ನವದೆಹಲಿ:ಪ್ರತಿಷ್ಠಿತ ಸ್ಯಾಮ್ಸಂಗ್ ಕಂಪನಿಯು ತನ್ನ ವಾರ್ಷಿಕ ಮಾರಾಟ ಮೇಳ ಅಕ್ಟೋಬರ್ 7ರಿಂದ ಆರಂಭವಾಗಿದ್ದು, ಪ್ರತಿ ಉತ್ಪನ್ನಗಳ ಮೇಲೆ ರಿಯಾಯಿತಿ, ಕ್ಯಾಶ್‌ಬ್ಯಾಕ್, ಬ್ಯಾಂಕ್ ಆಫರ್ ಮತ್ತು ವಿನಿಮಯ ಸೌಲಭ್ಯಗಳನ್ನು ಒದಗಿಸುತ್ತಿದೆ.
ಸ್ಯಾಮ್ಸಂಗ್ ಉತ್ಪನ್ನಗಳ ಮೇಲೆ ಕಂಪನಿಯು ಶೇ 60ರಷ್ಟು ಭಾರಿ ರಿಯಾಯಿತಿ ನೀಡುತ್ತಿದ್ದು, ಈ ಮಾರಾಟ ಪ್ರಕ್ರಿಯೆಯು ಅ.13ರ ವರೆಗೆ ನಡೆಯಲಿದೆ. ಸ್ಮಾರ್ಟ್ಫೋನ್, ಧರಿಸುವ ಎಲೆಕ್ಟ್ರಿಕ್ ಸಾಧನಗಳು, ಟಿವಿ, ಆಡಿಯೋ ಸಾಧನ ಸೇರಿದಂತೆ ಇತರ ಉತ್ಪನ್ನಗಳು ಒಳಗೊಂಡಿವೆ.
ರಿಯಾಯಿತಿಯ ಪ್ರಮಾಣ
* ರೆಫ್ರಿಜರೇಟರ್- ಶೇ 31ರವರೆಗೆ
* ವಾಷಿಂಗ್ ಮಷಿನ್- ಶೇ 21ರವರೆಗೆ
* ಮೈಕ್ರೊವೇವ್- ಶೇ 43ರವರೆಗೆ
* ಏರ್ ಕಂಡಿಷನರ್ಸ್ - ಶೇ 28ರವರೆಗೆ
* ಹರ್ಮನ್ ಕಾರ್ಡನ್ ಬ್ರಾಂಡ್ ಆಡಿಯೋ ಉತ್ಪನ್ನಗಳು - ಶೇ 50ರವರೆಗೆ
* ಜೆಬಿಎಲ್ ಬ್ರಾಂಡ್ ಆಡಿಯೋ ಉತ್ಪನ್ನಗಳು- ಶೇ 60ರವರೆಗೆ
* ಪರಿಕರಗಳು - ಶೇ 40ರವರೆಗೆ
* ಮೆಮೊರಿ ಮತ್ತು ಸ್ಟೋರೆಜ್- ಶೇ60ರವರೆಗೆ
ಹೆಚ್ಚುವರಿ ಕೊಡುಗೆ
* ಆಯ್ದ ಎಸ್‌ಬಿಐ, ಎಚ್‌ಡಿಎಫ್‌ಸಿ, ಐಸಿಐಸಿಐ ಮತ್ತು ಎಕ್ಸಿಸ್ ಬ್ಯಾಂಕ್ ಕಾರ್ಡ್‌ಗಳ ಮೇಲೆ ಶೇ 10ರಷ್ಟು ಕ್ಯಾಶ್‌ಬ್ಯಾಕ್
* ಅಮೆಜಾನ್ ಪೇ ವಹಿವಾಟಿನಲ್ಲಿ 1,500 ರೂ. ವರೆಗೂ ಕ್ಯಾಶ್‌ಬ್ಯಾಕ್
* ಮೇಕ್‌ಮೈಟ್ರಿಪ್ ಮೂಲಕ ಪ್ರಯಾಣದ ಬುಕಿಂಗ್‌ಗಾಗಿ ಶೇ 25ರಷ್ಟು ರಿಯಾಯಿತಿ
* 10,000 ರೂ. ವರೆಗಿನ OYO ಹೋಟೆಲ್ ಚೀಟಿಗಳು
* ಹಳೆಯ ಸಾಧನಗಳ ಮೇಲೆ ಹೆಚ್ಚುವರಿ ವಿನಿಮಯ ಮೌಲ್ಯದ ಬೋನಸ್ ಸ್ಮಾರ್ಟ್‌ಫೋನ್‌ಗಳಿಗೆ ಮಾತ್ರ ನೀಡಲಾಗುತ್ತದೆ