ಮುಂಬೈ: ರಷ್ಯಾ - ಉಕ್ರೇನ್ ಸಂಘರ್ಷದಿಂದಾಗಿ ಜಾಗತಿಕವಾಗಿ ಭಾರಿ ಅಪಾಯಗಳು ತೀವ್ರಗೊಳ್ಳುತ್ತಿರುವುದರಿಂದ ಇಂದಿನ ಆರಂಭಿಕ ವಹಿವಾಟಿನಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ 81 ಪೈಸೆ ಕುಸಿತ ಕಂಡು 76.98ಕ್ಕೆ ತಲುಪಿದೆ.
ಎರಡು ದೇಶಗಳ ನಡುವಿನ ಉದ್ವಿಗ್ನತೆಯು ಕಚ್ಚಾ ತೈಲ ಬೆಲೆ ದಾಖಲೆಯ ಗರಿಷ್ಠ ಮಟ್ಟಕ್ಕೆ ಬಂದು ನಿಂತಿದೆ. ದೇಶೀಯ ಹಣದುಬ್ಬರ ಮತ್ತು ವ್ಯಾಪಕ ವ್ಯಾಪಾರ ಕೊರತೆಗಳ ಬಗ್ಗೆ ಆತಂಕ ಹೆಚ್ಚಿಸಿದೆ. ಇದಲ್ಲದೆ, ನಿರಂತರ ವಿದೇಶಿ ನಿಧಿಯ ಹೊರಹರಿವು ಮತ್ತು ದೇಶೀಯ ಷೇರುಗಳಲ್ಲಿನ ನೀರಸ ಪ್ರವೃತ್ತಿಯು ಹೂಡಿಕೆದಾರರನ್ನು ಚಿಂತೆಗೀಡು ಮಾಡಿದೆ.