ಮುಂಬೈ :ಜಾಗತಿಕ ಮಾನದಂಡಗಳಲ್ಲಿನ ಋಣಾತ್ಮಕ ಪ್ರವೃತ್ತಿಯ ಮಧ್ಯೆ ಮಾರುಕಟ್ಟೆ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಸೋಮವಾರದಂದು ಕನಿಷ್ಠ ನಷ್ಟದೊಂದಿಗೆ ಕೊನೆಗೊಂಡಿದೆ.
ಆರಂಭಿಕ ವಹಿವಾಟಿನಲ್ಲಿ 750 ಅಂಕ ಕುಸಿದ ನಂತರ 30- ಷೇರುಗಳ ಬಿಎಸ್‌ಇ ಸೂಚ್ಯಂಕವು ಯು - ಟರ್ನ್ ಹೊಡೆದು ಅಂತಿಮವಾಗಿ 63.84 ಅಂಕ ಇಳಿಕೆಯಾಗಿ 48,718.52 ಅಂಕಗಳಿಗೆ ತಲುಪಿದೆ. ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 3.05 ಅಂಕ ಹೆಚ್ಚಳವಾಗಿ 14,634.15 ಅಂಕಗಳಲ್ಲಿ ಅಂತ್ಯವಾಯಿತು.
ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಟೈಟಾನ್ ಶೇ.4ಕ್ಕಿಂತಲೂ ಹೆಚ್ಚು ಕುಸಿದಿದೆ. ಇಂಡಸ್ಇಂಡ್ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಆಕ್ಸಿಸ್ ಬ್ಯಾಂಕ್, ಕೊಟಕ್ ಬ್ಯಾಂಕ್, ಒಎನ್‌ಜಿಸಿ, ಐಟಿಸಿ ಮತ್ತು ಐಸಿಐಸಿಐ ಬ್ಯಾಂಕ್ ನಂತರದ ಸ್ಥಾನದಲ್ಲಿವೆ.
ಮತ್ತೊಂದೆಡೆ ಭಾರ್ತಿ ಏರ್‌ಟೆಲ್, ಹೆಚ್‌ಯುಎಲ್, ಮಾರುತಿ, ಬಜಾಜ್ ಫೈನಾನ್ಸ್, ಏಷ್ಯನ್ ಪೇಂಟ್ಸ್ ಮತ್ತು ಎನ್‌ಟಿಪಿಸಿ ಟಾಪ್ ಗೇನರ್ಗಳಾದರು. ದುರ್ಬಲ ಜಾಗತಿಕ ಸೂಚನೆಗಳ ಹೊರತಾಗಿಯೂ ದೇಶೀಯ ಷೇರುಗಳು ದಿನದ ಕನಿಷ್ಠ ಮಟ್ಟದಿಂದ ತೀವ್ರವಾಗಿ ಚೇತರಿಸಿಕೊಂಡಿವೆ.