ಕರ್ನಾಟಕ

karnataka

ETV Bharat / business

ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 7 ಪೈಸೆ ಏರಿಕೆ - ಡಾಲರ್ ಎದುರು ರೂಪಾಯಿ ಮೌಲ್ಯ

ಇಂಟರ್​ಬ್ಯಾಂಕ್ ವಿದೇಶೀ ವಿನಿಮಯ ಮಾರುಕಟ್ಟೆಯಲ್ಲಿ ದೇಶೀಯ ಘಟಕವು ಡಾಲರ್ ವಿರುದ್ಧ 73.11 ರೂ.ಗೆ ಪ್ರಾರಂಭವಾಯಿತು. ಗ್ರೀನ್‌ಬ್ಯಾಕ್ ವಿರುದ್ಧ 73.10 ರೂ.ಗೆ ಏರಿದ್ದು, ಇದು ಹಿಂದಿನ ಕ್ಲೋಸ್‌ಗಿಂತ 7 ಪೈಸೆ ಏರಿಕೆ ದಾಖಲಿಸಿದೆ.

Rupee
ರೂಪಾಯಿ

By

Published : Jan 20, 2021, 12:26 PM IST

ಮುಂಬೈ:ಸಕಾರಾತ್ಮಕ ದೇಶೀಯ ಷೇರುಗಳು ಮತ್ತು ಸಾಗರೋತ್ತರ ಮಾರುಕಟ್ಟೆಯಲ್ಲಿ ಅಮೆರಿಕದ ಕರೆನ್ಸಿ ವಹಿವಾಟು ಕಡಿಮೆ ಆಗಿದ್ದರಿಂದ ಹೂಡಿಕೆದಾರರ ಮನೋಭಾವ ವೃದ್ಧಿಸಿದ್ದು, ಬುಧವಾರದ ಆರಂಭಿಕ ವಹಿವಾಟಿನಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 7 ಪೈಸೆ ಏರಿಕೆ ಕಂಡು 73.10 ರೂ.ಗೆ ತಲುಪಿದೆ.

ಇಂಟರ್​ಬ್ಯಾಂಕ್ ವಿದೇಶೀ ವಿನಿಮಯ ಮಾರುಕಟ್ಟೆಯಲ್ಲಿ ದೇಶೀಯ ಘಟಕವು ಡಾಲರ್ ವಿರುದ್ಧ 73.11 ರೂ.ಗೆ ಪ್ರಾರಂಭವಾಯಿತು. ಗ್ರೀನ್‌ಬ್ಯಾಕ್ ವಿರುದ್ಧ 73.10 ರೂ.ಗೆ ಏರಿದ್ದು, ಇದು ಹಿಂದಿನ ಕ್ಲೋಸ್‌ಗಿಂತ 7 ಪೈಸೆ ಏರಿಕೆ ದಾಖಲಿಸಿದೆ.

ಮಂಗಳವಾರ ಅಮೆರಿಕದ ಕರೆನ್ಸಿಯ ವಿರುದ್ಧ ರೂಪಾಯಿ 73.17 ರೂ.ಗೆ ಇಳಿದಿತ್ತು. ಆರು ಕರೆನ್ಸಿಗಳ ಬಾಸ್ಕೆಟ್​​ ವಿರುದ್ಧಗ್ರೀನ್‌ಬ್ಯಾಕ್‌ನ ಬಲವಾದ ಮಾಪನದ ಡಾಲರ್ ಸೂಚ್ಯಂಕವು ಶೇ 0.14ರಷ್ಟು ಕುಸಿದು 90.37ಕ್ಕೆ ತಲುಪಿದೆ.

ಇದನ್ನೂ ಓದಿ: ಚಿಲ್ಲರೆ ವಹಿವಾಟಿಗೆ ಬೆಂಬಲ ಅಗತ್ಯವಿದೆಯೇ? ಚಿಲ್ಲರೆ ವ್ಯಾಪಾರಿಗಳ ಬೇಡಿಕೆ ಏನು!?

ಯುಎಸ್ ಖಜಾನೆ ಕಾರ್ಯದರ್ಶಿ ನಾಮಿನಿ ಜಾನೆಟ್ ಯೆಲೆನ್ ಅವರ ದೊಡ್ಡ ಖರ್ಚಿನ ಮಾತುಕತೆಯ ನಂತರ ಅಮೆರಿಕ ಡಾಲರ್ ಸೂಚ್ಯಂಕವು ಈ ಬುಧವಾರ ಬೆಳಗ್ಗೆ ಏಷ್ಯನ್ ವ್ಯಾಪಾರದಲ್ಲಿ ಸ್ವಲ್ಪ ಕಡಿಮೆ ವಹಿವಾಟು ನಡೆಸುತ್ತಿದೆ ಎಂದು ರಿಲಯನ್ಸ್ ಸೆಕ್ಯುರಿಟೀಸ್ ಸಂಶೋಧನಾ ತನ್ನ ಟಿಪ್ಪಣಿಯಲ್ಲಿ ತಿಳಿಸಿದೆ.

ಮಾರುಕಟ್ಟೆಗಳು ಗುರುವಾರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮುಕ್ತ ಮಾರುಕಟ್ಟೆ ಕಾರ್ಯಾಚರಣೆಯನ್ನು ಎದುರು ನೋಡಲಿವೆ. ಆರ್‌ಬಿಐ ಗುರುವಾರ 100 ಬಿಲಿಯನ್ ರೂ.ಗಳ ಸಂಪೂರ್ಣ ಒಎಂಒ ನಡೆಸಲಿದ್ದು, ಇದರಲ್ಲಿ 2024, 2027 ಪೇಪರ್‌ಗಳನ್ನು ಬೆಂಚ್‌ಮಾರ್ಕ್ ಬಾಂಡ್‌ನೊಂದಿಗೆ ಖರೀದಿಸಲಿದೆ ಎಂದು ಹೇಳಿದೆ.

ಹೂಡಿಕೆದಾರರ ಗಮನವು ಅಮೆರಿಕದ ಅಧ್ಯಕ್ಷ ಜೋ ಬಿಡನ್ ಅವರ ಉದ್ಘಾಟನಾ ಸಮಾರಂಭದ ಮೇಲೆ ದೃಷ್ಟಿನೆಟ್ಟಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ದೇಶೀಯ ಈಕ್ವಿಟಿ ಮಾರುಕಟ್ಟೆ ಬೆಳಗ್ಗೆ 30 ಷೇರುಗಳ ಬಿಎಸ್‌ಇ ಮಾನದಂಡ ಸೆನ್ಸೆಕ್ಸ್ 185.11 ಅಂಕ ಏರಿಕೆ ಕಂಡು 49,583.40 ಅಂಕಗಳ ಮಟ್ಟದಲ್ಲೂ ನಿಫ್ಟಿ 58.30 ಅಂಕ ಏರಿಕೆ ಕಂಡು 14,579.45 ಅಂಕಗಳ ಮಟ್ಟದಲ್ಲೂ ವಹಿವಾಟು ನಿರತವಾಗಿದೆ.

ABOUT THE AUTHOR

...view details