ಮುಂಬೈ:ವಿಶ್ವವನ್ನು ಕಾಡುತ್ತಿರುವ ಕೊರೊನಾ ವೈರಸ್ ತಾನೂ ಕಾಲಿಟ್ಟಲೆಲ್ಲ ಮರಣ ಮೃದಂಗ ಭಾರಿಸುತ್ತಿದೆ. ಡೆಡ್ಲಿ ವೈರಸ್ ನಿಯಂತ್ರಣಕ್ಕೆ ಭಾರತ ಮೂಲದ ಗ್ಲೆನ್‌ಮಾರ್ಕ್ ಔಷಧ ಕಂಪನಿಯು 'ಫ್ಯಾಬಿಪ್ಲೂ' ಹೆಸರಿನ ಮಾತ್ರೆ ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಇದರಿಂದಾಗಿ ಸೋಮವಾರದ ಷೇರುಪೇಟೆಯಲ್ಲಿ ಈ ಕಂಪನಿಯ ಷೇರು ಮೌಲ್ಯ ಏರಿಕೆಯಾಗಿದೆ.
ಈಕ್ವಿಟಿ ಬೆಂಚ್‌ಮಾರ್ಕ್ ಸೂಚ್ಯಂಕಗಳಲ್ಲಿ ಬ್ಯಾಂಕಿಂಗ್, ಫಾರ್ಮಾ ಮತ್ತು ಮೆಟಲ್ ಷೇರುಗಳ ಲಾಭದೊಂದಿಗೆ ಕೊನೆಗೊಂಡವು. ಭಾರತ ಮತ್ತು ಚೀನಾ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಜೊತೆಗೆ ಕೋವಿಡ್-19 ಹೊಸ ಪ್ರಕರಣ ಹೆಚ್ಚಳವನ್ನು ಹೂಡಿಕೆದಾರರು ಜಾಗರೂಕರನ್ನಾಗಿ ಮಾಡಿತು.
ದಿನದ ವಹಿವಾಟು ಮುಕ್ತಾಯದ ವೇಳೆಗೆ ಬಿಎಸ್ಇಎಸ್ & ಪಿ ಸೆನ್ಸೆಕ್ಸ್ 180 ಅಂಕ ಅಥವಾ ಶೇ 0.52ರಷ್ಟು ಏರಿಕೆ ಕಂಡು 34,911 ಅಂಕಗಳಿಗೆ ತಲುಪಿದ್ರೆ, ನಿಫ್ಟಿ- 5067 ಅಂಶ ಅಥವಾ ಶೇ 0.65ರಷ್ಟು ಏರಿಕೆಯಾಗಿ 10,311 ಅಂಶಗಳಿಗೆ ತಲುಪಿದೆ.
ಗ್ಲೆನ್‌ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ಷೇರು ಮೌಲ್ಯದಲ್ಲಿ ಶೇ 27.06ರಷ್ಟು ಏರಿಕೆ ಕಂಡು ಪ್ರತಿ ಷೇರು 519.80 ರೂ.ಗೆ ತಲುಪಿದೆ. ಭಾರತದ ಮೊದಲ ಔಷಧೀಯ ಕಂಪನಿಯಾಗಿ ಕೋವಿಡ್-19 ಸೋಂಕಿತರ ಚಿಕಿತ್ಸೆಗೆ ಆಂಟಿವೈರಲ್ ಔಷಧಿಯಾದ ಫೆವಿಪಿರವಿರ್ ತಯಾರಿಕೆ ಮತ್ತು ಮಾರಾಟಕ್ಕೆ ನಿಯಂತ್ರಕರಿಂದ ಮೌಖಿಕ ಅನುಮೋದನೆ ಪಡೆದಿದೆ. ಇದರ ಜೊತೆಗೆ ಸಿಪ್ಲಾದ ಷೇರು ಶೇ 2.9ರಷ್ಟು ಏರಿಕೆ ಕಂಡು ಪ್ರತಿ ಯೂನಿಟ್ 655.80 ರೂ.ಗೆ ತಲುಪಿದೆ.