ಕರ್ನಾಟಕ

karnataka

ETV Bharat / business

ಅಬ್ಬರಿಸಿದ ಡಾಲರ್​... 76.87ಕ್ಕೆ ರೂಪಾಯಿ ತತ್ತರ: ಸಾರ್ವಕಾಲಿಕ ಗರಿಷ್ಠ ಕುಸಿತ

ಫಾರೆಕ್ಸ್​ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಕುಸಿತ ಮುಂದುವರಿದಿದ್ದು, ಗುರುವಾರದ ವಹಿವಾಟಿನಂದು ಅಮೆರಿಕದ ಡಾಲರ್‌ ವಿರುದ್ಧ 43 ಪೈಸೆ ಕುಸಿದು 76.87ಕ್ಕೆ ತಲುಪಿದೆ. ಕೋವಿಡ್ 19 ನಿಯಂತ್ರಿಸಲು ರಾಷ್ಟ್ರವ್ಯಾಪಿ ವಿಧಿಸಲಾಗಿರುವ ಲಾಕ್​ಡೌನ್ ಈ ಕುಸಿತಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ.

Rupee value
ರೂಪಾಯಿ ಮೌಲ್ಯ

By

Published : Apr 16, 2020, 4:20 PM IST

ಮುಂಬೈ: ಆರ್ಥಿಕ ಹಿಂಜರಿತದಿಂದ ಭಾರತೀಯ ಉದ್ಯಮ ವಲಯಗಳು ಕಂಗಾಲಾಗಿರುವಂತೆಯೇ ಇತ್ತ ಲಾಕ್​ಡೌನ್​ ಗಾಯದ ಮೇಲೆ ಬರೆ ಎಂಬಂತೆ ಆರ್ಥಿಕತೆಯನ್ನು ಇನ್ನಷ್ಟು ಪಾತಾಳಕ್ಕೆ ಕರೆದೊಯ್ಯುತ್ತಿದೆ. ಇಂದು ರೂಪಾಯಿ ಮೌಲ್ಯ ಸಾರ್ವಕಾಲಿಕ ಪ್ರಮಾಣದಲ್ಲಿ ಕುಸಿತ ದಾಖಲಿಸಿದೆ.

ಫಾರೆಕ್ಸ್​ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಕುಸಿತ ಮುಂದುವರಿದಿದ್ದು, ಗುರುವಾರದ ವಹಿವಾಟಿನಂದು ಅಮೆರಿಕದ ಡಾಲರ್‌ ವಿರುದ್ಧ 43 ಪೈಸೆ ಕುಸಿದು 76.87ಕ್ಕೆ ತಲುಪಿದೆ. ಕೋವಿಡ್ 19 ನಿಯಂತ್ರಿಸಲು ರಾಷ್ಟ್ರವ್ಯಾಪಿ ವಿಧಿಸಲಾಗಿರುವ ಲಾಕ್​ಡೌನ್ ಈ ಕುಸಿತಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ.

ಮಾರುಕಟ್ಟೆಗಳಲ್ಲಿನ ಅಪಾಯದ ದುರ್ಬಲಗೊಳ್ಳುತ್ತಿರುವ ಮಧ್ಯೆ ಹೂಡಿಕೆದಾರರು ಸುರಕ್ಷಿತ ತಾಣವಾದ ಗ್ರೀನ್‌ಬ್ಯಾಕ್‌ನತ್ತ ಮುಖಮಾಡಿದ್ದಾರೆ. ತತ್ಪರಿಣಾಮ ರೂಪಾಯಿ ಮೌಲ್ಯದಲ್ಲಿನ ದೌರ್ಬಲ್ಯವು ಅಮೆರಿಕದ ಡಾಲರ್ ವೃದ್ಧಿಯಾಗುವುದಕ್ಕೆ ಕಾರಣವಾಗಿದೆ ಎಂದು ವಿದೇಶಿ ವಿನಿಮಯ ವ್ಯಾಪಾರಿಗಳು ಹೇಳಿದ್ದಾರೆ.

ಇಂಟರ್​ ಬ್ಯಾಂಕ್ ವಿದೇಶಿ ವಿನಿಮಯ ಕೇಂದ್ರದಲ್ಲಿ ರೂಪಾಯಿ ಮೌಲ್ಯವು ಡಾಲರ್​ ವಿರುದ್ಧ 76.75 ರೂ.ಗೆ ದುರ್ಬಲಗೊಂಡಿತು. ಮಧ್ಯಂತರ ವಹಿವಾಟಿನಲ್ಲಿ ಗರಿಷ್ಠ 76.87 ರೂ.ಗೆ ತಲುಪಿತು. ಈ ಹಿಂದಿನ ವಹಿವಾಟಿನ ದಿನ ಕೊನೆಗೊಂಡಿದ್ದಕ್ಕಿಂತ ಇಂದು 43 ಪೈಸೆಯಷ್ಟು ಕುಸಿತ ದಾಖಲಿಸಿದೆ.

ABOUT THE AUTHOR

...view details