ಕರ್ನಾಟಕ

karnataka

By

Published : Aug 6, 2021, 5:08 PM IST

ETV Bharat / business

ಗೂಳಿ ಓಟಕ್ಕೆ ಕರಡಿ ಬ್ರೇಕ್; ವಾರಾಂತ್ಯದಲ್ಲಿ 215 ಅಂಕಗಳ ಕುಸಿತದೊಂದಿಗೆ ಸೆನ್ಸೆಕ್ಸ್‌ 54,277ರಲ್ಲಿ ವಹಿವಾಟು ಮುಕ್ತಾಯ

ಆರ್‌ಬಿಐನ ಹಣಕಾಸು ನೀತಿಗಳಲ್ಲಿ ಯಾವುದೇ ಬದಲಾವಣೆ ಇಲ್ಲದ ಪರಿಣಾಮ ಮುಂಬೈ ಷೇರು ಮಾರುಕಟ್ಟೆಯಲ್ಲಿ ಗೂಳಿ ಓಟಕ್ಕೆ ಬ್ರೇಕ್‌ ಹಾಕಿದೆ. ಸೆನ್ಸೆಕ್ಸ್‌ 215 ಅಂಕಗಳ ಕುಸಿತದೊಂದಿಗೆ 54,277ರಲ್ಲಿ ವಹಿವಾಟು ಮುಗಿಸಿದೆ. ನಿಫ್ಟಿ 56 ಅಂಕ ಕಳೆದುಕೊಂಡು 16,238ಕ್ಕೆ ತಲುಪಿದೆ.

Sensex ends 215 pts lower as Reliance tumbles; RBI keeps rates unchanged
ಗೂಳಿ ಓಟಕ್ಕೆ ಕರಡಿ ಬ್ರೇಕ್ ; ವಾರಾಂತ್ಯದಲ್ಲಿ 215 ಅಂಕಗಳ ಕುಸಿತದೊಂದಿಗೆ ಸೆನ್ಸೆಕ್ಸ್‌ 54,277ರಲ್ಲಿ ವಹಿವಾಟು ಮುಕ್ತಾಯ

ಮುಂಬೈ: ವಾರಾಂತ್ಯದಲ್ಲಿ ಷೇರು ಮಾರುಕಟ್ಟೆಯಲ್ಲಿ ಗೂಳಿ ನಿರಂತರ ಓಟಕ್ಕೆ ಕರಡಿ ಅಡ್ಡಿಯಾಗಿದ್ದು, ಭಾರಿ ಕುಸಿತ ಕಂಡಿದೆ. ಸೆನ್ಸೆಕ್ಸ್ 215 ಅಂಕಗಳ ನಷ್ಟದೊಂದಿಗೆ 54,277ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 56 ಅಂಕ ಕಳೆದು ಕೊಂಡು 16,238 ಕ್ಕೆ ತಲುಪಿತು. ಇಂಡಸ್ ಇಂಡ್ ಬ್ಯಾಂಕ್, ಟೆಕ್ ಮಹೀಂದ್ರಾ, ಭಾರ್ತಿ ಏರ್‌ಟೆಲ್, ಮಾರುತಿ ಮತ್ತು ಎನ್‌ಟಿಪಿಸಿ ಷೇರುಗಳು ಹೆಚ್ಚಿನ ಲಾಭ ಗಳಿಸಿವೆ. ರಿಲಯನ್ಸ್ ಇಂಡಸ್ಟ್ರೀಸ್, ಅಲ್ಟ್ರಾಟೆಕ್ ಸಿಮೆಂಟ್, ಟಾಟಾ ಸ್ಟೀಲ್, ಎಚ್‌ಸಿಎಲ್ ಟೆಕ್ ಮತ್ತು ಎಚ್‌ಡಿಎಫ್‌ಸಿ ಅತಿ ಹೆಚ್ಚು ನಷ್ಟ ಅನುಭವಿಸಿವೆ.

ರಿಲಯನ್ಸ್ ಇಂಡಸ್ಟ್ರೀಸ್‌ನ ಭಾರಿ ನಷ್ಟ ಅನುಭವಿಸಿತು. ಲೋಹ, ಎಫ್‌ಎಂಸಿಜಿ ಮತ್ತು ಐಟಿ ಷೇರುಗಳ ಮೇಲಿನ ಮಾರಾಟದ ಒತ್ತಡವು ಕಡಿಮೆಯಾಗಿತ್ತು. ಬ್ಯಾಂಕಿಂಗ್ ಮತ್ತು ಆಟೋ ಷೇರುಗಳು ಸಕಾರಾತ್ಮಕವಾಗಿ ಸ್ಪಂದಿಸಿದವು. ಐಟಿ ಷೇರುಗಳು ಅಸ್ಥಿರತೆ ಕಾಪಾಡಿಕೊಂಡಿವೆ. ಆರ್ಥಿಕ ಚೇತರಿಕೆಗಾಗಿ ಆರ್‌ಬಿಐನ ಹಣಕಾಸು ನೀತಿ ಕುರಿತ ಸಭೆಯ ಫಲಿತಾಂಶವು ಮಹತ್ವದ ನಿರ್ಧಾರಗಳ ನಿರೀಕ್ಷಿಸಲಾಗಿತ್ತು. ಮೃದುವಾದ ಹಣಕಾಸು ನೀತಿಯ ಷೇರುಗಳ ಕುಸಿತ ಕಂಡಿದೆ ಎಂದು ರಿಲಯನ್ಸ್ ಸೆಕ್ಯುರಿಟೀಸ್‌ನ ಸ್ಟ್ರಾಟಜಿ ಮುಖ್ಯಸ್ಥ ಬಿನೋದ್ ಮೋದಿ ತಿಳಿಸಿದ್ದಾರೆ.

ಇದನ್ನೂ ಓದಿ: ಕೋವಿಡ್​ ಎರಡನೇ ಅಲೆ ನಂತರ ಚೇತರಿಕೆಗಾಗಿ ಬಡ್ಡಿದರದಲ್ಲಿ ಯಥಾಸ್ಥಿತಿ: ಆರ್​ಬಿಐ

ರಿಲಯನ್ಸ್- ಫ್ಯೂಚರ್ ಗ್ರೂಪ್ ಒಪ್ಪಂದದಲ್ಲಿ ಅಮೆಜಾನ್ ಪರವಾಗಿ ಸುಪ್ರೀಂಕೋರ್ಟ್ ತೀರ್ಪು ಬಂದ ನಂತರ ಆರ್‌ಐಎಲ್‌ ಷೇರುಗಳ ಮೇಲೆ ಪರಿಣಾಮ ಬೀರಿದೆ. ಶಾಂಘೈ, ಹಾಂಕಾಂಗ್ ಮತ್ತು ಸಿಯೋಲ್‌ನಲ್ಲಿನ ಷೇರುಗಳು ನಷ್ಟ ಅನುಭವಿಸಿವೆ. ಏತನ್ಮಧ್ಯೆ ಅಂತಾರಾಷ್ಟ್ರೀಯ ತೈಲ ಬೆಲೆ ಏರಿಕೆ ಕಂಡಿದ್ದು, ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 0.56 ಶೇಕಡಾ ಏರಿಕೆಯಾಗಿ 71.69 ಡಾಲರ್‌ಗೆ ತಲುಪಿದೆ.

ABOUT THE AUTHOR

...view details