ಕರ್ನಾಟಕ

karnataka

ETV Bharat / business

ಅಮೆರಿಕ ಮಾರುಕಟ್ಟೆ ಪ್ರಭಾವಕ್ಕೆ ಕುಸಿದ ಮುಂಬೈ ಪೇಟೆ: 337 ಸೆನ್ಸೆಕ್ಸ್ ಇಳಿಕೆ

ದಿನದ ಅಂತ್ಯದ ವೇಳೆಗೆ ಮುಂಬೈ ಸಂವೇದಿ ಷೇರು ಸೂಚ್ಯಂಕ ಸೆನ್ಸೆಕ್ಸ್ 337 ಅಂಕ ಕಳೆದುಕೊಂಡು 49,546 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಷೇರು ಸೂಚ್ಯಂಕ 124 ಅಂಕ ಇಳಿಕೆಯಾಗಿ 14,906 ಅಂಕಗಳಿಗೆ ತಲುಪಿತು.

Sensex
Sensex

By

Published : May 20, 2021, 6:31 PM IST

ಮುಂಬೈ:ದೇಶೀಯ ಷೇರು ಮಾರುಕಟ್ಟೆ ಸೂಚ್ಯಂಕಗಳು ಗುರುವಾರದ ವಹಿವಾಟಿನಂದು ಕುಸಿತ ಕಂಡಿವೆ.

ದಿನದ ಅಂತ್ಯದ ವೇಳೆಗೆ ಮುಂಬೈ ಸಂವೇದಿ ಷೇರು ಸೂಚ್ಯಂಕ ಸೆನ್ಸೆಕ್ಸ್ 337 ಅಂಕ ಕಳೆದುಕೊಂಡು 49,546 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಷೇರು ಸೂಚ್ಯಂಕ 124 ಅಂಕ ಇಳಿಕೆಯಾಗಿ 14,906 ಅಂಕಗಳಿಗೆ ತಲುಪಿತು.

ಆಕ್ಸಿಸ್, ಲಾ ಒಪಾಲಾ ಆರ್​ಜಿ ಲಿಮಿಟೆಡ್, ಟಿಸಿಐ ಎಕ್ಸ್‌ಪ್ರೆಸ್, ಇಂಡಿಯಾ ಸಿಮೆಂಟ್ಸ್ ಮತ್ತು ಟಿವಿ ಟುಡೆ ನೆಟ್‌ವರ್ಕ್ ಟಾಪ್​ ಗೇನರ್​​ಗಳಾದರೇ ಮೆಟಲ್ ಸೆಕ್ಟರ್ ಸೂಚ್ಯಂಕವು ಅತಿದೊಡ್ಡ ನಷ್ಟವನ್ನು ಅನುಭವಿಸಿತು.

ಇದನ್ನೂ ಓದಿ: ಕೊರೊನಾ 2.0 ಕಾಲಘಟದಲ್ಲಿ ಸಿಎಂ ಜಗನ್​ ಸರ್ಕಾರದಿಂದ ₹ 2.29 ಲಕ್ಷ ಕೋಟಿ ಬಜೆಟ್​ ಮಂಡನೆ

ದೇಶೀಯ ಸೂಚ್ಯಂಕಗಳ ಮೇಲೆ ಅಮೆರಿಕದ ಮಾರುಕಟ್ಟೆಗಳ ಪ್ರಭಾವ ಬೀರಿದ್ದು, ಯುಎಸ್​ನ ಆರಂಭಿಕ ವಹಿವಾಟಿನಲ್ಲಿ ಡೌ ಜೋನ್ಸ್ ಕೈಗಾರಿಕಾ ಸರಾಸರಿ 200 ಅಂಕ ಕುಸಿದಿದೆ. ನಾಸ್ಡಾಕ್ ಸೂಚ್ಯಂಕವನ್ನು ಲೋಹ, ಹಣಕಾಸು ಮತ್ತು ಎಫ್‌ಎಂಸಿಜಿ ಷೇರುಗಳಲ್ಲಿ ವಹಿವಾಟು ನಡೆಯಿತು. ಎಫ್ & ಒ ಒಪ್ಪಂದಗಳಲ್ಲೂ ಮಾರಾಟ ಉತ್ತಮವಾಗಿತ್ತು.

ABOUT THE AUTHOR

...view details