ಮುಂಬೈ:ಅಮೆರಿಕನ್ ಡಾಲರ್‌ನ ಮೌಲ್ಯ ಕುಸಿತ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿನ ಚಂಚಲತೆಯ ಹಿನ್ನೆಲೆಯಲ್ಲಿ ಬುಧವಾರದ ಮಾರುಕಟ್ಟೆಯ ವ್ಯವಹಾರದ ಅವಧಿಯಲ್ಲಿ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 65 ಪೈಸೆ ಏರಿಕೆ ಕಂಡು 72.72 ರೂ.ಗೆ (ತಾತ್ಕಾಲಿಕ) ಕೊನೆಗೊಂಡಿತು.
ಇಂಟರ್ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಸ್ಥಳೀಯ ಯೂನಿಟ್ ಗ್ರೀನ್‌ಬ್ಯಾಕ್ ವಿರುದ್ಧ 73.26 ರೂ.ಗೆ ವಹಿವಾಟು ಆರಂಭಿಸಿತ್ತು. ದಿನದ ಮಧ್ಯಂತರ ಅವಧಿಯಲ್ಲಿ ಗರಿಷ್ಠ 72.71ಕ್ಕೆ ತಲುಪಿತ್ತು. ಅಂತಿಮವಾಗಿ ಅಮೆರಿಕನ್ ಕರೆನ್ಸಿಯ ವಿರುದ್ಧ 72.72 ರೂ.ಗೆ ಇಳಿಯಿತು. ಅದರ ಹಿಂದಿನ ಮುಕ್ತಾಯಕ್ಕಿಂತ 65 ಪೈಸೆ ಏರಿಕೆಯಾಗಿದೆ. ಮಂಗಳವಾರ ಅಮೆರಿಕದ ಕರೆನ್ಸಿಯ ವಿರುದ್ಧ ರೂಪಾಯಿ 73.37 ರೂ.ಗೆ ಇಳಿದಿತ್ತು.
ಸರ್ಕಾರಗಳಿಂದ ದೊಡ್ಡ ಉತ್ತೇಜಕ ಪ್ಯಾಕೇಜುಗಳು, ಕೇಂದ್ರ ಬ್ಯಾಂಕ್ಗಳಿಂದ ಸುಲಭ ಹಣಕಾಸು ನೀತಿಗಳು ಮತ್ತು ವ್ಯಾಕ್ಸಿನೇಷನ್ ಅಭಿಯಾನದ ಪ್ರಗತಿಯು ಆರ್ಥಿಕ ಬೆಳವಣಿಗೆ ಹೆಚ್ಚಿಸುತ್ತದೆ ಎಂಬ ಭರವಸೆಯ ಮೇಲೆ ಮಾರುಕಟ್ಟೆ ಭಾವನೆಗಳು ಸುಧಾರಿಸಿದೆ ಎಂದು ಶೇರ್‌ಖಾನ್‌ನ ಸಂಶೋಧನಾ ವಿಶ್ಲೇಷಕ ಸೈಫ್ ಮುಕಾಡಮ್ ಹೇಳಿದ್ದಾರೆ.