ಕರ್ನಾಟಕ

karnataka

ETV Bharat / business

6 ವರ್ಷಗಳ ಟ್ರೇಡಿಂಗ್​ನಲ್ಲಿ ಗರಿಷ್ಠ ಕುಸಿತದ ಮರುದಿನವೇ ಡಾಲರ್​ಗೆ ರೂಪಾಯಿ ಪಂಚ್​ - ಕರೆನ್ಸಿ ವಿನಿಮಯ ಮಾರುಕಟ್ಟೆ

ಸೋಮವಾರದಂದು ರೂಪಾಯಿ ಮೌಲ್ಯ 113 ಪೈಸೆ ಕುಸಿತ ಕಂಡು ಒಂದು ಡಾಲರ್​ಗೆ ₹ 70.80ಕ್ಕೆ ಇಳಿಕೆ ಆಗಿತ್ತು. ಇದು ಆರು ವರ್ಷಗಳ ವಹಿವಾಟಿನಲ್ಲಿ ದಿನವೊಂದರಲ್ಲೇ ರೂಪಾಯಿ ಗರಿಷ್ಠ ಕುಸಿತ ಇದಾಗಿತ್ತು. ಮಹಾ ಕುಸಿತದ ಮರುದಿನವೇ ರೂಪಾಯಿ ಮೌಲ್ಯದಲ್ಲಿ ಅಲ್ಪ ಚೇತರಿಕೆ ಕಂಡುಬಂದಿದೆ.

ಸಾಂದರ್ಭಿಕ ಚಿತ್ರ

By

Published : Aug 6, 2019, 6:02 PM IST

ಮುಂಬೈ:ಮಂಗಳವಾರದ ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿಯ ಮೌಲ್ಯ ಏರಿಕೆಯಾಗಿದೆ.

ದೇಶದ ಪೇಟೆಯಲ್ಲಿ ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಏರಿಳಿತದ ಮೇಲಾಟ, ಜಾಗತಿಕ ಷೇರುಪೇಟೆಗಳ ಮಂದಗತಿಯ ವಹಿವಾಟು, ಅಮೆರಿಕ- ಚೀನಾ ವಾಣಿಜ್ಯ ಸಮರ, ದೇಶಿಯ ಕಂಪನಿಗಳ ತ್ರೈಮಾಸಿಕ ವರಮಾನದಲ್ಲಿನ ಇಳಿಕೆಯಂತಹ ಬೆಳವಣಿಗೆಯಿಂದ ರೂಪಾಯಿ ಮೌಲ್ಯ ಕಳೆದ ವಾರದಿಂದ ಏರಿಳಿತವಾಗುತ್ತಿತ್ತು.

ಸೋಮವಾರದಂದು ರೂಪಾಯಿ ಮೌಲ್ಯ 113 ಪೈಸೆ ಕುಸಿತ ಕಂಡು ಒಂದು ಡಾಲರ್​ಗೆ ₹ 70.80ಕ್ಕೆ ಇಳಿಕೆ ಆಗಿತ್ತು. ಇದು ಆರು ವರ್ಷಗಳ ವಹಿವಾಟಿನಲ್ಲಿ ದಿನವೊಂದರಲ್ಲೇ ರೂಪಾಯಿಯ ಗರಿಷ್ಠ ಕುಸಿತ ಇದಾಗಿತ್ತು. ಮಹಾ ಕುಸಿತದ ಮರುದಿನವೇ ರೂಪಾಯಿ ಮೌಲ್ಯದಲ್ಲಿ ಅಲ್ಪ ಚೇತರಿಕೆ ಕಂಡುಬಂದಿದೆ.

ಇಂದು ಡಾಲರ್ ಎದುರು ರೂಪಾಯಿ 26 ಪೈಸೆ ಏರಿಕೆ ಕಂಡು 70.47ರಲ್ಲಿ ವಹಿವಾಟು ನಡೆಸುತ್ತಿದೆ. ದೇಶಿ ಮಾರುಕಟ್ಟೆಯ ಸಕಾರಾತ್ಮಕ ಆರಂಭ ರೂಪಾಯಿ ಚೇತರಿಕೆಗೆ ಬೆಂಬಲವಾಯಿತು. ಇದರ ಜೊತೆಗೆ ವಿದೇಶಿ ಬಂಡವಾಳದ ಹೊರಹರಿವು ಮತ್ತು ಕಚ್ಚಾ ತೈಲ ದರ ಏರಿಕೆ ಪೂರಕವಾಗಿತ್ತು. ಆರ್​ಬಿಐನ ವಿತ್ತೀಯ ನೀತಿ ಪರಾಮರ್ಶೆ ಸಭೆಯು ನಾಳೆ (ಬುಧವಾರ) ನಡೆಯಲಿದ್ದು, ಬಡ್ಡಿ ದರ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ABOUT THE AUTHOR

...view details