ಕರ್ನಾಟಕ

karnataka

ETV Bharat / business

ಚೀನಾ ಗಡಿ ತಂಟೆಗೆ ಮುಂಬೈಪೇಟೆಯಲಿ ರಕ್ತಪಾತ : ಲಕ್ಷಾಂತರ ಕೋಟಿ ರೂ.ನಷ್ಟ!

ಸನ್ ಫಾರ್ಮಾ, ಎಸ್‌ಬಿಐ, ಬಜಾಜ್ ಫಿನ್‌ಸರ್ವ್, ಬಜಾಜ್ ಫೈನಾನ್ಸ್, ಎನ್‌ಟಿಪಿಸಿ, ಐಸಿಐಸಿಐ ಬ್ಯಾಂಕ್, ಕೊಟಕ್ ಬ್ಯಾಂಕ್, ಎಂ&ಎಂ ಮತ್ತು ಮಾರುತಿ ಷೇರು ಮೌಲ್ಯ ಇಳಿಕೆಯಾಯಿತು. ಪೇಟೆಯ ಅನಿರೀಕ್ಷಿತ ಕುಸಿತದಿಂದ ಹೂಡಿಕೆದಾರರು ತಮ್ಮ ಲಕ್ಷಾಂತರ ರೂಪಾಯಿ ಮೌಲ್ಯದ ಸಂಪತ್ತು ಕಳೆದುಕೊಂಡಿದ್ದಾರೆ..

Nifty
ಸೆನ್ಸೆಕ್ಸ್​

By

Published : Aug 31, 2020, 4:57 PM IST

ಮುಂಬೈ :ಲಡಾಖ್​ನಲ್ಲಿ ಮತ್ತೆ ಚೀನಾ ಯೋಧರ ಪುಂಡಾಟ ಮುಂದುವರಿದಿದೆ. ಇದರಿಂದ ಮುಂಬೈ ಷೇರುಪೇಟೆಯಲ್ಲಿ ಮಹಾಕುಸಿತ ಕಂಡು ಬಂದಿದೆ. ಉಭಯ ದೇಶಗಳ ಸೇನಾ ಅಧಿಕಾರಿಗಳ ಸಭೆ ಬಳಿಕ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿದ್ದ ಚೀನಾ ಈಗ ಮತ್ತೆ ಎಲ್ಎಸಿಯಲ್ಲಿ ಅತಿಕ್ರಮಣಕ್ಕೆ ಪ್ರಯತ್ನಿಸಿದೆ. ಇದು ಷೇರುಪೇಟೆಯ ಹೂಡಿಕೆದಾರರ ಮನೋಭಾವದ ಮೇಲೆ ಪ್ರಭಾವ ಬೀರಿದೆ.

ಬ್ಯಾಂಕಿಂಗ್ ಮತ್ತು ಹಣಕಾಸು ವಿಭಾಗದ ಷೇರುಗಳಲ್ಲಿ ಲಾಭದ ಬುಕ್ಕಿಂಗ್​​ ವೇಗ ಆಗುತ್ತಿದ್ದಂತೆ ಈಕ್ವಿಟಿ ಬೆಂಚ್‌ ಮಾರ್ಕ್ ಸೂಚ್ಯಂಕಗಳು ಆರಂಭಿಕ ಲಾಭದಿಂದ ಮಧ್ಯಾಹ್ನದ ವೇಳೆಗೆ ನಕಾರಾತ್ಮಕದತ್ತ ಹೊರಳಿದವು. ಮಧ್ಯಾಹ್ನ 2:43ರ ವೇಳೆಗೆ ಬಿಎಸ್‌ಇ ಸೆನ್ಸೆಕ್ಸ್ 1,021.78 ಅಂಕ ಅಥವಾ ಶೇ.2.59ರಷ್ಟು ಕುಸಿದು 38,445.53 ಅಂಕಗಳಿಗೆ ತಲುಪಿದ್ದರೆ, ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 308.00 ಅಂಕ ಅಥವಾ ಶೇ. 2.64ರಷ್ಟು ಇಳಿಕೆ ಕಂಡು 11,339.60 ಅಂಕಗಳಿಗೆ ತಲುಪಿತು.

ದಿನದ ಅಂತ್ಯಕ್ಕೆ ಸೆನ್ಸೆಕ್ಸ್ 839.02 ಅಂಕ ಕುಸಿದು 38628.29 ಅಂಕಗಳ ಮಟ್ಟದಲ್ಲೂ ನಿಫ್ಟಿ 260.10 ಅಂಕ ಕುಸಿದು 11,387.50 ಅಂಕಗಳ ಮಟ್ಟದಲ್ಲೂ ಕೊನೆಗೊಂಡಿತು.

ಗಾಲ್ವನ್ ಕಣಿವೆಯಲ್ಲಿ ಭಾರತದ ಭಾಗ ಅತಿಕ್ರಮಿಸಿ ಭಾರತೀಯ ಸೈನಿಕರ ಮೇಲೆ ಅಮಾನುಷ ಹಲ್ಲೆ ಎಸಗಿದ ಘಟನೆ ನಡೆದು ಎರಡು ತಿಂಗಳೂ ಕಳೆದಿಲ್ಲ. ಚೀನಾ ಮತ್ತೆ ಅತಿಕ್ರಮಣಕ್ಕೆ ಪ್ರಯತ್ನಿಸಿದೆ. ಈ ಬಗ್ಗೆ ಭಾರತೀಯ ಸೇನಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆಗಸ್ಟ್ 29ರಂದು, ಅಂದಿನ ಶುಕ್ರವಾರದ ರಾತ್ರಿ ಪಾಂಗೋಂಗ್ ಟ್ಸೋ ಸರೋವರದ ದಕ್ಷಿಣ ಭಾಗದಲ್ಲಿ ಚೀನಾದ ಪಿಎಲ್​ಎ ಸೈನಿಕರು ಅತಿಕ್ರಮಣಕ್ಕೆ ಮುಂದಾಗಿದ್ದರು ಎನ್ನಲಾಗಿದೆ. ಚೀನಾದ ಪ್ರಚೋದನಕಾರಿ ಮಿಲಿಟರಿ ಅತಿಕ್ರಮಣವನ್ನು ಭಾರತೀಯ ಪಡೆಗಳು ವಿಫಲಗೊಳಿಸಿದವು ಎಂದು ಸೇನೆಯು ಸೋಮವಾರ ತಿಳಿಸಿದೆ.

ಸನ್ ಫಾರ್ಮಾ, ಎಸ್‌ಬಿಐ, ಬಜಾಜ್ ಫಿನ್‌ಸರ್ವ್, ಬಜಾಜ್ ಫೈನಾನ್ಸ್, ಎನ್‌ಟಿಪಿಸಿ, ಐಸಿಐಸಿಐ ಬ್ಯಾಂಕ್, ಕೊಟಕ್ ಬ್ಯಾಂಕ್, ಎಂ&ಎಂ ಮತ್ತು ಮಾರುತಿ ಷೇರು ಮೌಲ್ಯ ಇಳಿಕೆಯಾಯಿತು. ಪೇಟೆಯ ಅನಿರೀಕ್ಷಿತ ಕುಸಿತದಿಂದ ಹೂಡಿಕೆದಾರರು ತಮ್ಮ ಲಕ್ಷಾಂತರ ರೂಪಾಯಿ ಮೌಲ್ಯದ ಸಂಪತ್ತು ಕಳೆದುಕೊಂಡಿದ್ದಾರೆ.

ABOUT THE AUTHOR

...view details