ಕರ್ನಾಟಕ

karnataka

ETV Bharat / business

ಜಾಗತಿಕ ತೈಲ ಕೊರತೆ, ಬೆಲೆ ಏರಿಕೆಗೆ ತಾನು ಹೊಣೆಯಲ್ಲ: ಸೌದಿ ಅರೇಬಿಯಾ ಸ್ಪಷ್ಟನೆ - ಜಾಗತ್ತಿನಾದ್ಯಂತ ತೈಲ ಬೆಲೆ ಏರಿಕೆ

ತನ್ನ ತೈಲ ಘಟಕಗಳ ಮೇಲಿನ ದಾಳಿಯಿಂದಾಗಿ ಜಾಗತಿಕ ಮಾರುಕಟ್ಟೆಗಳಿಗೆ ತೈಲ ಪೂರೈಕೆಯಲ್ಲಿನ ಕೊರತೆಗೆ ತಾನು ಯಾವುದೇ ಹೊಣೆಗಾರನಲ್ಲ ಎಂದು ಸೌದಿ ವಿದೇಶಾಂಗ ಸಚಿವಾಲಯ ಹೇಳಿರುವುದಾಗಿ ವರದಿಯಾಗಿದೆ.

Saudi Arabia says it's not responsible for high oil prices
ಜಾಗತಿಕ ತೈಲ ಕೊರತೆ, ಬೆಲೆ ಏರಿಕೆ ತಾನು ಹೊಣೆಯಲ್ಲ: ಸೌದಿ ಅರೇಬಿಯಾ

By

Published : Mar 22, 2022, 9:45 AM IST

ದುಬೈ: ಯೆಮೆನ್‌ನ ಹೌತಿ ಬಂಡುಕೋರರು ತೈಲ ಘಟಕಗಳ ದಾಳಿಯ ನಂತರ ವಿಶ್ವದ ಅತಿದೊಡ್ಡ ತೈಲ ರಫ್ತುದಾರ ಸಾಮ್ರಾಜ್ಯವಾದ ಸೌದಿಯಲ್ಲಿ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಜಾಗತಿಕ ತೈಲ ಪೂರೈಕೆಯಲ್ಲಿನ ಕೊರತೆಗೆ ತಾವು ಜವಾಬ್ದಾರರಲ್ಲ ಎಂದು ಸೌದಿ ಅರೇಬಿಯಾ ಹೇಳಿದೆ.

ತೈಲ ಹಾಗೂ ತೈಲ ಮಾರುಕಟ್ಟೆಯ ಬಗ್ಗೆ ಸೌದಿ ಅಧಿಕಾರಿಗಳ ಸಣ್ಣ ಹೇಳಿಕೆಯೂ ತೈಲ ಬೆಲೆಗಳಲ್ಲಿನ ಭಾರಿ ಏರಿಳಿತ ಹಾಗೂ ಜಾಗತಿಕ ಮಾರುಕಟ್ಟೆಗಳಲ್ಲಿ ಗಲಾಟೆಗೆ ಕಾರಣ ವಾಗಬಹುದು. ಸೌದಿ ಅರೇಬಿಯಾದ ತೈಲ ಸೌಲಭ್ಯಗಳ ಮೇಲೆ ಬಂಡುಕೋರರ ದಾಳಿಯು ಯುದ್ಧದ ಗಂಭೀರತೆಗೆ ಕಾರಣ ಎನ್ನಲಾಗಿದೆ. 2014 ರಲ್ಲಿ ಇರಾನ್ ಬೆಂಬಲಿತ ಹೌತಿಗಳು ರಾಜಧಾನಿ ಸನಾ ಮತ್ತು ದೇಶದ ಉತ್ತರದ ಹೆಚ್ಚಿನ ಭಾಗವನ್ನು ವಶಪಡಿಸಿಕೊಂಡಾಗಿನಿಂದ ಸಂಘರ್ಷ ನಡೆಯುತ್ತಿದೆ.

