ಮುಂಬೈ: ಅಮೆರಿಕದ ಡಾಲರ್ ಎದುರು ಸತತವಾಗಿ ಕುಸಿತ ಕಂಡಿದ್ದ ರೂಪಾಯಿ ಮೌಲ್ಯ ಮಂಗಳವಾರದ ವಹಿವಾಟಿನಲ್ಲಿ 17 ಪೈಸೆಯಷ್ಟು ಏರಿಕೆ ಕಂಡಿದೆ.
ಇಂದಿನ ವಹಿವಾಟಿನಲ್ಲಿ ದೇಶಿಯ ಷೇರುಗಳು ಸಕಾರಾತ್ಮಕವಾಗಿ ಕಂಡುಬಂದಿದ್ದರಿಂದ ರೂಪಾಯಿ ಮೌಲ್ಯ ಡಾಲರ್ ಎದುರು 17 ಪೈಸೆ ಚೇತರಿಸಿಕೊಂಡು 74.74ಕ್ಕೆ ತಲಿಪಿದೆ. ಈ ಹಿಂದೆ ರೂಪಾಯಿ ಮೌಲ್ಯ 74.95ರಷ್ಟಿತ್ತು.
ಕೊರೊನಾ ವೈರಸ್ ಲಸಿಕೆಯ ಭರವಸೆಯು ಭಾರತದ ರೂಪಾಯಿ ಮೌಲ್ಯವು ಮಂಗಳವಾರದಂದು ಎರಡು ವಾರಗಳ ಗರಿಷ್ಠ ಮಟ್ಟವನ್ನು ತಲುಪಿದೆ. ಜುಲೈ 6ರಂದು ಕೊನೆಯ ಬಾರಿಗೆ 74.92ರ ಸಮೀಪದಿಂದ 17 ಪೈಸೆಯಷ್ಟು ಹೆಚ್ಚಾಗಿದೆ.
ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯವು ಅಭಿವೃದ್ಧಿಪಡಿಸುತ್ತಿರುವ ಕೊರೊನಾ ವೈರಸ್ ಲಸಿಕೆ ಸುರಕ್ಷಿತವಾಗಿದೆ. ಮತ್ತು ಮಾನವನ ದೇಹದೊಳಗೆ ಬಲವಾದ ರೋಗನಿರೋಧಕ ಪ್ರತಿಕ್ರಿಯೆ ಉಂಟುಮಾಡುತ್ತಿದೆ ಎಂದು ವಿಜ್ಞಾನಿಗಳು ಮೊದಲ ಹಂತದ ಮಾನವ ಪ್ರಯೋಗಗಳ ಬಗ್ಗೆ ಸೋಮವಾರ ಪ್ರಕಟಿಸಿದರು. ಇದು ಜಾಗತಿಕ ಪೇಟೆಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಿತು.
ವಿದೇಶಿ ನಿಧಿಯ ಹೊರಹರಿವು ಮತ್ತು ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳು ದೇಶಿಯ ಷೇರುಗಳಲ್ಲಿ ಸಕಾರಾತ್ಮಕ ಆರಂಭದಿಂದಾಗಿ ರೂಪಾಯಿ ಮೌಲ್ಯದ ಏರಿಕೆಗೆ ಬೆಂಬಲವಾಗಿದೆ. ಸೋಮವಾರದ ಷೇರುಪೇಟೆಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು 1,709.97 ಕೋಟಿಯಷ್ಟು ಷೇರು ಖರೀದಿ ಮಾಡಿದ್ದಾರೆ. ಜಾಗತಿಕ ಕಚ್ಚಾ ತೈಲವು ಪ್ರತಿ ಬ್ಯಾರೆಲ್ ಮೇಲೆ ಶೇ 1.71ರಷ್ಟು ಏರಿಕೆಯಾಗಿ 44.02 ಡಾಲರ್ಗೆ ತಲುಪಿದೆ.