ಮುಂಬೈ: ಬೆಳ್ಳಂಬೆಳಗ್ಗೆ ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್ 260 ಅಂಕ ಕೆಳಗಿಳಿದು ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಸಿದೆ.
ಮಾರುಕಟ್ಟೆ ಮಾನದಂಡ ಬಿಎಸ್‌ಇ ಸೆನ್ಸೆಕ್ಸ್ ಶುಕ್ರವಾರ ವಹಿವಾಟಿನಂದು260 ಅಂಕಗಳೊಂದಿಗೆ ಇಳಿಕೆ ಕಂಡು 43,090ಕ್ಕೆ ತಲುಪಿದೆ.

ಬ್ರಾಡರ್ ಎನ್ಎಸ್ಇ ನಿಫ್ಟಿ ಸಹ ಕುಸಿತ ಕಂಡು 12,621ಕ್ಕೆ ತಲುಪಿದೆ.
ದಿನದ ವಹಿವಾಟು ಅಂತ್ಯದ ವೇಳೆಗೆ ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್ 236 ಅಂಕ ಇಳಿಕೆಯಾಗಿ 43,357 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 58 ಅಂಕ ಇಳಿಕೆಯಾಗಿ 12,691 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು. 10:20 ರ ವೇಳೆ ಮತ್ತೆ ಚೇತರಿಕೆ ಹಾದಿ ಹಿಡಿದ ಪೇಟೆ 100 ಹೆಚ್ಚಿನ ಅಂಕಗಳ ಏರಿಕೆ ದಾಖಲಿಸಿದೆ.
ನಿನ್ನೆ ಕೂಡಾ ಷೇರುಮಾರುಕಟ್ಟೆಯಲ್ಲಿ ಇಳಿಕೆ ಕಂಡು ಬಂದಿತ್ತು. ಇಂದೂ ಕೂಡಾ ಆರಂಭಿಕ ಹೊಯ್ದಾಟದಲ್ಲಿ ಷೇರು ವ್ಯವಹಾರ ನಡೆಯುತ್ತಿದೆ.