ಮುಂಬೈ: ಜಾಗತಿಕ ಷೇರು ಮಾರುಕಟ್ಟೆಗಳ ಸಕಾರಾತ್ಮಕ ಸೂಚನೆಗಳ ನಡುವೆ ಭಾರತೀಯ ಷೇರು ಸೂಚ್ಯಂಕಗಳು ಸೋಮವಾರ ಏರಿಕೆ ದಾಖಲಿಸಿವೆ.
ಸೋಮವಾರದ ವಹಿವಾಟಿನ ಅಂತ್ಯದ ವೇಳೆಗೆ ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್ 364.36 ಅಂಕ ಅಥವಾ ಶೇ 0.95ರಷ್ಟು ಏರಿಕೆ ಕಂಡು 38,799.08 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 94.85 ಅಂಕ ಅಥವಾ ಶೇ 0.83ರಷ್ಟು ಅಂಕ ಜಿಗಿತದೊಂದಿದೆ 11,466.45 ಅಂಕಗಳಲ್ಲಿ ಕೊನೆಗೊಂಡಿತು.
ಇಂಡಸ್ಇಂಡ್ ಬ್ಯಾಂಕ್ ಷೇರು ಮೌಲ್ಯ ಶೇ 3.4ರಷ್ಟು ಹೆಚ್ಚಳದೊಂದಿಗೆ ಗರಿಷ್ಠ ಲಾಭದಾಯಕ ಕಂಪನಿಯಾಗಿ ಹೊರಹೊಮ್ಮಿತು. ಕೋಟಾಕ್ ಬ್ಯಾಂಕ್, ಬಜಾಜ್ ಫೈನಾನ್ಸ್, ಹೆಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಮಾರುತಿ, ಹೆಚ್‌ಡಿಎಫ್‌ಸಿ, ಎಸ್ಬಿಐಎನ್, ಆಕ್ಸಿಸ್ ಬ್ಯಾಂಕ್ ಮತ್ತು ಭಾರ್ತಿ ಏರ್‌ಟೆಲ್ ನಂತರದ ಸ್ಥಾನದಲ್ಲಿವೆ.
ಇನ್ಫೋಸಿಸ್, ಎಲ್ಟಿ, ಹಿಂದೂಸ್ತಾನ ಯುನಿಲಿವರ್, ಅಲ್ಟ್ರಾಟೆಕ್ ಸಿಮೆಂಟ್, ಬಜಾಜ್ ಆಟೋ, ಎನ್ಟಿಪಿಸಿ, ನೆಸ್ಲೆ, ಟೈಟನ್, ಎಂ&ಎಂ ಹಾಗೂ ಪವರ್ ಗ್ರಿಡ್ ದಿನದ ಟಾಪ್ ಲೂಸರ್ಗಳ ಸಾಲಿಗೆ ಸೇರ್ಪಡೆ ಆದರು.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶುಕ್ರವಾರದಂದು 30 ವರ್ಷಗಳ ಬಾಂಡ್ ಅನ್ನು ಶೇ 6.7596ರಷ್ಟು ಕಡಿತ ದರದಲ್ಲಿ ಮಾರಾಟ ಮಾಡಿದೆ. ಸಾಲ ಮಾರಾಟಕ್ಕಾಗಿ ಸರ್ಕಾರದ ಪರವಾಗಿ ಕಾರ್ಯನಿರ್ವಹಿಸುವ ಸೆಂಟ್ರಲ್ ಬ್ಯಾಂಕ್ ಮತ್ತೊಂದು ಸೆಕ್ಯೂರಿಟ್ ಬಾಂಡ್ ಅನ್ನು ಯೋಜಿಸಿದ್ದಕ್ಕಿಂತ ಹೆಚ್ಚುವರಿ ಇಳುವರಿಯಲ್ಲಿ ಮಾರಾಟ ಮಾಡಿ 20 ಬಿಲಿಯನ್ ರೂ. ಸಂಗ್ರಹಿಸಿದೆ.