ನವದೆಹಲಿ:ಆರ್ಬಿಐನಿಂದ ಕೇಂದ್ರಕ್ಕೆ ದೊರೆಯಲಿರುವ 1.76 ಲಕ್ಷ ಕೋಟಿ ರೂ. ನಿಧಿಯಿಂದಾಗಿ ದೇಶೀಯ ಆರ್ಥಿಕತೆಯಲ್ಲಿ ಸಕಾರಾತ್ಮಕ ಮಾರುಕಟ್ಟೆ ಪ್ರವೃತ್ತಿ ಉಂಟಾಗಿದ್ದು, ಡಾಲರ್ ಎದುರು ರೂಪಾಯಿ ಒಂದೇ ದಿನದಲ್ಲಿ ಗರಿಷ್ಠ ಏರಿಕೆ ದಾಖಲಿಸಿ ಐದು ತಿಂಗಳ ಹಿಂದಿನ ರೆಕಾರ್ಡ್ ಬ್ರೇಕ್ ಮಾಡಿದೆ.
ಡಾಲರ್ಗೆ ರೂಪಾಯಿ ಪಂಚ್; ಮುರಿಯಿತು 5 ತಿಂಗಳ ಹಿಂದಿನ ದಾಖಲೆ
ಸೋಮವಾರದ ಸಾಗರೋತ್ತರದ ಫಾರೆಕ್ಸ್ ಮಾರುಕಟ್ಟೆಯಲ್ಲಿ ಡಾಲರ್ ವಿರುದ್ಧ 36 ಪೈಸೆ ಕುಸಿದಿದೆ. ರೂಪಾಯಿ ಮೌಲ್ಯ 9 ತಿಂಗಳ ಹಿಂದಿನ ಕನಿಷ್ಠ ಮಟ್ಟಕ್ಕೆ ತಲುಪಿದೆ. ಆರ್ಬಿಐ ಕೇಂದ್ರಕ್ಕೆ 1.76 ಲಕ್ಷ ಕೋಟಿ ರೂ. ನೀಡುವಂತೆ ಸಂಬಂಧಿಸಿದ ಜಲನ್ ಸಮಿತಿ ಶಿಫಾರಸು ಹೊರ ಬೀಳುತ್ತಿದಂತೆ ರೂಪಾಯಿ ಮೌಲ್ಯದಲ್ಲಿ ಏರಿಕೆಯಾಗಿದೆ.
ಸೋಮವಾರದ ಸಾಗರೋತ್ತರದ ಫಾರೆಕ್ಸ್ ಮಾರುಕಟ್ಟೆಯಲ್ಲಿ ಡಾಲರ್ ವಿರುದ್ಧ 36 ಪೈಸೆ ಕುಸಿದ ರೂಪಾಯಿ ಒಂಬತ್ತು ತಿಂಗಳ ಹಿಂದಿನ ಕನಿಷ್ಠ ಮಟ್ಟಕ್ಕೆ ತಲುಪಿತ್ತು. ಆರ್ಬಿಐ ಕೇಂದ್ರಕ್ಕೆ 1.76 ಲಕ್ಷ ಕೋಟಿ ರೂ. ನೀಡುವಂತೆ ಜಲನ್ ಸಮಿತಿಯಲ್ಲಿ ಶಿಫಾರಸು ಹೊರ ಬೀಳುತ್ತಿದಂತೆ ರೂಪಾಯಿ ಮೌಲ್ಯದಲ್ಲಿ ಏರಿಕೆಯಾಗಿದೆ.
ಮಂಗಳವಾರದ ಫಾರೆಕ್ಸ್ ಮಾರುಕಟ್ಟೆ ಡಾಲರ್ ಎದುರು ರೂಪಾಯಿ 54 ಪೈಸೆಯಷ್ಟು ಮೌಲ್ಯ ಹೆಚ್ಚಿಸಿಕೊಂಡು ₹ 71.48ಕ್ಕೆ ಏರಿಕೆಯಾಗಿದೆ. ಈ ಮೂಲಕ ಒಂದೇ ದಿನದ ವಹಿವಾಟಿನಲ್ಲಿ ಹೆಚ್ಚಿನ ಏರಿಕೆ ದಾಖಲಿಸಿದ ಐದು ತಿಂಗಳ ಹಿಂದಿನ ದಾಖಲೆ ಅಳಿಸಿ ಹಾಕಿದೆ. 2019ರ ಮಾರ್ಚ್ 18ರಂದು 54 ಪೈಸೆ ಹೆಚ್ಚಳವಾಗಿ ₹ 71.48ರಲ್ಲಿ ವಹಿವಾಟು ನಡೆಸಿತ್ತು.