಟಿ 122.35 ಅಂಕಗಳ ಜಿಗಿತವಾಗಿ 11,586.06 ಮಟ್ಟದಲ್ಲಿ ಆಶಾದಾಯಕವಾಗಿ ಕೊನೆಗೊಂಡಿತ್ತು.

ABOUT THE AUTHOR

...view details