ಮುಂಬೈ:ಜೋಸೆಫ್ ಬೈಡನ್ ಯುನೈಟೆಡ್ ಸ್ಟೇಟ್ಸ್ನ ಅಧ್ಯಕ್ಷರಾಗುವ ಪ್ರಬಲ ಸಾಧ್ಯತೆಯನ್ನು ಕಂಡುಕೊಂಡ ಹೂಡಿಕೆದಾರರು, ಮಾರುಕಟ್ಟೆಯ ಎಲ್ಲ ವಿಭಾಗಗಳು ಮತ್ತು ವಲಯಗಳಲ್ಲಿ ಖರೀದಿಯ ಭರಾಟೆಯಲ್ಲಿ ತೊಡಗಿದರು. ಇದರಿಂದ ಸೆನ್ಸೆಕ್ಸ್ ದಾಖಲೆಯ ಏರಿಕೆ ಕಂಡಿತು.
ಗುರುವಾರದ ದಿನದ ಅಂತ್ಯದ ವೇಳೆಗೆ ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್ 724.02 ಅಂಕ ಏರಿಕೆಯಾಗಿ 41,340.16 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 219.10 ಅಂಕ ಜಿಗಿದು 12,127.60 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು. ಈ ಮೂಲಕ ಫೆಬ್ರವರಿ 14ರ ಬಳಿಕ (9 ತಿಂಗಳು) ಅತ್ಯಧಿಕ ಏರಿಕೆ ದಾಖಲಿಸಿತು.
ನಿಫ್ಟಿಯ 50 ಷೇರುಗಳ ಪೈಕಿ 47 ಷೇರುಗಳು ಗ್ರೀನ್ ವಲಯದಲ್ಲಿದ್ದವು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ 6ರಷ್ಟು ಏರಿಕೆಯ ಮೂಲಕ ಹೆಚ್ಚಿನ ಲಾಭ ಗಳಿಸಿತು. ಟಾಟಾ ಸ್ಟೀಲ್, ಬಜಾಜ್ ಫೈನಾನ್ಸ್, ಭಾರತ ಪೆಟ್ರೋಲಿಯಂ, ಇಂಡಸ್ಇಂಡ್ ಬ್ಯಾಂಕ್, ಹಿಂಡಲ್ಕೊ, ಯುಪಿಎಲ್, ಬಜಾಜ್ ಫಿನ್‌ಸರ್ವ್, ಗೇಲ್ ಇಂಡಿಯಾ ಮತ್ತು ಜೆಎಸ್‌ಡಬ್ಲ್ಯೂ ಸ್ಟೀಲ್ ಸಹ ಶೇ 3-5ರ ನಡುವೆ ಏರಿಕೆಯಾದವು.
ಫ್ಲಿಪ್‌ಸೈಡ್‌ನಲ್ಲಿ ಹೀರೋ ಮೊಟೊಕಾರ್ಪ್, ಎಚ್‌ಡಿಎಫ್‌ಸಿ ಲೈಫ್ ಮತ್ತು ಡಿವಿಸ್ ಲ್ಯಾಬ್‌ಗಳು ಇಳಿಕೆ ದಾಖಲಿಸಿದವು. ಬಿಎಸ್‌ಇನಲ್ಲಿ 1,690 ಷೇರುಗಳು ಪ್ರಗತಿ ಕಂಡಿದ್ದರೇ 863 ಷೇರುಗಳು ಕುಸಿದವು.
ಮಾರುಕಟ್ಟೆಯ ಮೇಲೆ ಪ್ರಭಾವಿಸಿದ ಅಂಶಗಳು:
ಅಮೆರಿಕ ಚುನಾವಣೆ
ಜೋಸೆಫ್ ಬೈಡನ್ ಅಮೆರಿಕದ ಮುಂದಿನ ಅಧ್ಯಕ್ಷರಾಗುವ ಸಾಧ್ಯತೆಯಿದೆ ಎಂಬುದು ದಟ್ಟವಾಗುತ್ತಿದೆ. ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷಗಳು ಸೆನೆಟ್ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮೇಲೆ ತಮ್ಮ ನಿಯಂತ್ರಣ ಉಳಿಸಿಕೊಳ್ಳಬೇಕು ಎಂದು ಹೂಡಿಕೆದಾರರು ಹೆಚ್ಚಾಗಿ ನಿರೀಕ್ಷಿಸಿದ್ದಾರೆ. ಇದು ಬೈಡನ್ ಗೆಲುವಿನ ಅಡಿ ಹೆಚ್ಚಿನ ತೆರಿಗೆ ಮತ್ತು ಹಣಕಾಸಿನ ನಿಯಂತ್ರಣದ ನಿರೀಕ್ಷೆಯು ಮೃದುಗೊಳಿಸಿದೆ.