ನವದೆಹಲಿ :ಟಾಟಾ ಸಮೂಹ ಸಂಸ್ಥೆಯ ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್, ಎಬಿಜೆಎ ಇನ್ವೆಸ್ಟ್‌ಮೆಂಟ್ ಕೋ ಪಿಟಿಇ ಲಿಮಿಟೆಡ್, ಟಿಎಂಎಲ್ ಹೋಲ್ಡಿಂಗ್ಸ್ ಪಿಟಿಇ ಲಿಮಿಟೆಡ್ ಮತ್ತು ಜಾಗ್ವಾರ್ ಲ್ಯಾಂಡ್ ರೋವರ್ ಆಟೋಮೋಟಿವ್ ಪಿಎಲ್‌ಸಿಗೆ ಕ್ರೆಡಿಟ್ ವಾಚ್ ಜಾಗತಿಕ ಎಸ್&ಪಿ ಉತ್ತಮ ರೇಟಿಂಗ್ ನೀಡಿದೆ.
ಟಾಟಾ ಗ್ರೂಪ್ ಘಟಕಗಳು ಮತ್ತು ಹೋಲ್ಡಿಂಗ್ ಕಂಪನಿ ಟಾಟಾ ಸನ್ಸ್ ನಡುವಿನ ಸಂಬಂಧವನ್ನು ಕ್ರೆಡಿಟ್ ವಾಚ್ ಸಮರ್ಥವಾಗಿ ಮರು ಮೌಲ್ಯಮಾಪನ ಮಾಡಿರುವುದನ್ನು ಸೂಚಿಸುತ್ತದೆ. ಟಾಟಾ ಸನ್ಸ್‌ನಿಂದ ಅಸಾಧಾರಣ ಬೆಂಬಲ ಸಿಕ್ಕಿದೆ ಎಂದು ಕ್ರಿಡಿಟ್ ವಾಚ್ ಹೇಳಿಕೆಯಲ್ಲಿ ತಿಳಿಸಿದೆ.
ಎಸ್&ಪಿ, ಟಾಟಾ ಸನ್ಸ್‌ನ ಕ್ರೆಡಿಟ್ ಗುಣಮಟ್ಟವನ್ನು ಬಲವಾಗಿ ಹೂಡಿಕೆಯ ಗ್ರೇಡ್ ಎಂದು ಪರಿಗಣಿಸಿದೆ. ಇತ್ತೀಚಿನ ವರ್ಷಗಳಲ್ಲಿ ಟಾಟಾ ಸನ್ಸ್ ಮತ್ತು ಅದರ ಅಂಗಸಂಸ್ಥೆಗಳು ಮತ್ತು ಸಹವರ್ತಿಗಳು ಹೆಚ್ಚು ಒಗ್ಗಟ್ಟಾಗಿವೆ ಎಂದು ನಾವು ನಂಬುತ್ತೇವೆ. ಈ ಹಿಂದೆ, ನಾವು ಗುಂಪಿಗೆ ಪಟ್ಟಿ ಮಾಡದ ಹೂಡಿಕೆ ಹಿಡುವಳಿ ಕಂಪನಿಯಾಗಿ ಟಾಟಾ ಸನ್ಸ್ ಅನ್ನು ಪರಿಗಣಿಸಿದ್ದೆವು ಎಂದು ಹೇಳಿದೆ.
ಕ್ರೆಡಿಟ್ ವಾಚ್‌ಗೆ ಟಾಟಾ ಗ್ರೂಪ್‌ನ ಕಂಪನಿಗಳು ಅತಿ ಮುಖ್ಯವಾಗಿವೆ. ಟಾಟಾ ಸನ್ಸ್ ತನ್ನ ಕಾರ್ಯತಂತ್ರಗಳ ಮೂಲಕ ಕೆಳ ಮಟ್ಟದಿಂದ ಮಾಲೀಕತ್ವವನ್ನು ಬೆಳಸಿಕೊಂಡು ಬಂದಿದೆ. ನಾನು ಇದನ್ನು ಆಧುನಿಕ ಕಾರ್ಯತಂತ್ರಗಾರಿಕೆಯ ಕಂಪನಿ ಎಂದು ಪರಿಗಣಿಸಿದ್ದೇವೆ. ಹೀಗಾಗಿ, ಇದಕ್ಕೆ ಉತ್ತಮ ರೇಟಿಂಗ್ ನೀಡಿರುವುದಾಗಿ ತಿಳಿಸಿದೆ.
2019 ಮತ್ತು 2021ರ ನಡುವೆ, ಟಾಟಾ ಸನ್ಸ್ ಹಲವಾರು ಕಂಪನಿಗಳನ್ನು ತನ್ನ ಮಾಲೀಕತ್ವಕ್ಕೆ ಹೆಚ್ಚಿಸಿಕೊಂಡಿದೆ. 2019ರಲ್ಲಿ ಟಾಟಾ ಮೋಟರ್ಸ್ ಮತ್ತು ಟಾಟಾ ಪವರ್ಸ್ ಪ್ರಸ್ತುತ ಶೇ.46ರಷ್ಟು ಷೇರುಗಳನ್ನು ಹೊಂದಿದೆ. 2019ರಲ್ಲಿ ಕ್ರಮವಾಗಿ 35 ಹಾಗೂ 31 ರಿಂದ 46ಕ್ಕೆ ಹೆಚ್ಚಿಸಿಕೊಂಡಿದೆ.