ಸೌದಿ ಅರೇಬಿಯಾ ಮತ್ತು ಅದರ ಮಿತ್ರರಾಷ್ಟ್ರಗಳು ಹೌತಿಗಳನ್ನು ಹೊರಹಾಕಲು ಮತ್ತು ಅಂತಾರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಸರ್ಕಾರವನ್ನು ಪುನಃಸ್ಥಾಪಿಸಲು ಯತ್ನಿಸುತ್ತಲೇ ಇವೆ. ಏಳು ವರ್ಷಗಳ ನಂತರ, ಸಂಘರ್ಷವು ರಕ್ತಸಿಕ್ತವಾಗಿ ಮಾರ್ಪಟ್ಟಿದೆ. ಇದು ವಿಶ್ವದ ಅತ್ಯಂತ ಕೆಟ್ಟ ಮಾನವೀಯ ವಿಪತ್ತುಗಳಲ್ಲಿ ಒಂದಾಗಿದೆ ಎಂದು ಸೌದಿ ಹೇಳಿದೆ. ತನ್ನ ತೈಲ ಘಟಕಗಳ ಮೇಲಿನ ದಾಳಿಯಿಂದಾಗಿ ಜಾಗತಿಕ ಮಾರುಕಟ್ಟೆಗಳಿಗೆ ತೈಲ ಪೂರೈಕೆಯಲ್ಲಿ ಕೊರತೆಗೆ ತಾನು ಯಾವುದೇ ಹೊಣೆಗಾರಿಕೆ ಹೊರುವುದಿಲ್ಲ ಎಂದು ಸೌದಿ ವಿದೇಶಾಂಗ ಸಚಿವಾಲಯವನ್ನು ಉಲ್ಲೇಖಿಸಿ ಸರ್ಕಾರಿ ಸ್ವಾಮ್ಯದ ಸೌದಿ ಪ್ರೆಸ್ ಏಜೆನ್ಸಿ ಹೇಳಿದೆ.

ಗಲ್ಫ್ ಅರಬ್ ತೈಲ ಉತ್ಪಾದಕರು ಇಲ್ಲಿಯವರೆಗೆ ಉಕ್ರೇನ್‌ನ ಮೇಲಿನ ರಷ್ಯಾದ ಯುದ್ಧದ ಮಧ್ಯೆ ಗಗನಕ್ಕೇರಿರುವ ತೈಲ ಬೆಲೆಗಳನ್ನು ತಗ್ಗಿಸಲು ಹೆಚ್ಚು ಕಚ್ಚಾ ತೈಲ ಉತ್ಪಾದನೆ ಮಾಡುವಂತೆ ಬೈಡನ್​​ ಆಡಳಿತ ಹೇರುತ್ತಿರುವ ಒತ್ತಡಕ್ಕೆ ವಿರೋಧವೂ ವ್ಯಕ್ತವಾಗಿದೆ. ಈಗಾಗಲೇ ಗ್ಯಾಸೋಲಿನ್ ಬೆಲೆ ವಿಶ್ವದಾದ್ಯಂತ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ. ಅಮೆರಿಕದಲ್ಲಿ ಸೋಮವಾರ $4.25 ಕ್ಕೆ ಏರಿದೆ. ಈ ತಿಂಗಳ ಆರಂಭದಲ್ಲಿ $4.33ಕ್ಕೆ ತಲುಪಿ ಎರಡನೇ ಗರಿಷ್ಠ ಮಟ್ಟದ ದಾಖಲೆ ಬರೆದಿದೆ.

ಇದನ್ನೂ ಓದಿ:4 ತಿಂಗಳ ಬಳಿಕ ಗ್ರಾಹಕರ ಜೇಬಿಗೆ ಕತ್ತರಿ; ಪೆಟ್ರೋಲ್‌, ಡೀಸೆಲ್‌ ಲೀಟರ್‌ಗೆ ತಲಾ 80 ಪೈಸೆ, LPG ಸಿಲಿಂಡರ್‌ ಬೆಲೆ 50 ರೂ.ಏರಿಕೆ

ABOUT THE AUTHOR

...view details