ಮುಂಬೈ: ದೇಶದ ಷೇರುಪೇಟೆಯಲ್ಲಿ ಗೂಳಿ ಓಟ ಮುಂದುವರೆದಿದ್ದು, ದಿನದ ಆರಂಭದಲ್ಲಿ ಮುಂಬೈ ಷೇರು ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 294 ಅಂಕಗಳ ಏರಿಕೆಯೊಂದಿಗೆ 57,625ರಲ್ಲಿ ವಹಿವಾಟು ನಡೆಸುತ್ತಿದೆ. ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕ ನಿಫ್ಟಿ ಕೂಡ 87 ಅಂಕಗಳ ಜಿಗಿತದೊಂದಿಗೆ 17,164ರಲ್ಲಿದೆ.
ಷೇರುಪೇಟೆಯಲ್ಲಿ ಗೂಳಿ ಓಟ; 294 ಅಂಕಗಳ ಏರಿಕೆಯೊಂದಿಗೆ ಸೆನ್ಸೆಕ್ಸ್ 57,625ರಲ್ಲಿ ವಹಿವಾಟು - ಷೇರು ಮಾರುಕಟ್ಟೆ
ಮುಂಬೈ ಷೇರುಪೇಟೆಯ ದಿನದ ಆರಂಭದಲ್ಲಿ ಸೆನ್ಸೆಕ್ಸ್ 294 ಅಂಕಗಳ ಜಿಗಿತದೊಂದಿಗೆ 57,625ರಲ್ಲಿ ವಹಿವಾಟು ನಡೆಸುತ್ತಿದೆ. ಹೆಚ್‌ಯುಎಲ್, ಅಲ್ಟ್ರಾಟೆಕ್ ಸಿಮೆಂಟ್, ಡಿಆರ್‌ಎಲ್ ಮತ್ತು ಟೈಟಾನ್ ಷೇರುಗಳಲ್ಲಿ ಏರಿಕೆಯೊಂದಿಗೆ ಉತ್ತಮ ಲಾಭದಲ್ಲಿವೆ.
ಷೇರುಪೇಟೆಯಲ್ಲಿ ಗೂಳಿ ಓಟ; 294 ಅಂಕಗಳ ಏರಿಕೆಯೊಂದಿಗೆ ಸೆನ್ಸೆಕ್ಸ್ 57,625ರಲ್ಲಿ ವಹಿವಾಟು
ಹೆಚ್‌ಯುಎಲ್, ಅಲ್ಟ್ರಾಟೆಕ್ ಸಿಮೆಂಟ್, ಡಿಆರ್‌ಎಲ್ ಮತ್ತು ಟೈಟಾನ್ ಷೇರುಗಳು ಏರಿಕೆಯೊಂದಿಗೆ ಒಳ್ಳೆಯ ಲಾಭ ಗಳಿಸಿದವು. ಬಜಾಜ್ ಆಟೋ, ಏಷಿಯನ್ ಪೇಂಟ್ಸ್, ಟೆಕ್ ಮಹಿಂದ್ರಾ ಹಾಗೂ ಇನ್ಫೋಸಿಸ್ ಷೇರುಗಳು ನಷ್ಟ ಅನುಭವಿಸಿವೆ.
ಜಾಗತಿ ಮಾರುಕಟ್ಟೆಯಲ್ಲಿ ಜಪಾನ್‌ನ ನಿಕ್ಕಿ 0.1, ಟಾಪಿಕ್ಸ್ ಇಂಡೆಕ್ಸ್ 0.3, ದಕ್ಷಿಣ ಕೊರಿಯಾದ ಕೊಸ್ಪಿ 0.65 ರಷ್ಟು ಕುಸಿತ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 6 ಪೈಸೆ ವೃದ್ಧಿಸಿಕೊಂಡಿದೆ.