ಕರ್ನಾಟಕ

karnataka

ETV Bharat / business

ಎಜಿಆರ್​ಗೆ ₹1.47 ಲಕ್ಷ ಕೋಟಿ ಬಾಕಿ ಪಾವತಿಸದ ಟೆಲಿಕಾಂ ಸಂಸ್ಥೆಗಳು.. ಸುಪ್ರೀಂಕೋರ್ಟ್​ ಚಾಟಿ! - ಎಜಿಆರ್​​

ಟೆಲಿಕಾಂ ಸಂಸ್ಥೆಗಳು ಎಜಿಆರ್​​ಗೆ ಬಾಕಿ ಪಾವತಿಸುವಂತೆ ಸುಪ್ರೀಂಕೋರ್ಟ್​ ಈ ಹಿಂದೆ ಸೂಚನೆ ನೀಡಿತ್ತು. ಆದರೆ, ಕೋರ್ಟ್‌ನ ಈ ಸೂಚನೆಗೆ ಅವು ಕ್ಯಾರೇ ಎಂದಿರಲಿಲ್ಲ. ಈಗ ಸುಪ್ರೀಂಕೋರ್ಟ್‌ ಆ ಎಲ್ಲ ಟೆಲಿಕಾಂ ಸಂಸ್ಥೆಗಳು ಮೇಲೆ ಬಾಕಿ ಪಾವತಿಸುವಂತೆ ಚಾಟಿ ಬೀಸಿದೆ.

SC
ಸುಪ್ರೀಂ ಕೋರ್ಟ್​

By

Published : Feb 14, 2020, 12:44 PM IST

ನವದೆಹಲಿ: ಭಾರತದಲ್ಲಿನ ಟೆಲಿಕಾಂ ಸಂಸ್ಥೆಗಳಿಗೆ ಎಜಿಆರ್​​ ಮೂಲಕ ಬಾಕಿ ಉಳಿದ ₹1.47 ಲಕ್ಷ ಕೋಟಿ ಪಾವತಿಸುವಂತೆ ಸುಪ್ರೀಂಕೋರ್ಟ್​ ಸೂಚನೆ ನೀಡಿತ್ತು. ಆದರೆ, ಈವರೆಗೆ ಹಣ ಪಾವತಿಸದಿರೋದ್ದಕ್ಕೆ ಕಾರಣ ಏನು ಅನ್ನೋದನ್ನ ತಿಳಿಸುವಂತೆ ಟೆಲಿಕಾಂನ ನಿರ್ದೇಶಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರುಗಳಿಗೆ ಸುಪ್ರೀಂಕೋರ್ಟ್‌ ಆದೇಶಿಸಿದೆ.

ಸುಪ್ರೀಂಕೋರ್ಟ್​ ಈ ಹಿಂದೆಯೇ ಟೆಲಿಕಾಂ ಸಂಸ್ಥೆಗಳಾದ ಭಾರತಿ ಏರ್​ಟೆಲ್​, ವೊಡಾಫೋನ್​​, ಐಡಿಯಾ ಹಾಗೂ ಟಾಟಾ ಟೆಲಿ ಸರ್ವೀಸಸ್​​ಗಳಿಗೆ ಎಜಿಆರ್​​(AGR-Adjusted Gross Revenue) ಮೊತ್ತ ಸಲ್ಲಿಸಲು ಸೂಚನೆ ನೀಡಿತ್ತು. ನಂತರ ಟೆಲಿಕಾಂ ಸಂಸ್ಥೆಗಳು, ಪುನಾ ಅರ್ಜಿ ಸಲ್ಲಿಸಿ ಈ ಬಗ್ಗೆ ಪರಿಶೀಲನೆ ನಡೆಸುವಂತೆ ಮನವಿ ಮಾಡಿತ್ತು. ಆದರೆ, ಟೆಲಿಕಾಂ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ತಳ್ಳಿ ಹಾಕಿದ್ದ ನ್ಯಾಯಾಲಯವು ₹1.47 ಲಕ್ಷ ಕೋಟಿ ಹಣ ಎಜಿಆರ್​ಗೆ ಪಾವತಿಸುವಂತೆ ಖಡಕ್​​ ಆದೇಶ ನೀಡಿತ್ತು.

ನ್ಯಾಯಾಲಯ ಈ ಆದೇಶ ನೀಡಿ ತಿಂಗಳುಗಳೇ ಕಳೆದಿದ್ದರೂ ಟೆಲಿಕಾಂ ಸಂಸ್ಥೆಗಳು ಹಣ ಪಾವತಿ ಮಾಡದಿರುವ ಬಗ್ಗೆ ನ್ಯಾ. ಅರುಣ್ ಮಿಶ್ರಾ, ನ್ಯಾ. ಎಸ್ ಅಬ್ದುಲ್ ನಜೀರ್ ಮತ್ತು ನ್ಯಾ. ಎಂ ಆರ್ ಷಾ ಅವರನ್ನಳೊಗೊಂಡ ತ್ರಿಸದಸ್ಯ ನ್ಯಾಯಪೀಠವು, ಈ ಅಸಂಬದ್ಧತೆಗೆ ಕಾರಣ ಏನು ಎಂಬುದು ತಿಳಿಯದಾಗಿದೆ. ಈ ದೇಶದಲ್ಲಿ ಯಾವ ಕಾನೂನು ಉಳಿದಿಲ್ಲವೇ? ಈ ದೇಶದಲ್ಲಿ ಇರುವುದಕ್ಕಿಂತ ಬಿಟ್ಟು ಹೋಗುವುದು ಉತ್ತಮವೇ ಎಂದು ಖಾರವಾಗಿ ಪ್ರಶ್ನಿಸಿದೆ.

ABOUT THE AUTHOR

...view details