ಕರ್ನಾಟಕ

karnataka

ETV Bharat / business

ಅಮೆರಿಕ ಡಾಲರ್ ಎದುರು 104 ಪೈಸೆ ಕುಸಿದ ಭಾರತೀಯ ರೂಪಾಯಿ! - ಇಂದಿನ ರೂಪಾಯಿ ಮೌಲ್ಯ

ಅಮೆರಿಕದ ಕರೆನ್ಸಿಯ ವಿರುದ್ಧ ಗುರುವಾರ ರೂಪಾಯಿ 72.43 ರೂ.ಯಲ್ಲಿ ಕೊನೆಗೊಂಡಿತ್ತು. ಆರು ಕರೆನ್ಸಿಗಳ ಬಾಸ್ಕೆಟ್​​ನಲ್ಲಿ ಗ್ರೀನ್‌ಬ್ಯಾಕ್‌ ಮಾಪನಮದಲ್ಲಿ ಡಾಲರ್ ಸೂಚ್ಯಂಕ ಶೇ 0.43ರಷ್ಟು ಪ್ರಗತಿ ಸಾಧಿಸಿ 90.52ಕ್ಕೆ ತಲುಪಿದೆ.

Rupee
Rupee

By

Published : Feb 26, 2021, 5:34 PM IST

ಮುಂಬೈ:ದೇಶೀಯ ಷೇರುಗಳಲ್ಲಿ ಭಾರಿ ಮಾರಾಟದ ಒತ್ತಡ ಮತ್ತು ಸಾಗರೋತ್ತರ ಮಾರುಕಟ್ಟೆಯಲ್ಲಿ ಬಲವಾದ ಅಮೆರಿಕನ್ ಕರೆನ್ಸಿಯ ನಡೆ ಅನುಸರಿಸಿದ ಭಾರತೀಯ ಕರೆನ್ಸಿ ರುಪಾಯಿ, ಡಾಲರ್ ಎದುರು 104 ಪೈಸೆ ಧುಮುಕಿ 73.47 (ತಾತ್ಕಾಲಿಕ) ರೂ.ಗೆ ತಲುಪಿದೆ.

ಇಂಟರ್​ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಸ್ಥಳೀಯ ಘಟಕವು ಗ್ರೀನ್‌ಬ್ಯಾಕ್ ವಿರುದ್ಧ 72.43 ರೂ.ಗೆ ಪ್ರಾರಂಭವಾಯಿತು. ದಿನದ ಕನಿಷ್ಠ 73.51 ರೂ. ಮುಟ್ಟಲು ಮತ್ತಷ್ಟು ನೆಲೆ ಕಳೆದುಕೊಂಡಿತು. ಇದು ಅಂತಿಮವಾಗಿ ಅಮೆರಿಕನ್ ಕರೆನ್ಸಿಯ ವಿರುದ್ಧ 73.47 ರೂ.ಗೆ ಕೊನೆಗೊಂಡು, ಹಿಂದಿನ ಮುಕ್ತಾಯಕ್ಕಿಂತ 104 ಪೈಸೆಗಳ ಭಾರಿ ಕುಸಿತ ದಾಖಲಿಸಿತು.

ಅಮೆರಿಕದ ಕರೆನ್ಸಿಯ ವಿರುದ್ಧ ಗುರುವಾರ ರೂಪಾಯಿ 72.43 ರೂ.ಯಲ್ಲಿ ಕೊನೆಗೊಂಡಿತ್ತು. ಆರು ಕರೆನ್ಸಿಗಳ ಬಾಸ್ಕೆಟ್​​ನಲ್ಲಿ ಗ್ರೀನ್‌ಬ್ಯಾಕ್‌ ಮಾಪನಮದಲ್ಲಿ ಡಾಲರ್ ಸೂಚ್ಯಂಕ ಶೇ 0.43ರಷ್ಟು ಪ್ರಗತಿ ಸಾಧಿಸಿ 90.52ಕ್ಕೆ ತಲುಪಿದೆ.

ಇದನ್ನೂ ಓದಿ: ಕಣ್ಣಿಗೆ ಮಾಸ್ಕ್​ ಹಾಕಿಕೊಂಡು ರೈಲಲ್ಲಿ ನಿದ್ದೆಗೆ ಜಾರಿದ ಭೂಪ: ಆನಂದ್ ಮಹೀಂದ್ರಾ ಟ್ವೀಟ್ ವೈರಲ್​

ABOUT THE AUTHOR

...view details