ಸಿಯೋಲ್: ದೂರಶಿಕ್ಷಣ ಮತ್ತು ವರ್ಕ್ ಫ್ರಮ್ ಹೋಮ್ ಹೆಚ್ಚುತ್ತಿರುವ ಪ್ರವೃತ್ತಿಯ ಮಧ್ಯೆ ದಕ್ಷಿಣ ಕೊರಿಯಾದ ಟೆಕ್ ದೈತ್ಯ ಮಾರಾಟ ಪ್ರಮಾಣ ಹೆಚ್ಚಿಸಿಕೊಳ್ಳಲು ನಿರ್ಧರಿಸಿದ್ದರಿಂದ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ತನ್ನ 2021 ಶ್ರೇಣಿಯ ಹೈರೆಸಲ್ಯೂಷನ್ ಮಾನಿಟರ್‌ಗಳನ್ನು ಬಿಡುಗಡೆ ಮಾಡಿದೆ.
ಸ್ಯಾಮ್‌ಸಂಗ್ ಮೂರು ಸರಣಿಗಳಲ್ಲಿ 12 ವಿಭಿನ್ನ ಮಾನಿಟರ್‌ಗಳಾದ ಎಸ್ 8, ಎಸ್ 7 ಮತ್ತು ಎಸ್ 6 ಶ್ರೇಣಿಯಡಿ ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಎಲ್ಲಾ ಮಾದರಿಗಳು 1 ಬಿಲಿಯನ್‌ಗಿಂತಲೂ ಅಧಿಕ ಕಲರ್, 178 ಡಿಗ್ರಿ ವೈಡ್ ಆ್ಯಂಗಲ್ ಮತ್ತು ಹೈ ಡೈನಾಮಿಕ್ ರೇಂಜ್ 10 ತಂತ್ರಜ್ಞಾನ ಹೊಂದಿವೆ.