ಕರ್ನಾಟಕ

karnataka

ETV Bharat / business

ಭಾರತದಲ್ಲಿನ 2ನೇ, ಯುರೋಪ್​ನ 3ನೇ ಕೊರೊನಾ ಅಲೆಗೆ ಕೊಚ್ಚಿ ಹೋದ ಸೆನ್ಸೆಕ್ಸ್​! - ಇಂದಿನ ನಿಫ್ಟಿ

30 ಷೇರುಗಳ ಬಿಎಸ್‌ಇ ಸೂಚ್ಯಂಕವು 404.94 ಅಂಕ ಅಥವಾ ಶೇ 0.82ರಷ್ಟು ಕಡಿಮೆಯಾಗಿ 48,775.37 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 113.50 ಅಂಕ ಅಥವಾ ಶೇ 0.78ರಷ್ಟು ಇಳಿಕೆ ಕಂಡು 14,435.90 ಅಂಕಗಳಲ್ಲಿ ಮಟ್ಟದಲ್ಲಿ ವಹಿವಾಟು ನಿರತವಾಗಿದೆ.

Sensex
Sensex

By

Published : Mar 25, 2021, 1:20 PM IST

ಮುಂಬೈ:ವಿದೇಶಿ ನಿಧಿಯ ಹೊರಹರಿವು ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ದುರ್ಬಲ ಪ್ರವೃತ್ತಿಯ ಮಧ್ಯೆ ಇಂಡೆಕ್ಸ್ ಮೇಜರ್​ಗಳಾದ ರಿಲಯನ್ಸ್ ಇಂಡಸ್ಟ್ರೀಸ್, ಇನ್ಫೋಸಿಸ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ಗಳಲ್ಲಿನ ನಷ್ಟದಿಂದಾಗಿ ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಗುರುವಾರದ ಆರಂಭಿಕ ವಹಿವಾಟಿನಲ್ಲಿ 400 ಅಂಕ ಕುಸಿದಿದೆ.

30 ಷೇರುಗಳ ಬಿಎಸ್‌ಇ ಸೂಚ್ಯಂಕವು 404.94 ಅಂಕ ಅಥವಾ ಶೇ 0.82ರಷ್ಟು ಕಡಿಮೆಯಾಗಿ 48,775.37 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 113.50 ಅಂಕ ಅಥವಾ ಶೇ 0.78ರಷ್ಟು ಇಳಿಕೆ ಕಂಡು 14,435.90 ಅಂಕಗಳಲ್ಲಿ ಮಟ್ಟದಲ್ಲಿ ವಹಿವಾಟು ನಿರತವಾಗಿದೆ.

ಇಂಡಸ್ಇಂಡ್ ಬ್ಯಾಂಕ್ ಅಗ್ರ ನಷ್ಟ ಅನುಭವಿಸಿ ಶೇ 2ರಷ್ಟು ಕುಸಿದಿದೆ. ನಂತರದ ಸ್ಥಾನದಲ್ಲಿ ಮಾರುತಿ, ಎಸ್‌ಬಿಐ, ಆಕ್ಸಿಸ್ ಬ್ಯಾಂಕ್, ಬಜಾಜ್ ಫೈನಾನ್ಸ್, ರಿಲಯನ್ಸ್ ಇಂಡಸ್ಟ್ರೀಸ್, ಇನ್ಫೋಸಿಸ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಸೇರಿವೆ. ಮತ್ತೊಂದೆಡೆ, ಒಎನ್‌ಜಿಸಿ, ಟೈಟಾನ್, ಎಲ್ & ಟಿ ಮತ್ತು ಡಾ. ರೆಡ್ಡಿಸ್​ ಟಾಪ್​ ಗೇನರ್​ಗಳಾಗಿದ್ದಾರೆ.

ಇದನ್ನೂ ಓದಿ: ಈ ತಿಂಗಳಲ್ಲಿ ರಾಜ್ಯಗಳಿಗೆ ₹30 ಸಾವಿರ ಕೋಟಿ ಜಿಎಸ್​ಟಿ ಪರಿಹಾರ ಬಿಡುಗಡೆ : ನಿರ್ಮಲಾ ಸೀತಾರಾಮನ್​

ಹಿಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 871.13 ಅಂಕ ಕಡಿಮೆಯಾಗಿ 49,180.31 ಅಂಕಗಳಲ್ಲಿ ಮತ್ತು ನಿಫ್ಟಿ 265.35 ಅಂಕ ಕುಸಿದು 14,549.40 ಅಂಕಗಳಲ್ಲಿ ಕೊನೆಗೊಂಡಿತ್ತು. ಇಂದು ಆರಂಭಿಕ ವಹಿವಾಟಿನಲ್ಲಿ 400 ಅಂಕ ಇಳಿಕೆಯಾಗಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐಗಳು) ಬುಧವಾರ ಬಂಡವಾಳ ಮಾರುಕಟ್ಟೆಯಲ್ಲಿ ನಿವ್ವಳ ಮಾರಾಟಗಾರರಾಗಿದ್ದಾರೆ. 1,951.90 ಕೋಟಿ ರೂ. ಮೊತ್ತದ ಷೇರುಗಳನ್ನು ವಿಕ್ರಯ ಮಾಡಿದರು.

ಯುರೋಪ್​ನ ಕೆಲವು ಭಾಗಗಳಲ್ಲಿ ಕೊರೊನಾ ಮೂರನೇ ಅಲೆ ಕಂಡುಬರುತ್ತಿದೆ. ಭಾರತದಲ್ಲಿ 2ನೇ ಅಲೆಯ ಕೋವಿಡ್​-19 ದಾಳಿಯಿಂದ ಉಂಟಾಗುವ ಅಪಾಯವು ಮಾರುಕಟ್ಟೆಯಲ್ಲಿನ ಅನಿಶ್ಚಿತತೆಯು ಮುಂದುವರೆದಿದೆ ಎಂದು ಜಿಯೋಜಿತ್ ಹಣಕಾಸು ಸೇವೆಗಳ ಮುಖ್ಯ ಹೂಡಿಕೆ ತಜ್ಞ ವಿ ಕೆ ವಿಜಯಕುಮಾರ್ ಹೇಳಿದ್ದಾರೆ.

ABOUT THE AUTHOR

...view details