ಮುಂಬೈ: ಉಕ್ರೇನ್ ದೇಶವಾಗಿ ಉಳಿಯೋದೇ ಅನುಮಾನ ಎಂಬ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಅವರ ಹೇಳಿಕೆ ಭಾರಿ ಸಂಚಲನಕ್ಕೆ ಕಾರಣವಾಗಿದ್ದು, ಜಾಗತಿಕ ಷೇರುಮಾರುಕಟ್ಟೆ ಮೇಲೆ ಭಾರಿ ಪರಿಣಾಮ ಬೀರಿದೆ. ಮುಂಬೈ ಷೇರುಮಾರುಕಟ್ಟೆಯಲ್ಲಿ ವಾರದ ಆರಂಭದಲ್ಲೇ ಸೆನ್ಸೆಕ್ಸ್ 1,594 ಅಂಕಗಳ ಮಹಾ ಪತನ ಕಂಡರೆ, ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 447 ಅಂಶಗಳ ನಷ್ಟ ಅನುಭವಿಸಿದೆ.
ಮುಂಬೈ ಷೇರುಪೇಟೆಯಲ್ಲಿ ಮತ್ತೊಂದು ಮಹಾ ಪತನ; ಸೆನ್ಸೆಕ್ಸ್ 1,594 ಅಂಕಗಳಷ್ಟು ನಷ್ಟ..!
ಮುಂಬೈ ಷೇರುಮಾರುಕಟ್ಟೆಯಲ್ಲಿ ದಿನದ ಆರಂಭದಲ್ಲೇ ಸೆನ್ಸೆಕ್ಸ್ 1,594 ಅಂಕಗಳ ನಷ್ಟದ ಬಳಿಕ 52,739ರಲ್ಲಿ, ನಿಫ್ಟಿ 447 ಅಂಕಗಳನ್ನು ಕಳೆದುಕೊಂಡು 15,798ರಲ್ಲಿ ವಹಿವಾಟು ನಡೆಸುತ್ತಿವೆ.
ಮುಂಬೈ ಷೇರುಪೇಟೆಯಲ್ಲಿ ಮತ್ತೊಂದು ಮಹಾ ಪತನ; ಸೆನ್ಸೆಕ್ಸ್ 1,594 ಅಂಕಗಳಷ್ಟು ನಷ್ಟ..!
ಸೆನ್ಸೆಕ್ಸ್ 1,594 ಅಂಕಗಳ ನಷ್ಟದ ಬಳಿಕ 52,739ರಲ್ಲಿ, ನಿಫ್ಟಿ 447 ಅಂಕಗಳನ್ನು ಕಳೆದುಕೊಂಡು 15,798ರಲ್ಲಿ ವಹಿವಾಟು ನಡೆಸುತ್ತಿವೆ. ಬಜಾಬ್ ಫೈನಾನ್ಸ್ ಷೇರುಗಳ ಮೌಲ್ಯ ಶೇ.6ರಷ್ಟು ಕಳೆದುಕೊಂಡಿದೆ. ಇತರ ಪ್ರಮುಖ ಷೇರು ಕಂಪನಿಗಳಾದ ಮಾರುಕತಿ ಸುಜುಕಿ, ಏಷಿಯನ್ ಪೇಂಟ್ಸ್, ಟೈಟಾನ್, ಎಂಆರ್‌ಎಫ್, ರಿಲಯನ್ಸ್, ಟಾಟಾ ಷೇರುಗಳೂ ನಷ್ಟದಲ್ಲಿ ಸಾಗಿವೆ. ಆಯಿಲ್ ಹಾಗೂ ಪಂಜಾಬ್ ಹೌಸಿಂಗ್ ಷೇರುಗಳು ಲಾಭದಲ್ಲಿದ್ದವು.
ಇದನ್ನೂ ಓದಿ:ರಷ್ಯಾ ದಾಳಿ ಮುಂದುವರಿಕೆ ಎಫೆಕ್ಟ್; ಹೊಸ ದಾಖಲೆ ಬರೆದ ತೈಲ, ಬ್ಯಾರಲ್‌ಗೆ 130 ಡಾಲರ್ಗೆ ಏರಿಕೆ