ಕರ್ನಾಟಕ

karnataka

ETV Bharat / business

ಷೇರುಪೇಟೆಯಲ್ಲಿ ಮತ್ತೊಂದು ರಕ್ತಪಾತ: ಲಕ್ಷಾಂತರ ಕೋಟಿ ನಷ್ಟ!! - Sensex Down

ರಾಷ್ಟ್ರೀಯ ಷೇರುಪೇಟೆ ಹಾಗೂ ಸೆನ್ಸೆಕ್ಸ್​ನಲ್ಲಿ ಭಾರಿ ನಷ್ಟ ಸಂಭವಿಸಿದೆ. ಕಳೆದ ವಾರ ಎರಡು ಬಾರಿ ಸಾವಿರಕ್ಕಿಂತ ಹೆಚ್ಚು ಅಂಕ ಕುಸಿದಿದ್ದ ಷೇರುಪೇಟೆ ಇಂದು ಮತ್ತೆ 1900 ಅಂಕಗಳನ್ನ ಕಳೆದುಕೊಂಡು ಲಕ್ಷಾಂತರ ಕೋಟಿ ನಷ್ಟ ಅನುಭವಿಸಿದೆ.

Sensex at 36,445.47, down by 1131.15  points.
ಷೇರುಪೇಟೆ

By

Published : Mar 9, 2020, 9:58 AM IST

Updated : Mar 9, 2020, 7:33 PM IST

ಮುಂಬೈ:ರಾಷ್ಟ್ರೀಯ ಷೇರುಪೇಟೆ ಹಾಗೂ ಸೆನ್ಸೆಕ್ಸ್​ನಲ್ಲಿ ಭಾರಿ ನಷ್ಟ ಸಂಭವಿಸಿದೆ. ಕಳೆದ ವಾರ ಎರಡು ಬಾರಿ ಸಾವಿರಕ್ಕಿಂತ ಹೆಚ್ಚು ಅಂಕ ಕುಸಿದಿದ್ದ ಷೇರುಪೇಟೆ ಇಂದು ಮತ್ತೆ 1900 ಅಂಕಗಳನ್ನ ಕಳೆದುಕೊಂಡು ಲಕ್ಷಾಂತರ ಕೋಟಿ ನಷ್ಟ ಅನುಭವಿಸಿದೆ.

ಇಂದು ಮತ್ತೆ ಸಾವಿರಕ್ಕಿಂತ ಹೆಚ್ಚು ಅಂಕಗಳ ನಷ್ಟ ಅನುಭವಿಸಿರುವ ಷೇರುಪೇಟೆ 36,445 ಅಂಕಗಳ ಕುಸಿತ ಕಂಡಿದೆ. 44 ಸಾವಿರ ಅಂಕಗಳಷ್ಟ ಏರಿಕೆ ಕಂಡು ಮುನ್ನುಗ್ಗುತ್ತಿದ್ದ ಮುಂಬೈ ಸಂವೇದಿ ಸೂಚ್ಯಂಕಕ್ಕೆ ರಾಷ್ಟ್ರದ ಆರ್ಥಿಕ ಹಿಂಜರಿತ, ಕೊರೊನಾ ವೈರಸ್​ ಭೀತಿ ಹಾಗೂ ಯೆಸ್​ ಬ್ಯಾಂಕ್​ ದಿವಾಳಿ ಪ್ರಕರಣಗಳು ಭಾರಿ ಹಿನ್ನಡೆ ತಂದಿಟ್ಟಿವೆ. ಕೇವಲ ಒಂದು ತಿಂಗಳಕ್ಕಿಂತ ಹೆಚ್ಚಿನ ಅವಧಿಯಲ್ಲಿ ಹತ್ತಿರ ಹತ್ತಿರ 8 ಸಾವಿರ ಅಂಕಗಳ ನಷ್ಟ ಅನುಭವಿಸಿದೆ.

ಈ ಮೂಲಕ ಷೇರುಪೇಟೆ 7 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಕೊರೊನಾ ವೈರಸ್​ ಭೀತಿ ಮತ್ತೊಮ್ಮೆ ಷೇರುಪೇಟೆ ಕುಸಿಯಲು ಕಾರಣವಾಗಿದೆ. ಕೇರಳ, ಇಟಲಿ ಹಾಗೂ ದೇಶದಲ್ಲಿ ಸೋಂಕಿತರಲ್ಲಿ ಹೆಚ್ಚಳ ಕಂಡು ಬಂದಿದೆ ಇದೆಕ್ಕೆಲ್ಲ ಕಾರಣ ಎಂದು ಹೇಳಲಾಗುತ್ತಿದೆ.

Last Updated : Mar 9, 2020, 7:33 PM IST

ABOUT THE AUTHOR

...view details