ಕರ್ನಾಟಕ

karnataka

ETV Bharat / business

450 ಅಂಶಗಳು ಕುಸಿದ ಮುಂಬೈ ಷೇರುಪೇಟೆ ಸೂಚ್ಯಂಕ​ - Sensex Today News

ಕಳೆದ ಶುಕ್ರವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಸಾರ್ವಜನಿಕ ವಲಯದ (ಪಿಎಸ್​ಬಿ) 10 ಬ್ಯಾಂಕ್​ಗಳನ್ನು ವಿಲೀನಗೊಳಿಸಿ ಈಗಿನ 18 ಬ್ಯಾಂಕ್​ಗಳ ಸಂಖ್ಯೆ 12ಕ್ಕೆ ತಗ್ಗಿಸುವುದಾಗಿ ಘೋಷಿಸಿದ್ದರು. ಭಾನುವಾರ ಬಿಡುಗಡೆಯಾದ ವಾಹನೋದ್ಯಮ ಮಾರಾಟ ಬೆಳವಣಿಗೆಯ ಅಂಕಿ -ಅಂಶಗಳು ಋಣಾತ್ಮಕ ಪ್ರವೃತ್ತಿ ಮುಂದುವರಿದಿದೆ ಎಂಬುದಾಗಿ ಬಹಿರಂಗ ಪಡಿಸಿದ್ದವು.

ಸಾಂದರ್ಭಿಕ ಚಿತ್ರ

By

Published : Sep 3, 2019, 1:22 PM IST

Updated : Sep 3, 2019, 3:32 PM IST

ಮುಂಬೈ: ಜಾಗತಿಕ ಸಮುದಾಯ ರಾಷ್ಟ್ರಗಳಲ್ಲಿ ತೂರಿ ಬಂದ ಮಿಶ್ರ ಪ್ರತಿಕ್ರಿಯೆಯಿಂದಾಗಿ ಮುಂಬೈ ಷೇರು ಪೇಟೆಯು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ನಕರಾತ್ಮಕವಾಗಿ ಸಾಗಿದೆ.

ಕಳೆದ ಶುಕ್ರವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಸಾರ್ವಜನಿಕ ವಲಯದ (ಪಿಎಸ್​ಬಿ) 10 ಬ್ಯಾಂಕ್​ಗಳನ್ನು ವಿಲೀನಗೊಳಿಸಿ ಈಗಿನ 18 ಬ್ಯಾಂಕ್​ಗಳ ಸಂಖ್ಯೆ 12ಕ್ಕೆ ತಗ್ಗಿಸುವುದಾಗಿ ಘೋಷಿಸಿದ್ದರು. ವಾಹನಗಳ ಮಾರಾಟ ಬೆಳವಣಿಗೆಗೆ ಸಂಬಂಧಿಸಿದಂತೆ ಭಾನುವಾರ ಬಿಡುಗಡೆಯಾದ ಆಗಸ್ಟ್​ ತಿಂಗಳ ಅಂಕಿ ಅಂಶಗಳು, 'ಉದ್ಯಮದಲ್ಲಿ ಋಣಾತ್ಮಕ ಪ್ರವೃತ್ತಿ ಮುಂದುವರಿದಿದೆ' ಎಂಬುದಾಗಿ ಬಹಿರಂಗ ಪಡಿಸಿದ್ದವು.

ಈ ಎರಡೂ ಬೆಳವಣಿಗೆಯ ಬೆನ್ನಲ್ಲೇ ಮಂಗಳವಾರ ಆರಂಭವಾದ ವಹಿವಾಟಿನಲ್ಲಿ ಬ್ಯಾಂಕಿಂಗ್ ವಲಯದ ಷೇರುಗಳ ಮೌಲ್ಯ ಮುಗ್ಗಿರಿಸಿದೆ. ಪ್ರತಿಯಾಗಿ ಸೆನ್ಸೆಕ್ಸ್​ ಬೆಳಗ್ಗೆ 10.17ರ ವೇಳೆಗೆ 349 ಅಂಶಗಳು ಕುಸಿದು 36,983.60 ಅಂಶಗಳ ಮಟ್ಟದಲ್ಲೂ ಹಾಗೂ ನಿಫ್ಟಿ 117.95 ಅಂಶಗಳ ಇಳಿಕೆಯೊಂದಿಗೆ 10,905.95ರ ಮಟ್ಟದಲ್ಲಿ ವಹಿವಾಟು ನಿರತವಾಗಿದೆ.

ಪಿಎಸ್​ಬಿಯ ಇಂಡಿಯಾ ಬ್ಯಾಂಕ್​, ಪಿಎನ್​ಬಿ, ಒಬಿಸಿ, ಕೆನರಾ ಬ್ಯಾಂಕ್​, ಯೂನಿಯನ್​ ಬ್ಯಾಂಕ್​ ಷೇರುಗಳಲ್ಲಿ ಶೇ 6ರಷ್ಟು ಇಳಿಕೆಯಾಗಿದೆ. ಇದರ ಜೊತೆಗೆ ಯೆಸ್​ ಬ್ಯಾಂಕ್​, ಇಂಡಸ್​​ಲ್ಯಾಂಡ್​ ಬ್ಯಾಂಕ್, ಕೋಟಕ್​ ಬ್ಯಾಂಕ್, ಹೆಚ್​ಡಿಎಫ್​ಸಿ, ಐಸಿಐಸಿಐ ಬ್ಯಾಂಕ್​, ಏಷ್ಯನ್​ ಪೇಂಟ್ಸ್​, ಸನ್​ ಫಾರ್ಮಾ, ಟಾಟಾ ಮೋಟಾರ್ಸ್​, ಟಾಟಾ ಸ್ಟೀಲ್​, ಒಎನ್​ಜಿಸಿ ಸೇರಿದಂತೆ ಇತರೆ ಷೇರುಗಳ ದರ ಕೂಡ ಇಳಿಕೆ ಕಂಡಿವೆ.

ಹೀರೋ ಮೋಟಾರ್ಸ್​, ಟಿಸಿಎಸ್​, ಎಚ್​ಸಿಎಲ್​ ಟೇಕ್​, ಪವರ್​ ಗ್ರೀಡ್​, ಇನ್ಫೋಸಿಸ್​, ಬಜಾಜ್ ಆಟೊ ಷೇರುಗಳು ಮೌಲ್ಯದಲ್ಲಿ ಏರಿಕೆ ದಾಖಲಾಗಿದೆ. ಟೊಕಿಯೋ, ಹಾಂಕ್​ ಕಾಂಗ್​, ಸಿಯೋಲ್​ ಸಿಡ್ನಿ, ಶಾಂಘೈ, ಯುಎಸ್​ ಷೇರು ಪೇಟೆಗಳಲ್ಲಿ ಏರಿಳಿತ ಕಂಡುಬಂದಿದೆ.

Last Updated : Sep 3, 2019, 3:32 PM IST

ABOUT THE AUTHOR

...view details